4-100 ಮೀ.ರಿಲೇ: ಅಮೆರಿಕ ತಂಡಕ್ಕೆ ಚಿನ್ನ
Update: 2016-08-20 23:12 IST
ರಿಯೋ ಡಿಜನೈರೊ, ಆ.20: ಹಾಲಿ ಚಾಂಪಿಯನ್ ಅವೆುರಿಕ ತಂಡ ಮಹಿಳೆಯರ ಒಲಿಂಪಿಕ್ಸ್ 4-100 ಮೀ. ರಿಲೇ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಅಲಿಸನ್ ಫೆಲಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಐದು ಚಿನ್ನದ ಪದಕಗಳನ್ನು ಸಂಪಾದಿಸಿದ ಮೊದಲ ಮಹಿಳಾ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾದರು.
ಟಿಯಾನಾ ಬಾರ್ಟೊಲೆಟ್ಟಾ, ಫೆಲಿಕ್ಸ್, ಗಾರ್ಡ್ನರ್ ಹಾಗು ಟಾರಿ ಬೊಲಿ ಅವರನ್ನೊಳಗೊಂಡ ಅಮೆರಿಕ ತಂಡ ಎರಡನೆ ಅತ್ಯಂತ ವೇಗದಲ್ಲಿ(41.01ಸೆಕೆಂಡ್) ಗುರಿ ತಲುಪಿ ಮೊದಲ ಸ್ಥಾನ ಪಡೆಯಿತು.
ಇದೇ ತಂಡ ಲಂಡನ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆ ವೇಗದಲ್ಲಿ ಗುರಿ ತಲುಪಿದ ಸಾಧನೆ ಮಾಡಿತ್ತು. ಸ್ಪರ್ಧೆಯಲ್ಲಿ ಜಮೈಕಾ(41.36 ಸೆ.)ಹಾಗೂ ಬ್ರಿಟನ್(41.77 ಸೆ.) ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದಿವೆ. ಬ್ರಿಟನ್ 1984ರ ಬಳಿಕ ಮೊದಲ ಬಾರಿ ಕಂಚಿನ ಪದಕ ಗೆದ್ದುಕೊಂಡಿತು