×
Ad

10 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ ಸುಳ್ಯದ ಸರಳಾಯ ಹೋಟೆಲ್

Update: 2016-08-21 22:33 IST

ಸುಳ್ಯ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀರಾಂಪೇಟೆ ಪ್ರಾಂತ ಊಟದ ಸಮಯದಲ್ಲಿ ವಿದ್ಯಾರ್ಥಿಗಳ ಕಲರವದಿಂದ ಗುಂಯ್ ಗುಡುತ್ತದೆ. ವಿದ್ಯಾರ್ಥಿಗಳಿಗೆ ಇಲ್ಲಿ ಹೊರಾಂಗಣ ಚಟುವಟಿಕೆ ಇದೆ ಎಂದಲ್ಲ, ಬದಲಾಗಿ ಅವರೆಲ್ಲರೂ ಹೊಟೇಲ್ ರಾಂ ಪ್ರಸಾದ್‌ನಿಂದ ಹೊರ ಹೋಗುವುದು ಅಥವಾ ಒಳ ಹೋಗುವುದು ಮಾಡುತ್ತಿರುತ್ತಾರೆ.

ಸರಳಾಯ ಹೊಟೇಲ್ ಎಂದೇ ಜನಪ್ರಿಯವಾಗಿರುವ ಇದರ ಮಾಲೀಕರು ಸುಂದರ ಸರಳಾಯ. ಹೆಚ್ಚು ಆಡಂಬರವಿಲ್ಲದ ಏಳು ದಶಕಗಳ ಹಿಂದಿನ ಹೊಟೇಲನ್ನು ಸಾವಿರಾರು ಮಂದಿ ಒಂದೇ ಕಾರಣಕ್ಕೆ ನೆನಪಿಸಿಕೊಳ್ಳುತ್ತಾರೆ. ಅಗ್ಗದ ಬೆಲೆಯಲ್ಲಿ ಸಿಗುವ ಮಧ್ಯಾಹ್ನದ ಭೋಜನ. ಮಲೆನಾಡು ಪ್ರಾಂತ್ಯದ ಈ ಪಟ್ಟಣದಲ್ಲಿ ಓದುತ್ತಿರುವವರು ಮನೆಗೆ ಹೋಗಿ ಊಟ ಮಾಡಲು ಸಾಧ್ಯವಾಗದಿದ್ದಾಗ ಹೊಟೇಲ್ ರಾಂ ಪ್ರಸಾದ್ ಅವರ ನೆರವಿಗೆ ಬರುತ್ತದೆ.

ಸರ್ಕಾರವು ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡುವ ಯೋಜನೆಯನ್ನು ರೂಪಿಸುವ ಮೊದಲೇ ಸುಂದರ ಸರಳಾಯರ ತಂದೆ ವೆಂಕಟರಮಣ ಸರಳಾಯ ಅವರು 1938ರಲ್ಲಿ ಒಂದು ರೂಪಾಯಿಗೆ ಈ ಹೊಟೇಲಿನಲ್ಲಿ ಮಧ್ಯಾಹ್ನದ ಭೋಜನ ಒದಗಿಸುತ್ತಿದ್ದರು. ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ತಾಲೂಕಿನ ಪಣತಾಡಿ ಗ್ರಾಮದ ನಿವಾಸಿಯಾಗಿರುವ ಸರಳಾಯರ ಕುಟುಂಬ 1938ರಲ್ಲಿ ಸುಳ್ಯದಲ್ಲಿ ನೆಲೆ ನಿಂತು ಸಣ್ಣ ಗುಡಿಸಲಿನಲ್ಲಿ ಹೊಟೇಲ್ ಆರಂಭಿಸಿತ್ತು. 46 ವರ್ಷಗಳ ಹಿಂದೆ ಸುಂದರ ಸರಳಾಯ ಹೊಟೇಲ್ ಮಾಲೀಕತ್ವ ವಹಿಸಿದ ಮೇಲೂ ಸೇವೆ ಮುಂದುವರಿದಿದೆ. ಆದರೆ ಬೆಲೆ ಸ್ವಲ್ಪ ಏರಿದೆ. ಒಂದು ರೂಪಾಯಿಗೆ ನಾಲ್ಕು ಊಟದಿಂದ, ಮೂರು, ಎರಡು ಮತ್ತು ಒಂದಕ್ಕೆ ಇಳಿಯಿತು. ಅಂತಿಮವಾಗಿ 5 ರೂಪಾಯಿಗೆ ಒಂದು ಊಟವಾಯಿತು. ಎರಡು ವರ್ಷಗಳ ಹಿಂದಿನವರೆಗೂ ಇದೇ ಬೆಲೆಯಿತ್ತು. 10 ರೂಪಾಯಿಗೆ ಈಗ ಸಿಗುವ ಊಟದಲ್ಲಿ ಕೇವಲ ಅನ್ನ ಮತ್ತು ಸಾಂಬಾರ್ ಮಾತ್ರವಲ್ಲ, ಅನ್ನ, ರಸಂ, ಸಾಂಬಾರ್ ಮತ್ತು ಮಜ್ಜಿಗೆಯೂ ಸಿಗುತ್ತದೆ.

ಕಡಿಮೆ ವೆಚ್ಚದಲ್ಲಿ ಭೋಜನ ಒದಗಿಸಲು ಕಾರಣ ಕೇಳಿದರೆ ಸರಳಾಯ ಅವರು ತಮ್ಮ ತಂದೆಯ ದಾರಿಯಲ್ಲಿ ಹೆಜ್ಜೆ ಇಡುವುದಾಗಿ ಹೇಳುತ್ತಾರೆ. “ಒಂದು ಭೋಜನ ಪಡೆಯುವುದು ಇಂದಿಗೂ ಅನೇಕರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಪರಂಪರೆ ಮುಂದುವರಿಸಿದ್ದೇನೆ” ಎನ್ನುತ್ತಾರೆ. ಹೊಟೇಲ್ ರಾಂಪ್ರಸಾದ್ ನಿತ್ಯವೂ 200ಕ್ಕೂ ಅಧಿಕ ಮಧ್ಯಾಹ್ನದ ಊಟವನ್ನು ನೀಡುತ್ತದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

ಈ ಸೇವೆ ಸಾಧ್ಯವಾಗಿರುವುದು ಹೇಗೆ ಎಂದು ಪ್ರಶ್ನಿಸಿದರೆ, ಪಾರ್ಸಲ್ ಆಗಿ ತೆಗೆದುಕೊಂಡು ಹೋಗುವ ಸಾಮಾನ್ಯ ಊಟಕ್ಕೆ ರು. 40 ಬೆಲೆ ಇರುತ್ತದೆ ಎನ್ನುತ್ತಾರೆ. ಅಲ್ಲದೆ ಹೊಟೇಲಿನಲ್ಲಿ ಇತರ ಆಹಾರ ವಸ್ತುಗಳು ಮಾರುಕಟ್ಟೆ ಬೆಲೆಯಲ್ಲೇ ಸಿಗುತ್ತವೆ. ಕ್ಯಾಟರಿಂಗ್ ಚಟುವಟಿಕೆಯಿಂದಲೂ ಆದಾಯ ಬರುತ್ತದೆ. ಈಗ ಅವರ ಮಗ ರಾಘವೇಂದ್ರ ಸರಳಾಯ ಹೊಟೇಲ್ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಮಗ ಇತರ ಉದ್ಯಮ ನಿಭಾಯಿಸುತ್ತಾರೆ. ಮಗಳು ಮದುವೆಯಾಗಿ ಕಾರ್ಕಳದಲ್ಲಿದ್ದಾಳೆ. “ಪರಂಪರೆ ಮುಂದುವರಿಯಲಿದೆ. ದೇವರು ನಮ್ಮ ಕೈಬಿಡುವುದಿಲ್ಲ” ಎನ್ನುತ್ತಾರೆ ಸುಂದರ್ ಸರಳಾಯ.

Courtesy : The Hindu.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News