×
Ad

ದಲಿತ ಪ್ರತಿಭಟನೆ: ರಾಷ್ಟ್ರಪತಿಯನ್ನು ಭೇಟಿ ಮಾಡಿದ ಗುಜರಾತ್‌ನ ಕಾಂಗ್ರೆಸ್ ತಂಡ!

Update: 2016-08-22 16:44 IST

ಹೊಸದಿಲ್ಲಿ,ಆ.22: ಗುಜರಾತ್‌ನ ದಲಿತ ಪ್ರತಿಭಟನೆ ಬಲವರ್ಧಿಸುತ್ತಿರುವಂತೆ, ಗುಜರಾತ್‌ನ ಕಾಂಗ್ರೆಸ್ ಪ್ರತಿನಿಧಿಗಳ ತಂಡ ರಾಷ್ಟ್ರಪತಿಯನ್ನು ಭೇಟಿಯಾಗಿ ದೂರು ನೀಡಿದೆ ಎಂದು ವರದಿಯಾಗಿದೆ. ಗುಜರಾತ್‌ನ ಕಾನೂನು ವ್ಯವಸ್ಥೆ ಹದಗೆಟ್ಟಿದೆ,ದಲಿತರ ವಿರುದ್ಧ ನಿರಂತರ ದಾಳಿಗಳು ನಡೆಯುತ್ತಿವೆ.ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯಸರಕಾರಗಳು ಸರಿಯಾದ ಕ್ರಮಕೈಗೊಂಡಿಲ್ಲ ಎಂದು ಕಾಂಗ್ರೆಸ್ ಪ್ರತಿನಿಧಿಗಳ ತಂಡ ರಾಷ್ಟ್ರಪತಿಗೆ ತಿಳಿಸಿದ್ದಾರೆ.

ದಲಿತರು,ಆದಿವಾಸಿಗಳು, ಪಾಟಿದಾರ್ ವಿಭಾಗಗಳು ಪ್ರತಿಭಟನೆಯ ಹಾದಿಯಲ್ಲಿವೆ. ಗೋರಕ್ಷಕರು ಮುಂತಾದ ವಿಷಯವನ್ನೆತ್ತಿಕೊಂಡು ದಲಿತರ ವಿರುದ್ಧ ತಾರತಮ್ಯ ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ರಾಜ್ಯಸರಕಾರಕ್ಕೆ ಸಲಹೆ ನೀಡಬೇಕೆಂದು ಕಾಂಗ್ರೆಸ್ ಪ್ರತಿನಿಧಿಗಳು ರಾಷ್ಟ್ರಪತಿಯವರನ್ನು ವಿನಂತಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News