×
Ad

ಈಗ ಚುನಾವಣೆ ನಡೆದರೂ ಮೋದಿಯೇ ಪ್ರಧಾನಿ : ಸಮೀಕ್ಷೆ

Update: 2016-08-19 16:33 IST

ಹೊಸದಿಲ್ಲಿ, ಆ.ಸ19: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಸರಕಾರ ಹಲವಾರು ವಿವಾದಗಳಲ್ಲಿ ಸಿಲುಕಿದ್ದರೂ ಈಗ ಚುನಾವಣೆಗಳು ನಡೆದಿದ್ದೇ ಆದಲ್ಲಿ ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕಾರ್ವಿ ಇನ್ ಸೈಟ್ಸ್ ಸಹಯೋಗದಲ್ಲಿ ಇಂಡಿಯಾ ಟುಡೆ ‘ಮೂಡ್ ಆಫ್ ದಿ ನೇಷನ್’ಎಂಬ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.50 ರಷ್ಟು ಮಂದಿ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದಾರೆ. ಅತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೇವಲ 13 ಶೇ.ಮತಗಳು ದೊರೆತರೆ ಅವರ ನಂತರದ ಸ್ಥಾನಗಳು ಸೋನಿಯಾಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್‌ಗೆ ಹೋಗಿವೆ. ಈ ಸಮೀಕ್ಷೆಯಲ್ಲಿ ಕಂಡುಕೊಂಡಂತೆ ಈಗಿನ ಸರಕಾರದ ಆಡಳಿತವನ್ನೇ ಕೊನೆಗಾಣಿಸುವಂತಹ ಆಡಳಿತ ವಿರೋಧಿ ಅಲೆ ಈಗ ಅಷ್ಟೊಂದು ಕಾಣಿಸದಾಗಿದೆ.

ಈಗ ಚುನಾವಣೆಗಳು ನಡೆದರೆ ಎನ್‌ಡಿಎ 304 ಸ್ಥಾನಗಳನ್ನು ಪಡೆಯುವುದೆಂದೂ ಸಮೀಕ್ಷೆಯಿಂದ ತಿಳಿದು ಬಂದಿದೆ. 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 336 ಸ್ಥಾನಗಳನ್ನು ಪಡೆದಿತ್ತು.

ದೇಶದ ವಿಭಿನ್ನ ರಾಜ್ಯಗಳ ಮುಖ್ಯಮಂತ್ರಿಗಳ ಜನಪ್ರಿಯತೆ ರೇಟಿಂಗ್‌ನಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ 14 ಶೇ. ಮತಗಳನ್ನು ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಎರಡನೆ ಸ್ಥಾನದಲ್ಲಿದ್ದರೆ ಮೂರನೆ ಸ್ಥಾನ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೋಗಿದೆ.

ಆದರೆ, ತಮ್ಮದೇ ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರನ್ನು ಪ್ರಶ್ನಿಸಿದಾಗ ಕೇಜ್ರಿವಾಲ್ ಅವರ ಜನಪ್ರಿಯತೆ ಕುಗ್ಗಿರುವುದು ಕಂಡು ಬಂದಿದೆ. ಅತ್ತ ಕ್ರಮವಾಗಿ ತೆಲಂಗಾಣ, ಮಧ್ಯ ಪ್ರದೇಶ ಹಾಗೂ ಛತ್ತೀಸಗಢದ ಮುಖ್ಯಮಂತ್ರಿಗಳಾದ ಚಂದ್ರಶೇಖರ್ ರಾವ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಮಣ್ ಸಿಂಗ್ ಅವರು ತಮ್ಮ ತವರು ರಾಜ್ಯಗಳಲ್ಲಿ ಜನಪ್ರಿಯರಾಗಿದ್ದಾರೆಂದು ಈ ವರದಿಯಿಂದ ತಿಳಿಯುತ್ತದೆ. ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಅಗ್ರ ಸ್ಥಾನ ಬಿಹಾರದ ನಿತೀಶ್ ಕುಮಾರ್ ಅವರಿಗೆ ಸಲ್ಲುತ್ತದೆ.ಅವರ ಪರವಾಗಿ 87 ಶೇ. ಮತ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News