×
Ad

ಈ ನಗರಗಳಲ್ಲಿ ಶಾಂತಿಯಿಂದ ಜೀವನ ನಡೆಸುವುದು ಸಾಧ್ಯವೇ ಇಲ್ಲ

Update: 2016-08-20 23:35 IST

ಜಗತ್ತಿನ ಕೆಲವು ಪ್ರಮುಖ ನಗರಗಳು ಹೆಚ್ಚಾಗುತ್ತಿರುವ ರಾಜಕೀಯ ಮತ್ತು ಸಾಮಾಜಿಕ ಅಶಾಂತಿಯಿಂದಾಗಿ ಮತ್ತು ಭಯೋತ್ಪಾದನೆಯಿಂದಾಗಿ ಜೀವನ ನಡೆಸಲು ದುಸ್ತರವಾಗುವ ಸ್ಥಳಗಳಾಗುತ್ತಿವೆ. ಪ್ಯಾರಿಸ್ ಮತ್ತು ಬ್ರುಸೆಲ್ಸ್ ದಾಳಿ ಹಿನ್ನೆಲೆಯಲ್ಲಿ ಇಕಾನಮಿಕ್ ಇಂಟೆಲಿಜೆನ್ಸಿ ಯುನಿಟ್ ವರದಿಯು ಪಶ್ಚಿಮ ಯುರೋಪಿನ ಇಂತಹ 10 ನಗರಗಳನ್ನು ಪಟ್ಟಿ ಮಾಡಿದೆ.

9. ಡೌಯಾಲ, ಕ್ಯಾಮರೂನ್

ಆರೋಗ್ಯಸೇವೆ, ಶಿಕ್ಷಣ, ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಹಾಗೂ ಪರಿಸರದ ನಿಟ್ಟಿನಲ್ಲೂ ಅತೀ ಕೆಳ ಕ್ರಮಾಂಕ ಪಡೆದಿರುವ ಈ ಆಫ್ರಿಕನ್ ನಗರ ಜನರು ನೆಲೆಸಲು ಅಸಾಧ್ಯವಾಗಿ ಪರಿಣಮಿಸಿರುವುದರಲ್ಲಿ ಅಚ್ಚರಿಯಿಲ್ಲ. ಆದರೆ ಹೆಚ್ಚಿನ ಸ್ಥಿರತೆಯಿಂದಾಗಿ ಇದು ಕ್ರಮಾಂಕದಲ್ಲಿ ಇನ್ನೂ ಕೆಳಗೆ ಇಳಿದಿಲ್ಲ.

8. ಹರಾರೆ, ಜಿಂಬಾಬ್ವೆ

ಆರೋಗ್ಯಸೇವೆಯಲ್ಲಿ ಅತೀ ಕೆಟ್ಟ ಸ್ಥಿತಿಯೇ ಇದನ್ನು ಜೀವನ ನಡೆಸಲು ಸಾಧ್ಯವಿಲ್ಲದ ನಗರವಾಗಿಸಿದೆ. ಮೂಲಸೌರ್ಕಯವೂ ಅಷ್ಟಕ್ಕಷ್ಟೇ ಇದೆ. ಸಾಮಾಜಿಕ ಅಶಾಂತಿಯೂ ಇದೆ. ಆದರೆ ಕಳೆದ ಐದು ವರ್ಷಗಳಲ್ಲಿ ಉತ್ತಮ ಪ್ರಗತಿ ತೋರಿಸಿದ ನಗರವೂ ಇದಾಗಿದೆ.

7. ಕರಾಚಿ, ಪಾಕಿಸ್ತಾನ

ಸ್ಥೀರತೆಯಲ್ಲಿ ಅತೀ ಕಡಿಮೆ ಅಂಕಗಳಿಸಿದೆ. ಸಂಸ್ಕೃತಿ ಮತ್ತು ಪರಿಸರದ ವಿಷಯದಲ್ಲೂ ದುರ್ಬಲವಾಗಿದೆ. ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿದ ಕಾರಣ ಸ್ವಲ್ಪ ಮೇಲಿನ ಸ್ಥಾನದಲ್ಲಿದೆ.

6. ಅಲ್ಜೀರಸ್, ಅಲ್ಜೀರಿಯ

ಈ ನಗರ ಕರಾಚಿ ಜೊತೆಗೂಡಿ ಆರನೇ ಸ್ಥಾನ ಪಡೆದಿದೆ. ಒಟ್ಟಾರೆ ಕ್ರಮಾಂಕವು ಸ್ಥಿರತೆ, ಮೂಲಸೌಕರ್ಯ, ಆರೋಗ್ಯಸೇವೆ ಮತ್ತು ಶಿಕ್ಷಣದ ಕೊರತೆಯಿಂದ ಬಂದಿದೆ.

5. ಪೋರ್ಟ್ ಮೊರೆಸ್ಚೈ, ಪಪುವಾ ನ್ಯೂ ಗಿನಿಯಾ

ನಗರವು ಸಮೀಕ್ಷೆಯಲ್ಲಿ ಅತೀ ಕಡಿಮೆ ಅಂಕಗಳಿಸಿದೆ. ರಾಜಕೀಯ ಮತ್ತು ಸಾಮಾಜಿಕ ಅಶಾಂತಿ ಇಲ್ಲಿ ಮುಂದುವರಿದಿದೆ. ಆರೋಗ್ಯಸೇವೆ ಜಗತ್ತಿನಲ್ಲೇ ಅತೀ ಕಳಪೆಯಾಗಿರುವ ನಗರಗಳಲ್ಲಿ ಒಂದಾಗಿದೆ.

4. ಢಾಕಾ, ಬಾಂಗ್ಲಾದೇಶ

ಭಯೋತ್ಪಾದನೆಯ ಹಿಂಸಾ ಕೃತ್ಯಗಳ ಕಾರಣ ಈ ನಗರ ಕೆಳ ಕ್ರಮಾಂಕದಲ್ಲಿದೆ. ಮೂಲ ಸೌಕರ್ಯದಲ್ಲೂ ಅತೀ ಕಳಪೆಮಟ್ಟದಲ್ಲಿದೆ.

3. ಲಾಗೋಸ್, ನೈಜೀರಿಯ

ಸ್ಥಿರತೆಯಲ್ಲಿ ಅತೀ ಕಳಪೆಯಾಗಿದೆ. ಬೋಕೋ ಹರಾಂನಂತಹ ಉಗ್ರರ ನಿರಂತರ ಭಯ ಕಾಡುವ ಪ್ರದೇಶವಿದು. ನೈಜೀರಿಯದ ಅತೀ ದೊಡ್ಡ ನಗರವಾದರೂ ಜೀವನ ಇಲ್ಲಿ ದುಸ್ಸಾಃಧ್ಯ.

2. ಟ್ರಿಪೊಲಿ, ಲಿಬಿಯಾ

ಶತ್ರುತ್ವ ಹೆಚ್ಚಾಗಿರುವುದು ಈ ನಗರದಲ್ಲಿ ಜೀವನ ನಡೆಸಲು ಕಷ್ಟದ ಸ್ಥಿತಿ ನಿರ್ಮಿಸಿದೆ. ಇಸ್ಲಾಮಿಕ್ ಸ್ಟೇಟ್ ಇಲ್ಲಿನ ದೊಡ್ಡ ಬೆದರಿಕೆ.

1. ಡಮಾಸ್ಕಸ್, ಸಿರಿಯಾ

ವರ್ಷಗಳ ಹಿಂದೆ ಈ ನಗರ ಬಹಳ ಸ್ಥಿರವಾಗಿತ್ತು. ಆದರೆ ಶಸ್ತ್ರಾಸ್ತ್ರ ಹೋರಾಟ ಆರಂಭವಾಗಿ ಜೀವನ ನಡೆಸಲು ಸಾಧ್ಯವಿಲ್ಲದ ನಗರಗಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸಂಘರ್ಷವೇ ಈ ನಗರವನ್ನು ಕಳಪೆ ಸ್ಥಾನಕ್ಕೆ ದೂಡಿದೆ.

ಕೃಪೆ: www.independent.co.uk

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News