ನರಹಂತಕ ಬೀದಿ ನಾಯಿಗಳನ್ನು ಕೊಲ್ಲಲಾಗುವುದು: ಸಚಿವ ಕೆ.ಟಿ. ಜಲೀಲ್
Update: 2016-08-22 16:39 IST
ತಿರುವನಂತಪುರಂ, ಆ.22: ನರಹಂತಕ ಬೀದಿ ನಾಯಿಗಳ ದಾಳಿಯನ್ನು ತಡೆಯಲು ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ಸಚಿವ ಕೆ.ಟಿ.ಜಲೀಲ್ ಹೇಳಿದ್ದಾರೆಂದು ವರದಿಯಾಗಿದೆ. ದಾಳಿಮಾಡುವ ನಾಯಿಗಳನ್ನು ಕೊಲ್ಲಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಾಣಿ ಪ್ರಿಯರು, ಪರಿಸರ ಪ್ರಿಯರು ಎಂದು ಹೊಗಳುವವರು ನೈಜ ಪ್ರಾಣಿ ಪ್ರಿಯರಲ್ಲ. ಎಂದು ಇಂತಹವರು ನೀಡುವ ಹೇಳಿಕೆಗಳಿಂದ ಗೊತ್ತಾಗುತ್ತದೆಂದು ಅವರು ಬೀದಿನಾಯಿ ಕಡಿತದಿಂದ ವೃದ್ಧೆಯೊಬ್ಬರು ಮೃತರಾದ ಘಟನೆಯನ್ನು ಉದ್ದರಿಸಿ ಮಾತನಾಡುತ್ತಿದ್ದರು.
ಮನುಷ್ಯರ ಜೀವ ಎಲ್ಲದಕ್ಕಿಂತ ಮುಖ್ಯವಾದುದು. ದಾಳಿಮಾಡುವ ನಾಯಿಗಳನ್ನು ಕೊಲ್ಲುವುದಕ್ಕೆ ಸ್ಥಳೀಯಾಡಳಿತ ಹಿಂಜರಿಯಬೇಕಿಲ್ಲ ಎಂದು ಸಚಿವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.