ಹಿಲರಿ ಕ್ಲಿಂಟನ್‌ ಜನಪ್ರಿಯತೆ ಇಳಿಮುಖ: ಸಮೀಕ್ಷಾ ವರದಿ

Update: 2016-08-20 05:31 GMT

ವಾಷಿಂಗ್ಟನ್,ಆಗಸ್ಟ್ 20: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಾರ್ಟಿಯ ಅಭ್ಯರ್ಥಿಯಾದ ಹಿಲರಿ ಕ್ಲಿಂಟನ್ ಜನಪ್ರಿಯತೆ ಇಳಿಮುಖಗೊಂಡಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ ಎಂದು ವರದಿಯಾಗಿದೆ.

ಪ್ಯೂರಿಸರ್ಚ್ ಸೆಂಟರ್ ಈ ತಿಂಗಳ ಮೊದಲನೆ ವಾರದಲ್ಲಿ ನಡೆಸಿದ ಸರ್ವೇಯಲ್ಲಿ ಶೇ.41ರಷ್ಟು ಅಮೆರಿಕನ್ನರು ಹಿಲರಿಗೆ ಬೆಂಬಲ ಸೂಚಿಸಿದ್ದಾರೆ.ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಟ್ರಂಪ್‌ಗೆ ಶೇ.37 ಮಂದಿ ಬೆಂಬಲ ಸೂಚಿಸಿದ್ದಾರೆ. ಶೇ.10ರಷ್ಟು ಮಂದಿ ಲಿಬರ್ಟರಿಯನ್ ಅಭ್ಯರ್ಥಿ ಜಾನ್ಸನ್‌ರನ್ನು ಬೆಂಬಲಿಸಿದ್ದಾರೆ.ಈ ವರ್ಷ ಆರಂಭದಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಶೇ.27ರಷ್ಟು ಮಂದಿ ಮಾತ್ರ ಟ್ರಂಪ್ ಅಧ್ಯಕ್ಷರಾಗಲಿದ್ದಾರೆಂದು ಅಭಿಮತ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.

ಹಿಂದಿನ ಸರ್ವೇಯಲ್ಲಿ ಶೇ.55ರಷ್ಟು ಮಂದಿ ಟ್ರಂಪ್ ಕೆಟ್ಟ ಅಧ್ಯಕ್ಷರಾಗಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಶೇ.31ರಷ್ಟು ಮಂದಿ ಹಿಲರಿ ಉತ್ತಮ ಅಧ್ಯಕ್ಷೆಯಾಗಲಿದ್ದಾರೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.ಒಂಬತ್ತು ವರ್ಷ ಹಿಂದಿದ್ದುದಕ್ಕಿಂತ ಈಗಿನದ್ದು ಕೆಟ್ಟ ಜೀವನವಾಗಿದೆ ಎಂದು ಟ್ರ ಂಪ್ ಬೆಂಬಲಿಗರು ಆರೋಪಿಸುತ್ತಿದ್ದಾರೆ.ಕಳೆದ ಅರ್ಧಶತಮಾನದಲ್ಲಿಯೇ ಅತ್ಯುತ್ತಮವಾದ ಜೀವನ ಪರಿಸರ ಈಗ ಅಮೆರಿಕದಲ್ಲಿದೆ ಎಂದು ಹಿಲರಿ ಬೆಂಬಲಿಗರು ಹೇಳುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News