ಡೊನಾಲ್ಡ್ ಟ್ರಂಪ್‌ರ ಮ್ಯಾನೇಜರ್ ರಾಜೀನಾಮೆ: ಪ್ರಚಾರ ರೀತಿಯಲ್ಲಿ ಬದಲಾವಣೆ ಸಾಧ್ಯತೆ

Update: 2016-08-20 10:23 GMT

ನಾರ್ತ್‌ಕರೋಲಿನಾ, ಆಗಸ್ಟ್ 20: ಪ್ರಚಾರದ ಶೈಲಿಯಲ್ಲಿ ಬದಲಾವಣೆಯ ಸೂಚನೆಯನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ನೀಡಿದ್ದಾರೆಂದು ವರದಿಯಾಗಿದೆ.

ಟ್ರಂಪ್‌ನ ಪ್ರಚಾರ ವಿಭಾಗದ ಮ್ಯಾನೇಜರ್ ಪಾಲ್ ಮ್ಯಾನ್‌ಪೋರ್ಟ್ ರಾಜೀನಾಮೆ ನೀಡಿದ್ದು ಶುಕ್ರವಾರ ನಾರ್ತ್‌ಕೆರೊಲಿನಾದಲ್ಲಿ ಆಫ್ರಿಕನ್ ವಂಶೀಯರನ್ನು ಆಕರ್ಷಿಸಲು ಟ್ರಂಪ್ ನಡೆಸಿದ ಪ್ರಯತ್ನ ಗಮನಾರ್ಹವಾಗಿತ್ತು ಎಂದು ವರದಿ ತಿಳಿಸಿದೆ.

ಮ್ಯಾನ್‌ಪೋರ್ಟ್‌ರ ಚಟುವಟಿಕೆಗಳು ಟ್ರಂಪ್‌ಗೆ ದೋಷಕರವಾಗಿದೆ ಎಂದು ರಿಪಬ್ಲಿಕನ್ ಪಾರ್ಟಿಯಿಂದಲೇ ಅಪಸ್ವರ ಹುಟ್ಟಿಕೊಂಡಿತ್ತು. ಹಾಗಾಗಿ ಅವರು ರಾಜಿನಾಮೆ ನೀಡಬೇಕಾಯಿತೆನ್ನಲಾಗಿದೆ.

ಟ್ರಂಪ್ ಪ್ರಚಾರ ಶೈಲಿಯನ್ನು ಟೀಕಿಸಿ ಕೆಲವು ಲೇಖನಗಳು ಪ್ರಕಟವಾಗಿದ್ದವು. ಕೆಲವುರಷ್ಯನ್- ಉಕ್ರೇನ್ ಕಂಪೆನಿಗಳು ಹಾಗೂ ವ್ಯಕ್ತಿಗಳೊಂದಿಗೆ ಮ್ಯಾನ್‌ಪೋರ್ಟ್‌ಗಿರುವ ವ್ಯವಹಾರಿಕ ಸಂಬಂಧಗಳು ಕೂಡಾ ಟ್ರಂಪ್ ಕ್ಯಾಂಪ್‌ನಿಂದ ಅವರು ಹೊರಬೀಳಲು ಕಾರಣವಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ಬರೆದಿದೆ.

ಟ್ರಂಪ್‌ರ ಪ್ರಚಾರ ರೀತಿಯಲ್ಲಿ ನಿರ್ಣಾಯಕ ಬದಲಾವಣೆ ಶುಕ್ರವಾರದ ಅವರ ಭಾಷಣದಲ್ಲಿ ಗೋಚರಿಸಿದೆ ಎಂದು ರಾಜಕೀಯ ವಿಶ್ಲೇಷಕರು ಬೆಟ್ಟು ಮಾಡಿದ್ದಾರೆಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News