ಚುಟುಕು ಸುದ್ದಿಗಳು

Update: 2016-08-21 18:39 GMT

ಖೋಟಾ ನೋಟು ಪತ್ತೆ: ಪ್ರಕರಣ ದಾಖಲು
ಉಡುಪಿ, ಆ.21: ಜಿಲ್ಲೆಯ ಸಿಂಡಿಕೇಟ್‌ಬ್ಯಾಂಕ್‌ನ ವಿವಿಧ ಶಾಖೆಗಳಿಂದ ರವಾನೆಯಾದ ಹಣದಲ್ಲಿ 13ಸಾವಿರ ರೂ. ವೌಲ್ಯದ 21 ಖೋಟಾ ನೋಟುಗಳು ಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2015ರ ಡಿ.1ರಿಂದ 2016ರ ಮೇ31ರವರೆಗೆ ರವಾನೆಯಾದ ಹಣದಲ್ಲಿ ಸಿಂಡಿಕೇಟ್ ಕರೆನ್ಸಿ ಪರಿಶೀಲನೆ ಮಾಡುವಾಗ 1,000ರೂ. ಮುಖಬೆಲೆಯ 5 ಹಾಗೂ 500 ರೂ. ಮುಖಬೆಲೆಯ 16 ಶಂಕಿತ ಖೋಟಾ ನೋಟುಗಳು ಪತ್ತೆಯಾಗಿತ್ತು. ಈ ಬಗ್ಗೆ 2016ರ ಜೂ.13ಕ್ಕೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ನಂತರ ಖೋಟಾ ನೋಟಿನ ಜೆರಾಕ್ಸ್ ಪ್ರತಿಗಳನ್ನು ಬೆಂಗಳೂರು ಸಿಓಡಿಗೆ ಕಳುಹಿಸಿಕೊಟ್ಟಿದ್ದು ಅಲ್ಲಿಂದ ವರದಿ ಬಂದ ಮೇರೆಗೆ ಇದೀಗ ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಪ್ರಬಂಧಕ ಮಂಜುನಾಥ ಕೆ.ವಿ. ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ
 ಗಂಗೊಳ್ಳಿ, ಆ.21: ಅನಾರೋಗ್ಯದಿಂದ ಮನನೊಂದ ಹೊಸಾಡು ಗ್ರಾಮದ ಅರಾಟೆ ನಿವಾಸಿ ನಾರಾಯಣ ಮೊಗವೀರ ಎಂಬವರ ಪತ್ನಿ ಲಚ್ಚು (89) ಆ.19ರಂದು ರಾತ್ರಿ ಹೊಸಾಡು ಗ್ರಾಮದ ಬಂಟ್ವಾಡಿ ಸೇತುವೆ ಬಳಿ ಸೌಪರ್ಣಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹ ಆ.20ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ವೈಯಕ್ತಿಕ ಕಾರಣದಿಂದ ಮನನೊಂದ ಚೇರ್ಕಾಡಿ ಕನ್ನಾರ ನಿವಾಸಿ ನಾಗ ನಾಯ್ಕಾ ಎಂಬವರ ಮಗ ಪ್ರದೀಪ (23) ಆ.20 ರಂದು ಸಂಜೆ ವೇಳೆ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ವಕ್ವಾಡಿ ಸಣಗಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಗೋಪಾಡಿಯ ಚಂದ್ರ ಆಚಾರ್(55) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.20ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜೂಜಾಟ: ಆರು ಮಂದಿ ಸೆರೆ
ಉಡುಪಿ, ಆ.21: ಅಂಬಾಗಿಲು ಅರ್ಪಿತಾ ಬಿಲ್ಡಿಂಗ್ ಸಮೀಪ ರವಿವಾರ ಅಪರಾಹ್ನ ವೇಳೆ ಜೂಜಾಡುತ್ತಿದ್ದ ಆರು ಮಂದಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
   ಬಂಧಿತರನ್ನು ಹುನುಮಂತನಗರದ ರಮೇಶ್ ಪೂಜಾರಿ(32), ದೊಡ್ಢಣ ಗುಡ್ಡೆಯ ಉದಯ ಪೂಜಾರಿ(36), ಚಿತ್ರದುರ್ಗದ ಪರಮೇಶ(23), ವೆಂಕಟೇಶ (20), ಬಳ್ಳಾರಿಯ ಮಹೇಶ(47), ಕಕ್ಕುಂಜೆಯ ಡೆನ್ನಿಸ್ ಲೋಬೋ(43) ಎಂದು ಗುರುತಿಸಲಾಗಿದೆ. ಇವರಿಂದ 1,450ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆಯತಪ್ಪಿ ಬಿದ್ದು ಮೃತ್ಯು
ಮಣಿಪಾಲ, ಆ.21: ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಹಿರೇಬೆಟ್ಟು ಬಾಳ್ಕಟ್ಟ ನಿವಾಸಿ ಸದಾನಂದ ಶೆಟ್ಟಿ ಎಂಬವರು ರವಿವಾರ ಬೆಳಗ್ಗೆ ಪರ್ಕಳ ಬಳಿ ಆಯತಪ್ಪಿಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುನ್ನಿ ಒಕ್ಕೂಟದಿಂದ ಸಚಿವ ಪ್ರಮೋದ್‌ಗೆ ಸನ್ಮಾನ
ಉಡುಪಿ, ಆ.21: ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್, ಸುನ್ನಿ ಉಲಮಾ ಒಕ್ಕೂಟ, ಸುನ್ನಿ ಯುವಜನ ಸಂಘ, ಸುನ್ನಿ ಸ್ಟೂಡೆಂಟ್ಸ್ ಫೆಡ ರೇಶನ್ ಹಾಗೂ ಸುನ್ನಿ ಅಧ್ಯಾಪಕರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಸನ್ಮಾನಿಸಲಾಯಿತು.ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಸ್ಸಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷ ಅಶ್ರಫ್ ಸಖಾಫಿ ಕನ್ನಂಗಾರ್ ಉದ್ಘಾಟಿಸಿದರು. ರಾಜ್ಯ ಎಸ್ಸೆಸ್ಸೆಫ್ ಉಪಾಧ್ಯಕ್ಷ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಾಸ್ತಾವಿ ಕವಾಗಿ ಮಾತನಾಡಿದರು.ಹಾಜಿ ತೌಫಿಕ್ ಅಬ್ದುಲ್ಲ ನಾವುಂದ, ಕೆ.ಮುಹಿಯ್ಯದ್ದೀನ್ ಹಾಜಿ ಕಾಪು, ಹಾಜಿ ಎಂ.ಎ. ಬಾವ ಮೂಳೂರು, ಯು.ಕೆ. ಮುಸ್ತಫಾ ಸಅದಿ ಶಿರ್ವ, ಅಬೂಬಕರ್ ಸಖಾಫಿ ದೊಡ್ಡಣಗುಡ್ಡೆ, ಅಬ್ದುರ್ರವೂಫ್ ಕುಂದಾಪುರ, ಸಿರಾಜ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಪಿ.ಎಂ ಅಶ್ರಫ್ ಅಂಜದಿ ಸ್ವಾಗತಿಸಿದರು. ಕಾಸಿಂ ಬಾರಕೂರು ವಂದಿಸಿದರು.


ನಾಳೆ ಮುಸ್ಲಿಮ್ ಒಕ್ಕೂಟದ ಚುನಾವಣೆ
ಉಡುಪಿ, ಆ.21: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕು ಘಟಕದ ಚುನಾವಣೆಯು ಆ.23ರಂದು ಅಪರಾಹ್ನ 3ಕ್ಕೆ ಉಡುಪಿ ಬಾಳಿಗಾ ಟವರ್‌ನಲ್ಲಿರುವ ಮುಸ್ಲಿಮ್‌ವೆಲ್‌ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ನಡೆಯಲಿದೆ. ತಾಲೂಕಿನ ಮಸೀದಿ, ಮದ್ರಸಾ, ಸಂಘಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು ದೃಢೀಕರಣ ಪತ್ರದೊಂದಿಗೆ ಭಾಗವಹಿಸಬೇಕು. ಜಿಲ್ಲಾ ಮುಸ್ಲಿಮ್ ಒಕ್ಕೂಟ ದೊಂದಿಗೆ ನೋಂದಾಯಿತ ರಾಷ್ಟ್ರೀಯ ಮಟ್ಟದ ಸಂಘಟನೆೆಗಳ ಮೂರು ಪ್ರತಿನಿಧಿಗಳು ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು. ಒಕ್ಕೂಟದೊಂದಿಗೆ ನೋಂದಾ ಯಿತವಲ್ಲದ ಮಸೀದಿ, ಮದ್ರಸ, ಸಂಘಟನೆಗಳು ನೋಂದಾಯಿ ಸಿಕೊಂಡು ಚುನಾವಣೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಕಾರ್ಯ ದರ್ಶಿ ಅಬ್ದುಲ್ ಅಝೀಝ್ ಉದ್ಯಾವರ(ಮೊ-9964027990) ರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.


ಮಂಗಳೂರು ಕ್ಷೇತ್ರಕ್ಕೆ ಅನುದಾನ ಬಿಡುಗಡೆ
 ಮಂಗಳೂರು,ಆ.21: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಗಳೂರು ವಿಧಾನಸಭಾ ಶಾಸಕ ಯು.ಟಿ. ಖಾದರ್‌ರ 2015-16ನೆ ಸಾಲಿನ ದ್ವಿತೀಯ ಹಂತದ ಅನುದಾನ ಬಿಡುಗಡೆಯಾಗಿದೆ. ಮಂಜನಾಡಿ ಗ್ರಾಮದ ಸಾರ್ತಬೈಲು-ಕೋಡಿ ರಸ್ತೆ ಡಾಮ ರೀಕರಣಕ್ಕೆ 5 ಲಕ್ಷ ರೂ., ಕೊಣಾಜೆಯ ಕಲ್ಲಗುಡ್ಡೆ ಮುಟ್ಟಿಂಞ ರಸ್ತೆ ಡಾಮರೀಕರಣಕ್ಕೆ 4.50 ಲಕ್ಷ ರೂ., ಕಿನ್ಯಾ ಗ್ರಾಮದ ಬೆಳರಿಂಗೆ ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ಕಿನ್ಯ ಹಿ.ಪ್ರಾ. ಶಾಲೆಯಿಂದ ಮಸೀದಿವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ., ಮಾರಿಪಳ್ಳ 1ನೆ ಅಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷ ರೂ., ಮಾರಿಪಳ್ಳ 3ನೆ ಅಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2.50 ಲಕ್ಷ ರೂ.ಅನುದಾನ ಮಂಜೂರಾಗಿದೆ.
    ಕೈರಂಗಳ ಗ್ರಾಮದ ವಿದ್ಯಾನಗರ 1ನೆ ಅಡ್ಡ ರಸ್ತೆ ಕಾಂಕ್ರಿಟೀಕಣಕ್ಕೆ 2 ಲಕ್ಷ ರೂ., ಸೋಮೇಶ್ವರ ಗ್ರಾಮದ ಲಕ್ಷ್ಮೀ ಗುಡ್ಡೆ ರಸ್ತೆ ಕಾಂಕ್ರಿಟೀ ಕರಣಕ್ಕೆ 5 ಲಕ್ಷ ರೂ., ಬಾಳೆಪುಣಿ ಹೂ ಹಾಕುವ ಕಲ್ಲು ಶಾಲಾ ರಂಗಮಂದಿರ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ., ಮಂಜನಾಡಿ ಮದಕ ಮದಪ್ಪಾಡಿ ರಸ್ತೆ ಕಾಂಕ್ರಿಟೀಕರಣಕ್ಕೆ 2 ಲಕ್ಷ ರೂ., ಕುರ್ನಾಡು ಸುಬ್ಬಗುಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ. ಅನುದಾನ ಮಂಜೂರಾಗಿದೆ.
   ತಲಪಾಡಿಯ ಪಿಲಿಕೂರು ಶಾಲೆ ರಸ್ತೆ ಕಾಂಕ್ರಿಟ್ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷ ರೂ., ಕಿನ್ಯ ಸಂಕೇಶ ಮನೆ ನಿವೇಶನ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ 5 ಲಕ್ಷ ರೂ. ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.


ಮಾಣಿ: ಅಮ್ಜದಿ ಸಂಗಮ ಕಾರ್ಯಕ್ರಮ
ಮಾಣಿ, ಆ.21: ಇಸ್ಲಾಂ ಭಯೋತ್ಪಾದನೆಯನ್ನು ವಿರೋಧಿಸುತ್ತಿದೆ. ಭಯೋತ್ಪಾದನೆ ಪ್ರವಾದಿಯವರ ಸಂದೇಶಗಳಿಗೂ ವಿರುದ್ಧವಾಗಿದೆ ಎಂದು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಮ್ಜದಿ ಪಕ್ಷಿಕೆರೆ ನುಡಿದರು. ಮಾಣಿ ದಾರುಲ್ ಇರ್ಷಾದ್ ಎಜ್ಯುಕೇಶನಲ್ನಲ್ಲಿ ನಡೆದ ಅಮ್ಜದಿ ಸಂಗಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಂಇಯ್ಯತುಲ್ ಮುಅಲ್ಲಿಮೀನ್ ಪುತ್ತೂರು ರೇಂಜ್‌ನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಮ್ಜದಿ ಹಸನ್ ನಗರ ಉದ್ಘಾಟಿಸಿದರು.ಎ.ಕೆ.ಅಮ್ಜದಿ ಕುಂದಾಪುರ ,ಅಶ್ರಫ್ ಅಮ್ಜದಿ ಮಲಾರ್, ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಉಪಸ್ಥಿತರಿದ್ದರು.ಅಮ್ಜದೀಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಅನುಮತಿಗೆ ಸೂಚನೆ
ಮೂಡುಬಿದಿರೆ, ಆ.21: ಸ್ವರಾಜ್ಯ ಮೈದಾನದಲ್ಲಿ ವಿವಿಧ ಕ್ರೀಡೆಗಳಿಗೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಅನು ಮತಿ ಪಡೆಯಲು ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿ ಇರುವ ಯುವಜನ ಸೇವಾ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಮೂಡುಬಿದಿರೆ ತಹಶೀಲ್ದಾರ್‌ರ ಪ್ರಕಟನೆೆ ತಿಳಿಸಿದೆ.


ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮಗಳಿಗೆ ಚಾಲನೆ
ಉಡುಪಿ, ಆ.21: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಾಷ್ಟಮಿ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸರಣಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ರವಿವಾರ ರಾಜಾಂಗಣದಲ್ಲಿ ನೆರವೇರಿಸಿದರು.
    ಉಪನ್ಯಾಸ ಮಾಲಿಕೆಯಲ್ಲಿ ಲಕ್ಷ್ಮೀಶ ತೋಳ್ಪಾಡಿ ‘ಮಹಾಭಾರತದಲ್ಲಿ ಶ್ರೀಕೃಷ್ಣ’ ಹಾಗೂ ಚಕ್ರವರ್ತಿ ಸೂಲಿಬೆಲೆ ‘ಕೃಷ್ಣನ ರಾಜನೀತಿ’ ಕುರಿತು ಪ್ರವಚನ ನೀಡಿದರು. ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರೊ.ಎಂ.ಎಲ್.ಸಾಮಗ ಉಪಸ್ಥಿತರಿದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.

ಬಡವರ ಬದುಕಿಗೆ ಹೊಸ ಭಾಷ್ಯ ಬರೆದವರು ಅರಸು: ಭಂಡಾರಿ
 ಕಾರ್ಕಳ, ಆ.21: ಸಮಗ್ರ ಸಾಮಾ ಜಿಕ ಅಭ್ಯುದಯ ಮತ್ತು ಅಭಿವೃ ದ್ಧಿಯ ಶಕ್ತಿಯಾಗಿ ದೇಶಕ್ಕೆ ಒಂದು ಹೊಸ ಸ್ವರೂಪ ನೀಡಿದವರು ದಿ.ಆರಸು. ದಿ. ಪ್ರಧಾನಿ ಇಂದಿರಾಗಾಂಧಿಯವರ ಸಾಧನಾ ಚಾಲಕ ಶಕ್ತಿಯಾಗಿ ಮೈಸೂರು ರಾಜ್ಯವನ್ನು ಕರ್ನಾಟಕ ವನ್ನಾಗಿಸಿ, ಉಳುವವನೇ ಹೊಲದೊಡೆಯನ್ನ ನ್ನಾಗಿಸಿ, ಬಡವರ ಬದುಕಿಗೆ ಹೊಸ ಭಾಷ್ಯವನ್ನು ಬರೆದ ದಿ.ದೇವರಾಜ ಅರಸು ನಿಜವಾದ ಅರ್ಥದಲ್ಲಿ ಪ್ರಾಥಃಸ್ಮರಣಿಯರು ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ.


ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಮುಖ್ಯ ಮಂತ್ರಿ ದಿ. ದೇವರಾಜು ಅರಸು ಜನ್ಮಶತಮಾನೋತ್ಸವ ಹಾಗೂ ದಿ. ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ನುಡಿನಮನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯ ಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸುಧಾಕರ ಶೆಟ್ಟಿ, ನಗರಾಧ್ಯಕ್ಷ ಸುಬಿತ್ ಕುಮಾರ್, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ರಘುಶ್ಚಂದ್ರನಾಥ್, ಪುರಸಭಾ ಸದಸ್ಯ ರಾದ ಮುಹಮ್ಮದ್ ಶರೀಫ್, ವಿವೇಕಾನಂದ ಶೆಣೈ, ವಂದನ ಜತ್ತನ್ನ, ಗ್ರಾಪಂ ಸದಸ್ಯ ರೆಹಮತುಲ್ಲಾ, ಸತೀಶ್ ರಾವ್, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೋಭಾ, ಕಾಂತಿ ಶೆಟ್ಟಿ, ಪ್ರವೀಣ್ ಮಾಬೆನ್, ಸುಂದರ ಸಾಲ್ಯಾನ್, ನಝೀರ್ ಹುಸೈನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಶುಭದಾ ರಾವ್ ಸ್ವಾಗತಿಸಿದರು. ಬಿಪಿನ್ ಚಂದ್ರ ಪಾಲ್ ವಂದಿಸಿದರು.


ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಡಾ.ವಿಷ್ಣುಭಟ್
ಉಡುಪಿ, ಆ.21: ವಿದ್ಯಾರ್ಥಿಗಳು ಉತ್ತಮ ಲೇಖನವನ್ನು ಬರೆಯಲು ಉತ್ತಮ ಓದುಗನಾಗಬೇಕು. ಪ್ರತಿನಿತ್ಯ ಓದುವ ಹವ್ಯಾಸವನ್ನು ರೂಢಿಸಿದಾಗ ಅತ್ಯುತ್ತಮ ಬರಹಗಾರನಾಗಲು ಸಾಧ್ಯ ಎಂದು ಕನ್ನಡದ ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣುಭಟ್ ಹೇಳಿದ್ದಾರೆ.ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಸನ್ಮತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಸನ್ಮತಿ ಸಂಪಾದಕ ಮಂಡಳಿಯ ಕಾರ್ಯನಿರ್ವಾಹಕ ಸಂಪಾದಕಿ ಡಾ.ಸಂಧ್ಯಾ ನಂಬಿಯಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾ ಡಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಪುತ್ತಿಗೆ ವಸಂತ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ಹೆಚ್ಚಿನ ದರ ವಸೂಲಿ: ಬಸ್ ತಡೆದು ಪ್ರತಿಭಟನೆ
ಹಿರಿಯಡ್ಕ, ಆ.21: ಖಾಸಗಿ ಬಸ್‌ಗಳು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಗುಡ್ಡೆಯಂಗಡಿ, ಕಣಜಾರು, ಬೊಮ್ಮರಬೆಟ್ಟು, ಕುದಿ ಗ್ರಾಮದ ನಾಗರಿಕರು ಗುಡ್ಡೆಯಂಗಡಿ ಜೋಡುಕಟ್ಟೆಯಲ್ಲಿ ಶನಿವಾರ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ವಿಶ್ವನಾಥ್‌ರಿಗೆ ಮನವಿ ನೀಡಿದರು. ಈ ಬಗ್ಗೆ ಪರಿಶೀಲಿಸಿ ಬಸ್ ಮಾರ್ಗದ ಕಿ.ಮೀ. ದೂರವನ್ನು ಸರ್ವೇ ಮಾಡಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಗುಡ್ಡೆಯಂಗಡಿ, ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಸಂಧ್ಯಾ ಶೆಟ್ಟಿ, ಸುಧೀರ್ ಹೆಗ್ಡೆ, ಕೃಷ್ಣ ನಾಯಕ್, ಜಯ ಶೆಟ್ಟಿ, ಗಣೇಶ್ ರಾಜ್ ಸರಳ ಬೆಟ್ಟು, ಚಂದ್ರಶೇಖರ್, ಸಂದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಡವರ ಬದುಕಿಗೆ ಹೊಸ ಭಾಷ್ಯ ಬರೆದವರು ಅರಸು: ಭಂಡಾರಿ
ಕಾರ್ಕಳ, ಆ.21: ಸಮಗ್ರ ಸಾಮಾ ಜಿಕ ಅಭ್ಯುದಯ ಮತ್ತು ಅಭಿವೃ ದ್ಧಿಯ ಶಕ್ತಿಯಾಗಿ ದೇಶಕ್ಕೆ ಒಂದು ಹೊಸ ಸ್ವರೂಪ ನೀಡಿದವರು ದಿ.ಆರಸು. ದಿ. ಪ್ರಧಾನಿ ಇಂದಿರಾಗಾಂಧಿಯವರ ಸಾಧನಾ ಚಾಲಕ ಶಕ್ತಿಯಾಗಿ ಮೈಸೂರು ರಾಜ್ಯವನ್ನು ಕರ್ನಾಟಕ ವನ್ನಾಗಿಸಿ, ಉಳುವವನೇ ಹೊಲದೊಡೆಯನ್ನ ನ್ನಾಗಿಸಿ, ಬಡವರ ಬದುಕಿಗೆ ಹೊಸ ಭಾಷ್ಯವನ್ನು ಬರೆದ ದಿ.ದೇವರಾಜ ಅರಸು ನಿಜವಾದ ಅರ್ಥದಲ್ಲಿ ಪ್ರಾಥಃಸ್ಮರಣಿಯರು ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದ್ದಾರೆ. ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಮುಖ್ಯ ಮಂತ್ರಿ ದಿ. ದೇವರಾಜು ಅರಸು ಜನ್ಮಶತಮಾನೋತ್ಸವ ಹಾಗೂ ದಿ. ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ನುಡಿನಮನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯ ಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸುಧಾಕರ ಶೆಟ್ಟಿ, ನಗರಾಧ್ಯಕ್ಷ ಸುಬಿತ್ ಕುಮಾರ್, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ರಘುಶ್ಚಂದ್ರನಾಥ್, ಪುರಸಭಾ ಸದಸ್ಯ ರಾದ ಮುಹಮ್ಮದ್ ಶರೀಫ್, ವಿವೇಕಾನಂದ ಶೆಣೈ, ವಂದನ ಜತ್ತನ್ನ, ಗ್ರಾಪಂ ಸದಸ್ಯ ರೆಹಮತುಲ್ಲಾ, ಸತೀಶ್ ರಾವ್, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೋಭಾ, ಕಾಂತಿ ಶೆಟ್ಟಿ, ಪ್ರವೀಣ್ ಮಾಬೆನ್, ಸುಂದರ ಸಾಲ್ಯಾನ್, ನಝೀರ್ ಹುಸೈನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಶುಭದಾ ರಾವ್ ಸ್ವಾಗತಿಸಿದರು. ಬಿಪಿನ್ ಚಂದ್ರ ಪಾಲ್ ವಂದಿಸಿದರು.

ನಿಯಮ ಉಲ್ಲಂಘಿಸಿ ವಾಹನ ಚಾಲನೆ
171 ದ್ವಿಚಕ್ರ ವಾಹನಗಳ ವಶ
ಆ.21: ಕಾಸರಗೋಡು ನಗರ ಮತ್ತು ಸುತ್ತಮುತ್ತ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುವವರ ಕಡಿವಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು, ಒಂದು ವಾರದ ಅವಧಿಯಲ್ಲಿ 171 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ 93,700 ರೂ. ದಂಡ ವಿಧಿಸಲಾಗಿದೆ. ಈ ಪೈಕಿ 20 ಅಪ್ರಾಪ್ತರು ಒಳಗೊಂಡಿದ್ದಾರೆ. ದ್ವಿಚಕ್ರ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಸಂಚಾರ ಉಲ್ಲಂಘನೆ ಜೊತೆಗೆ ಅಕ್ರಮ ಚಟುವಟಿಕೆ ನಡೆಯುತ್ತಿ ರುವುದರಿಂದ ಪೊಲೀಸರು ಈ ತೀರ್ಮಾನಕ್ಕೆ ಬಂದಿದ್ದಾರೆ.ವಶಪಡಿಸಿಕೊಂಡ ವಾಹನಗಳನ್ನು ಠಾಣೆ ಗೆ ಸಾಗಿಸಲಾಗುತ್ತಿದೆ. ಬಳಿಕ ಮಾಲಕ ದಂಡ ತೆತ್ತು ವಾಹನವನ್ನು ಹಿಂದಕ್ಕೆ ಪಡೆಯಬೇಕು. ಸ್ಥಳದಲ್ಲೇ ದಂಡ ಪಾವತಿ ಸುವಂತಿಲ್ಲ. ದ್ವಿಚಕ್ರ ವಾಹನಗಳ ಮೂಲಕ ಮಹಿಳೆಯರಿಗೆ ಕಿರುಕುಳ, ಚಿನ್ನಾಭರಣ ಎಗರಿಸುವ ಘಟನೆಗಳು ನಡೆಯುತ್ತಿದೆ. ಇದರ ಜೊತೆಗೆ ಅಪ್ರಾಪ್ತ ವಯಸಿನ ಮಕ್ಕಳು ವಾಹನ ಚಲಾಯಿಸುವ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದರು ಉಲ್ಲಂಘನೆ ನಡೆಯುದೆ. ಈ ಹಿಂದೆ ಸಾಮಾನ್ಯವಾಗಿ ಸಂಚಾರ ಉಲ್ಲಂಘಿಸಿದ್ದಲ್ಲಿ ಸ್ಥಳದಲ್ಲೇ ದಂಡ ವಿಧಿಸಿ ಬಿಡಲಾಗುತ್ತಿತ್ತು. ಆದರೆ ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಂಚಾರ ಉಲ್ಲಂಘನೆಗೆ ಕಡಿವಾಣ ಬೀಳಬಹುದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News