ಸೆ.2ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೋಲ್ ಇಂಡಿಯಾ ಕಾರ್ಮಿಕರ ಕರೆ

Update: 2016-08-20 18:20 GMT

ಹೊಸದಿಲ್ಲಿ,ಆ.20: ಕಲ್ಲಿದ್ದಲು ಕ್ಷೇತ್ರದಲ್ಲಿ ಇನ್ನಷ್ಟು ಹೂಡಿಕೆ ಹಿಂದೆಗೆತ ಮತ್ತು ವ್ಯೆಹಾತ್ಮಕ ಮಾರಾಟವನ್ನು ಪ್ರತಿಭಟಿಸಿ ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾದ ನೌಕರರು ಸೆ.2ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲಿದ್ದಾರೆ.

ಸೆ.2ರಂದು ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನಮಗೆ ಲಭಿಸಿದೆ. ಸಂಧಾನ ಪ್ರಕ್ರಿಯೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕೋಲ್ ಇಂಡಿಯಾ ತಿಳಿಸಿದೆ. ನೌಕರರು ಮುಷ್ಕರದಲ್ಲಿ ತೊಡಗಿದರೆ ಅದು ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News