ಕೋಟ್ಯಂತರ ಮಂದಿಯ ಕಣ್ಣಲ್ಲಿ ನೀರು ತರಿಸಿದ್ದ ಬಾಲಕನ ಸಹೋದರ ಮೃತ್ಯು

Update: 2016-08-21 11:04 GMT

ಅಮ್ಮನ್, ಜೋರ್ಡಾನ್, ಆ.21: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಭಾವಶೂನ್ಯ, ರಕ್ತಸಿಕ್ತ ಹಾಗೂ ಧೂಳು ಆವರಿಸಿದ ಸಿರಿಯಾದ ಗಾಯಾಳು ಬಾಲಕ ಒಮ್ರಾನ್ ದಕ್‌ನೀಶ್ ಸಹೋದರ ಸಮೀಪದ ಅಲೆಪ್ಪೊದಲ್ಲಿರುವ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾನೆ.

ಅಲಿ ದಕ್‌ನೀಶ್ ಎಂಬ ಹತ್ತು ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಅಲೆಪ್ಪೊ ಮಾಧ್ಯಮ ಕೇಂದ್ರದ ನಿರ್ದೇಶಕ ಯೂಸಫ್ ಸಿದ್ದಿಕಿ ಹೇಳಿದ್ದಾರೆ. ಬುಧವಾರದ ವಾಯುದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದು, ಮೂರು ದಿನಗಳಿಂದ ಆತನ ದೇಹಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೇಳಿದಾರೆ. ಮೃತ ಬಾಲಕನ ತಾಯಿ ಊಡಾ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಸಿದ್ದಿಕಿ ಹೇಳಿದ್ದಾರೆ.

ಒಮ್ರಾನ್ ಆಂಬುಲೆನ್ಸ್‌ನಲ್ಲಿ ಖಿನ್ನನಾಗಿ ಸಹಾಯದ ನಿರೀಕ್ಷೆಯಲ್ಲಿ ಕುಳಿತಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಒಮ್ರಾನ್ ಇನ್ನೂ ಬದುಕಿದ್ದಾನೆ. ಆತನ ದೇಹಸ್ಥಿತಿ ಸುಧಾರಿಸುತ್ತಿದೆ ಎಂದು ಆತನ ಸಹೋದರನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ.ಅಬು ರಸೂಲ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News