×
Ad

ಶೇ.10ರಷ್ಟು ಹಜ್ ಯಾತ್ರಿಕರಿಂದ ಆನ್‌ಲೈನ್ ಅರ್ಜಿಗಳ ಸಲ್ಲಿಕೆ: ನಕ್ವಿ

Update: 2016-08-20 19:57 IST

ಮುಂಬೈ,ಆ.20: ಈ ವರ್ಷ ಒಟ್ಟು ಹಜ್ ಯಾತ್ರಿಕರ ಪೈಕಿ ಶೇ.10ರಷ್ಟು ಜನರು ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದು, ಮುಂದಿನ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲೂ ಈ ಪ್ರವೃತ್ತಿಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ (ಸ್ವತಂತ್ರ ಹೊಣೆ) ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಇಲ್ಲಿ ಹೇಳಿದರು.

ಶುಕ್ರವಾರ ಹಜ್ ಭವನದಲ್ಲಿ ಹಜ್ ಯಾತ್ರೆಗೆ ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪುನರ್‌ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಹಜ್ ಯಾತ್ರೆಯ ವ್ಯವಸ್ಥೆಗಳು,ಸೌಲಭ್ಯಗಳು ಮತ್ತು ಯಾತ್ರಿಗಳ ಸುರಕ್ಷತೆ ಕುರಿತಂತೆ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಮತ್ತು ಇತರ ಸಂಬಂಧಿತ ಇಲಾಖೆಗಳು ಗಂಭೀರವಾಗಿ ಪರಿಗಣಿಸಿವೆ ಎಂದರು. ಈ ವರ್ಷ ಸುಮಾರು 1.3 ಲಕ್ಷ ಭಾರತೀಯರು ಹಜ್ ಯಾತ್ರೆಗೆ ತೆರಳುತ್ತಿದ್ದಾರೆ.

ಹಜ್ ಯಾತ್ರಿಗಳಿಗಾಗಿ ಏರ್ಪಡಿಸಲಾದ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ಅವರು ಭಾರೀ ಸಂಖ್ಯೆಯಲ್ಲಿದ್ದ ಯಾತ್ರಿಗಳನ್ನು ಸ್ವಾಗತಿಸಿ,ಅವರಿಗೆ ಶುಭಪ್ರಯಾಣವನ್ನು ಕೋರಿದರು.

ಆ.27ರಿಂದ ಈ ವರ್ಷದ ಹಜ್‌ಯಾತ್ರೆಗಾಗಿ ಮುಂಬೈನಿಂದ ಸುಮಾರು 4,500 ಜನರು ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News