ಟ್ರಂಪ್ ಕಂಪೆನಿಗಳ ಮೇಲೆ 650 ಮಿಲಿಯ ಡಾಲರ್ ಸಾಲ

Update: 2016-08-21 15:15 GMT

ವಾಶಿಂಗ್ಟನ್, ಆ. 21: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಕಂಪೆನಿಗಳು ಕನಿಷ್ಠ 650 ಮಿಲಿಯ ಡಾಲರ್ (4,362 ಕೋಟಿ ರೂಪಾಯಿ) ಸಾಲವನ್ನು ಹೊಂದಿವೆ; ಇದು ಅವರ ಅಧ್ಯಕ್ಷೀಯ ಪ್ರಚಾರ ಸಮಿತಿಯು ಸಾರ್ವಜನಿಕವಾಗಿ ನೀಡಿದ ಘೋಷಣೆಯ ಮೊತ್ತಕ್ಕಿಂತ ಎರಡು ಪಟ್ಟಿಗೂ ಅಧಿಕವಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಶನಿವಾರ ವರದಿ ಮಾಡಿದೆ.

ಕಚೇರಿಗಳು ಮತ್ತು ಗಾಲ್ಫ್ ಕೋರ್ಸ್‌ಗಳು ಸೇರಿದಂತೆ ಅಮೆರಿಕದಲ್ಲಿರುವ ಟ್ರಂಪ್‌ಗೆ ಸಂಬಂಧಿಸಿದ 30 ಆಸ್ತಿಗಳಿಗೆ ಸಂಬಂಧಿಸಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಕಲೆಹಾಕಲು ಪತ್ರಿಕೆಯು ಸಂಸ್ಥೆಯೊಂದನ್ನು ನೇಮಿಸಿತ್ತು.650 ಮಿಲಿಯ ಡಾಲರ್ ಸಾಲಗಳ ಹೊರತಾಗಿ, ಅವರ ಸಂಪತ್ತಿನ ಗಣನೀಯ ಭಾಗಕ್ಕೆ ಮೂವರು ಪಾಲುದಾರರಿದ್ದಾರೆ ಹಾಗೂ ಈ ಪಾಲುದಾರರು ಹೆಚ್ಚುವರಿಯಾಗಿ 2 ಬಿಲಿಯ ಡಾಲರ್ (ಸುಮಾರು 13,422 ಕೋಟಿ ರೂಪಾಯಿ) ಸಾಲ ಹೊಂದಿದ್ದಾರೆ ಎಂದು ಪತ್ರಿಕೆ ಹೇಳಿದೆ.ಈ ಸಾಲವು ಟ್ರಂಪ್‌ರ ಸಂಪತ್ತಿನ ಮೇಲೆ ಗಣನೀಯ ಪರಿಣಾಮ ಬೀರಬಹುದಾಗಿದೆ ಎಂದರು.

ಚೀನಾದಲ್ಲಿ ಅತ್ಯಂತ ಎತ್ತರ, ಉದ್ದದ ಗಾಜಿನ ಸೇತುವೆ ಅನಾವರಣಬೀಜಿಂಗ್, ಆ. 21: ಚೀನಾದ ಹುನಾನ್ ಪ್ರಾಂತದಲ್ಲಿ ಜಗತ್ತಿನ ಅತ್ಯಂತ ಎತ್ತರ ಹಾಗೂ ಉದ್ದದ ಗಾಜಿನ ತಳದ ಸೇತುವೆಯನ್ನು ಶನಿವಾರ ಜನರ ವೀಕ್ಷಣೆಗೆ ತೆರೆಯಲಾಗಿದೆ.430 ಮೀಟರ್ ಉದ್ದದ ಸೇತುವೆ ಹುನಾನ್‌ನಲ್ಲಿರುವ ಝಾಂಗ್‌ಜಿಯಾಜಿ ಕಣಿವೆಯನ್ನು ಸಂಪರ್ಕಿಸುತ್ತದೆ ಹಾಗೂ ಅದು ನೆಲದಿಂದ 300 ಮೀಟರ್ ಎತ್ತರದಲ್ಲಿದೆ.

99 ಮೂರು ಪದರಗಳ ಗಾಜಿನ ಹಲಗೆಗಳ ಮೂಲಕ ಕೆಳಗೆ ಇಣುಕಲು ಈ ಸೇತುವೆಯು ಅವಕಾಶ ಮಾಡಿಕೊಡುತ್ತದೆ.ತಿಯಾನಾನ್ಮೆನ್ ವೌಂಟನ್ ನ್ಯಾಶನಲ್ ಪಾರ್ಕ್‌ನಲ್ಲಿರುವ ಕಮರಿಯ ಎರಡು ಅಂಚುಗಳ ನಡುವೆ ಸೇತುವೆ ತೂಗುತ್ತಿದೆ.ಸೇತುವೆ ನಿರ್ಮಾಣಕ್ಕೆ 22.81 ಕೋಟಿ ರೂಪಾಯಿ ಖರ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News