ಚೀನಾದಿಂದ ಮಕ್ಕಾಗೆ ಸೈಕಲ್ ಸವಾರಿಯಲ್ಲಿ ಬಂದ ಹಜ್ ಯಾತ್ರಿಕ
ಮನಾಮ, ಆ. 21: ಚೀನಾದ ಮುಸ್ಲಿಮರೊಬ್ಬರು ಹಜ್‌ಗಾಗಿ ಸೌದಿ ಅರೇಬಿಯಕ್ಕೆ ಸೈಕಲ್‌ನಲ್ಲಿ ಹೋಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿರುವ ತನ್ನ ಮನೆಯಿಂದ ಹೊರಟ ಮುಹಮ್ಮದ್ ಸುಮಾರು 8,150 ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿ ಸೌದಿ ಅರೇಬಿಯದ ಪಶ್ಚಿಮದ ನಗರ ತಾಯಿಫ್‌ಗೆ ಆಗಮಿಸಿದ್ದಾರೆ. ಅಲ್ಲಿ ಸ್ಥಳೀಯ ಸೈಕಲ್ ಕ್ಲಬ್ಬೊಂದು ಅವರಿಗೆ ಭವ್ಯ ಸ್ವಾಗತ ನೀಡಿತು.
ತಾಯಿಫ್‌ನಲ್ಲಿ ಸ್ವಲ್ಪ ವಿಶ್ರಮಿಸಿದ ಬಳಿಕ ಮುಹಮ್ಮದ್ ಮಕ್ಕಾದತ್ತ ಪ್ರಯಾಣ ಮುಂದುವರಿಸಿದಾಗ ತಾಯಿಫ್ ಸೈಕ್ಲಿಂಗ್ ಕ್ಲಬ್‌ನ ಸದಸ್ಯರೂ ಅವರಿಗೆ ಜೊತೆಯಾದರು ಎಂದು ಸೌದಿ ಸುದ್ದಿ ವೆಬ್‌ಸೈಟ್ ‘ಸಬ್ಕ್’ ವರದಿ ಮಾಡಿದೆ.
‘‘ಸೌದಿ ಅರೇಬಿಯದಲ್ಲಿ ಚೀನಿ ಸೈಕಲ್ ಸವಾರನನ್ನು ಸ್ವಾಗತಿಸಿದ ಮೊದಲ ಸೈಕ್ಲಿಂಗ್ ಕ್ಲಬ್ ನಮ್ಮದು. ದೇಶದ ಇತರ ಸೈಕ್ಲಿಂಗ್ ಕ್ಲಬ್‌ಗಳೂ ಅವರನ್ನು ಸ್ವಾಗತಿಸುವುದನ್ನು ನಾವು ನಿರೀಕ್ಷಿಸುತ್ತೇವೆ’’ ಎಂದು ತಾಯಿಫ್ ಸೈಕ್ಲಿಂಗ್ ಕ್ಲಬ್‌ನ ಮುಖ್ಯಸ್ಥ ನಯೀಫ್ ಅಲ್ ರವಸ್ ಹೇಳಿದರು