ಭಾರತದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಓಡಲಿರುವ ಆಸ್ಟ್ರೇಲಿಯದ ಮ್ಯಾರಥಾನ್ ಸಾಧಕಿ, ಸಾಮಂತ ಬಾಶ್!
ಹೊಸದಿಲ್ಲಿ, ಆಗಸ್ಟ್ 21: ಭಾರತದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಲು ಆಸ್ಟ್ರೇಲಿಯದ ಸಾಮಂತಬಾಶ್ ಎಂಬ ಆಲ್ಟ್ರೋ ಮ್ಯಾರಥಾನ್ ಓಟಗಾರ್ತಿ ರಾಜಸ್ಥಾನದ ಜೈಸಲ್ಮೇರ್‌ನಿಂದ ಆಗಸ್ಟ್ 22ರಂದು ಮ್ಯಾರಥಾನ್ ಓಟ ಆರಂಭಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಮೇಘಾಲಯದ ಮೌಸಿಂಟಂ ಅವರ ಮ್ಯಾರಥಾನ್ ಓಟ ಕೊನೆಗೊಳ್ಳುವ ಪ್ರದೇಶವಾಗಿದ್ದು,ಇದಕ್ಕಾಗಿ ಅವರು 3800 ಕಿ.ಮೀ. ದೂರವನ್ನು ಕ್ರಮಿಸಬೇಕಿದೆ.ಜೈಪುರ ಬಾರ್ಮೆರ್(ರಾಜಸ್ಥಾನ), ಕಾನ್ಪುರ(ಉತ್ತರಪ್ರದೇಶ), ದಿಲ್ಲಿ ಹರದ್ವಾಯಿ(ಉತ್ತರ ಪ್ರದೇಶ), ಪೌರಿ(ಉತ್ತರಖಂಡ) ಎಂಬಲ್ಲೆಲ್ಲ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹಿಸಲು ಅವರು ಮ್ಯಾರಥಾನ್ ಓಡಲಿದ್ದಾರೆ ಎಂದು ತಿಳಿದು ಬಂದಿದೆ. ’ವಿದ್ಯಾಭ್ಯಾಸ ಸಿಗದಿರುವ ಮಕ್ಕಳನ್ನು ನೆನೆವಾಗ ತಾನು ಮಾಡುತ್ತಿರುವುದು ದೊಡ್ಡ ವಿಷಯವೇ ಅಲ್ಲ’ ಎಂದು ಮಾಜಿ ವಕೀಲೆಯಾಗಿರು ಸಾಮಂತ ಹೇಳುತ್ತಾರೆ. ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೆ ಸ್ಥಾನದಲ್ಲಿರುವ ಭಾರತವನ್ನು ಓಟಕ್ಕಾಗಿ ಯಾಕೆ ಆಯ್ಕೆಮಾಡಿದ್ದೀರಿ ಎಂಬ ಪ್ರಶ್ನೆಗೆ "ಈದೇಶದ ಸಾಂಸ್ಕೃತಿಕ ವೈವಿಧ್ಯತೆ ತನ್ನನ್ನು ಪ್ರೇರೇಪಿಸಿತು" ಎಂದು ಉತ್ತರಿಸಿದ್ದಾರೆ. ಸಾಮಂತರಿಗೆ ಆಸ್ಟ್ರೇಲಿಯನ್ ಹೈಕಮೀಶನರ್ ಹರೀಂದರ್ ಸಿದ್ದು ಮುಂತಾದವರು ಬೆಂಬಲ ನೀಡಿ ರಂಗಪ್ರವೇಶಿಸಿದ್ದಾರೆ. ಮ್ಯಾರಥಾನ್‌ನಲ್ಲಿ ನಾಲ್ಕು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗೆ ಸಾಮಂತ ಭಾಜನರಾಗಿದ್ದಾರೆ.ಚಿಲಿ,ಚೈನ, ಈಜಿಪ್ಟ್, ಅಂಟಾರ್ಟಿಕಗಳಲ್ಲಿ ಅವರು ಮ್ಯಾರಥಾನ್ ಓಡಿದ್ದಾರೆ ಎಂದು ವರದಿ ತಿಳಿಸಿದೆ.