×
Ad

ರೇಡಿಯೋ ಕೇಳಿ ಕುರ್ ಆನ್ ಕಂಠಪಾಠ ಮಾಡಿದ 5 ವರ್ಷದ ಅಂಧ ಬಾಲಕ

Update: 2016-08-20 18:31 IST

ಜನ್ಮತಃ ದೃಷ್ಟಿಚೇತನನಾದ ಐದು ವರ್ಷ ಪ್ರಾಯದ ಹುಸೈನ್ ಮುಹಮ್ಮದ್ ತಾಹಿರ್ ದೈಹಿಕವಾಗಿ ಸಮರ್ಥರಾಗಿದ್ದರೂ ಅಪರೂಪದ ಸಾಧನೆ ಮಾಡಿದ್ದಾರೆ. ಈ ಬಾಲಕ ಕೇವಲ ರೇಡಿಯೋ ಕೇಳಿಯೇ ಪವಿತ್ರ ಕುರಾನ್ ಕಂಠಪಾಠ ಮಾಡಿದ್ದಾನೆ.

ಬರ್ಮಾ ಮೂಲದ ಈ ಬಾಲಕನ ಕತೆ ಜಿದ್ದಾದಲ್ಲಿ ಆರಂಭವಾಗಿದೆ. ಮಗ ಟಿವಿ ನೋಡಲು ಸಾಧ್ಯವಿಲ್ಲ ಎಂದುಕೊಂಡು ತಂದೆ ಹುಸೈನ್ ಗೆ ರೇಡಿಯೋ ತಂದುಕೊಟ್ಟಿದ್ದರು. ರೇಡಿಯೋದ ಫ್ರೀಕ್ವೆನ್ಸಿಯನ್ನು ತಂದೆ 24/7 ಗಂಟೆ ಕುರಾನ್ ಪಠಿಸುವ ಸ್ಟೇಷನಿಗೆ ಇಡುವ ಮೂಲಕ ಮಗ ಕುರಾನ್ ಪಾಠವನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಮಾಡಿದ್ದರು. “ಮಗ ರೇಡಿಯೋದಲ್ಲಿ ಕುರಾನ್ ಕೇಳಿ ಅದನ್ನು ಕಂಠಪಾಠ ಮಾಡಿಕೊಳ್ಳುತ್ತಾನೆಂದು ನಾನು ಯೋಚಿಸಿಯೇ ಇರಲಿಲ್ಲ” ಎನ್ನುತ್ತಾರೆ ತಂದೆ ಮುಹಮ್ಮದ್ ತಾಹಿರ್.

ಸುಮಾರು ಮೂರು ವರ್ಷಗಳ ಕಾಲ ಹುಸೈನ್ ರೇಡಿಯೊ ಮೂಲಕ ಕುರಾನ್ ಕಂಠಪಾಠ ಮಾಡುತ್ತಿದ್ದದ್ದು ತಾಹಿರ್ ಗೆ ತಿಳಿದೇ ಇರಲಿಲ್ಲ. ಅವರು ಜಿದ್ದಾದಿಂದ ಮದೀನಾಗೆ ನಿವಾಸ ಬದಲಿಸಿದ ಮೇಲೆ ಬಾಲಕ ತನ್ನನ್ನು ಪ್ರವಾದಿಯ ಮಸೀದಿಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದ. ಸೂರಾ ಅಲ್ ಬಖಾರಾದ ಕೆಲವು ಸಾಲುಗಳನ್ನು ಕಂಠ ಪಾಠ ಮಾಡಿದರೆ ಮಸೀದಿ ತೋರಿಸುವುದಾಗಿ ತಂದೆ ಹೇಳಿದ್ದರು. ಬಾಲಕ ಪೂರ್ಣ ಸೂರಾ ಅನ್ನೇ ಹೇಳಿದ್ದನ್ನು ಕಂಡು ತಂದೆಗೆ ಅಚ್ಚರಿಯಾಗಿತ್ತು. ಬಾಲಕ ಪೂರ್ಣವಾಗಿ ಪವಿತ್ರ ಕುರಾನ್ ಕಂಠ ಪಾಠ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ತಾಹಿರ್ ಹಲವು ಅಧ್ಯಾಪಕರು ಮತ್ತು ಕುರಾನ್ ಕಂಠ ಪಾಠ ಮಾಡಿರುವ ವ್ಯಕ್ತಿಗಳ ಬಳಿಗೆ ಆತನನ್ನು ಕೊಂಡೊಯ್ದರು. ಅವರೆಲ್ಲರೂ ಹುಸೈನ್ ಸಾಧನೆಯನ್ನು ದೃಢಪಡಿಸಿದರು. ನೆನಪಿಸಿಕೊಳ್ಳುವಲ್ಲಿ ಕೆಲವು ಪಾಠಗಳಷ್ಟೇ ಆತನಿಗೆ ಅಗತ್ಯವಿದೆ ಎಂದು ಪರಿಣಿತರು ಹೇಳಿದ್ದಾರೆ.

ಈಗ ಹುಸೈನ್ ರನ್ನು ದೃಷ್ಟಿಚೇತನ ಮಕ್ಕಳಿಗಾಗಿ ಪ್ರವಾದಿಯ ಮಸೀದಿಯಲ್ಲಿ ಕುರಾನ್ ನೆನಪಿಸಿಕೊಳ್ಳಲು ಇರುವ ವಲಯದಲ್ಲಿ ದಾಖಲಾತಿ ಮಾಡಿಕೊಳ್ಳಲಾಗಿದೆ. “ದೃಷ್ಟಿಚೇತನನಾಗಿ ಮತ್ತು ಕೈಯಲ್ಲಿ ಕೆಲವು ವಿಕಲತೆ ಇದ್ದು ಹುಟ್ಟಿ ವರ್ಷಗಳಿಂದ ಬಾಲಕ ಎದುರಿಸಿರುವ ಎಲ್ಲಾ ಕಷ್ಟಗಳು ಮರೆಯುವುದಕ್ಕೆ ಇದು ನೆರವಾಗಿದೆ” ಎನ್ನುತ್ತಾರೆ ತಾಹಿರ್.

ಕೃಪೆ: http://www.arabnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News