ರಾಷ್ಟ್ರೀಯತೆಯೆಂದರೆ ಹಿಂದೂ ಕೋಮುವಾದವಲ್ಲ: ರಾಮ್ ಪುನಿಯಾನಿ

Update: 2016-08-21 05:59 GMT

ಹೊಸದಿಲ್ಲಿ,ಆಗಸ್ಟ್ 21: ಹಿಂದೂ ಕೋಮುವಾದಿಗಳ ವಾದ ಮತ್ತು ಕೃತ್ಯಗಳು ರಾಷ್ಟ್ರೀಯತೆಯನ್ನು ದುರ್ವ್ಯಾಖ್ಯಾನಿಸುತ್ತಿದೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ರಾಮ್‌ಪುನಿಯಾನಿ ಹೇಳಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ಇದರ ಶಾಂತಿ- ಮಾನವೀಯತೆ ಎಂಬ ಅಭಿಯಾನವನ್ನು ಉದ್ಘಾಟಿಸಿ ಮಾತಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹಿಂದೂಗಳು ಬಹುಸಂಖ್ಯಾತರಿದ್ದಾರೆ ಎಂದು ಹಿಂದೂ ಕೋಮುವಾದ ದೇಶದ ರಾಷ್ಟ್ರೀಯತೆಯಾಗಿ ಪರಿವರ್ತನೆ ಯಾಗುವುದಿಲ್ಲ ಎಂದು ಪುನಿಯಾನಿ ಹೇಳಿದರು. ಎಲ್ಲರೀತಿಯ ಕೋಮುವಾದಗಳು ದೇಶಕ್ಕೆ ಅಪಾಯಕಾರಿಯಾಗಿದೆ. ಅದನ್ನು ಪ್ರತಿರೋಧಿಸಿ ವಿಫಲಗೊಳಿಸಬೇಕಾಗಿದೆ. ಗೋರಕ್ಷೆಯ ಹೆಸರಿನಲ್ಲಿ ನಡೆಯುತ್ತಿರುವ ಕೋಲಾಹಲಗಳು ಪ್ಯಾಶಿಸ್ಟರ ರಾಜಕೀಯ ಅಸ್ತ್ರವಾಗಿದೆ. ದೇಶಾದ್ಯಂತ ಮುಸ್ಲಿಂ, ಕ್ರೈಸ್ತ, ಅಲ್ಪಸಂಖ್ಯಾತರ ವಿರುದ್ಧ ಧಾರಾಳ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ನಡುವೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸಬೇಕಾದ ಅಗತ್ಯವಿದೆ ಎಂದು ಪುನಿಯಾನಿ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News