×
Ad

ಕಾಶ್ಮೀರದ ಕುರಿತು ಒಐಸಿ ಆತಂಕ ವ್ಯಕ್ತಪಡಿಸಿದೆ !: ಪಾಕಿಸ್ತಾನದ ಹೇಳಿಕೆ

Update: 2016-08-21 16:32 IST

ಇಸ್ಲಾಮಾಬಾದ್,ಆಗಸ್ಟ್ 21: ಕಾಶ್ಮೀರದ ಪರಿಸ್ಥಿತಿಯ ಕುರಿತು ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೊಆಪರೇಶನ್(ಒಐಸಿ) ತನ್ನ ಆತಂಕವನ್ನು ವ್ಯಕ್ತಪಡಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ ಎಂದು ವರದಿಯಾಗಿದೆ. ಕಾಶ್ಮೀರದ ಜನತೆಗೆ ಅವರ ಸ್ವಯಮಾಡಳಿತ ಹಕ್ಕನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಬೆಂಬಲ ನೀಡುವ ಭರವಸೆಯನ್ನು ಒಐಸಿ ಪ್ರಧಾನಕಾರ್ಯದರ್ಶಿ ಜನರಲ್ ಇಯಾದ್ ಅಮೀರ್ ಮದನಿ ನೀಡಿದ್ದಾರೆ ಎಂದು ಪಾಕಿಸ್ತಾನ ವಿದೇಶ ಸಚಿವಾಲಯದ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮದನಿ, ಕಾಶ್ಮೀರ ಸಮಸ್ಯೆಕುರಿತು ಚರ್ಚಿಸಲಿಕ್ಕಾಗಿ ಸಂದರ್ಶನ ನೀಡಿದ್ದರು. ಅವರುಮತ್ತು ಪ್ರಧಾನಮಂತ್ರಿಯ ಸಲಹೆಗಾರ ಸರ್ತಾಜ್ ಅಝೀಝ್ ಕಾಶ್ಮೀರದ ಸ್ಥಿತಿಗತಿಯ ಕುರಿತು ಚರ್ಚಿಸಿದರೆಂದು ಪಾಕಿಸ್ತಾನದ ವಿದೇಶ ಸಚಿವಾಲಯದ ಕಚೇರಿ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News