×
Ad

ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ ಸುಪ್ರೀಂ ಕೋರ್ಟ್

Update: 2016-08-22 23:36 IST

ಹೊಸದಿಲ್ಲಿ, ಆ.22: ಕಾಶ್ಮೀರದಲ್ಲಿ ಮುಂದುವರಿದಿರುವ ಅಶಾಂತಿಯನ್ನು ರಾಜಕೀಯವಾಗಿ ನಿಭಾಯಿಸಬೇಕು. ಪ್ರತಿಯೊಂದನ್ನು ನ್ಯಾಯಾಂಗ ಮಾನದಂಡದೊಳಗೆ ನಿಭಾಯಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಈ ವಿಷಯದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಕಾರ್ಯಕರ್ತ ವಕೀಲ ಹಾಗೂ ಜಮ್ಮ-ಕಾಶ್ಮೀರ ನ್ಯಾಶನಲ್ ಪ್ಯಾಂಥರ್ಸ್ ಪಕ್ಷದ ನಾಯಕ ಭೀಮ ಸಿಂಗ್‌ರಿಗೆ ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್‌ಗೆ ಅದು ಸೂಚಿಸಿದೆ. ಈ ವಿವಾದಕ್ಕೆ ಹಲವು ಆಯಾಮಗಳಿವೆ. ಎಲ್ಲವನ್ನೂ ನ್ಯಾಯಾಂಗದಿಂದ ಪರಿಹರಿಸಲು ಸಾಧ್ಯವಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.

......................................................................
 ಗಣಪತಿ ದೇಣಿಗೆ ಹೆಸರಲ್ಲಿ ಶೋಷಣೆಯಿಂದ ಬೇಸತ್ತು ಊರು ಬಿಟ್ಟ ವಲಸಿಗ ಕಾರ್ಮಿಕರು


  ಪುಣೆ, ಆ.22: ಗಣೇಶ ಪೂಜೆ ಸಂಘಟಕರು ಬೇಡಿಕೆಯಿಟ್ಟಿದ್ದ ದೇಣಿಗೆಯನ್ನು ನೀಡಲು ಅಸಮರ್ಥರಾದ ಹನ್ನೊಂದು ಮಂದಿ ವಲಸಿಗ ಕಾರ್ಮಿಕರನ್ನು ಅಪಮಾನಿಸಿದ್ದಕ್ಕೆ ನೊಂದು ಅವರೆಲ್ಲರೂ ತಮ್ಮ ಉದ್ಯೋಗ ಹಾಗೂ ನಗರವನ್ನು ತೊರೆದು ತಮ್ಮ ಊರಿಗೆ ಹಿಂದಿರುಗಿದ ಘಟನೆ ವರದಿಯಾಗಿದೆ.
 ನೊಂದ ಕಾರ್ಮಿಕರು ದೂರು ದಾಖಲಿಸಿದ ತರುವಾಯ ಪೊಲೀಸರು ಶ್ರೀರಾಮ್ ಗಣೇಶ್ ಮಂಡಲ್, ಬೊಸಾರಿ ಇದರ ಮೂವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತೊಂದರೆಗೊಳಗಾದ ಕಾರ್ಮಿಕರೆಲ್ಲರೂ ಮುಸ್ಲಿಮರಾಗಿದ್ದು 20ರಿಂದ 30 ವರ್ಷದವರಾಗಿದ್ದಾರೆ. ಅವರೆಲ್ಲರೂ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಆಗಸ್ಟ್ 15ರಂದು ಗಣೇಶ ಮಂಡಲದ ಸದಸ್ಯರು ಪಿಂಪ್ರಿ- ಚಿಂಚ್ ವಾರ್ಡ್‌ನಲ್ಲಿರುವ ಕ್ರೌನ್ ಬೇಕರಿಗೆ ಆಗಮಿಸಿ ಗಣಪತಿ ಹಬ್ಬಕ್ಕಾಗಿ ರೂ. 100 ದೇಣಿಗೆ ನೀಡುವಂತೆ ಬೇಡಿಕೆಯಿಟ್ಟಿದ್ದರು. ಆದರೆ ಬೇಕರಿ ಕಾರ್ಮಿಕರು ರೂ. 50 ಮಾತ್ರ ತಮಗೆ ನೀಡಲು ಸಾಧ್ಯವೆಂದಿದ್ದರು. ಇದರಿಂದ ಕೋಪಗೊಂಡ ಮಂಡಲ ಸದಸ್ಯರು ದೇಣಿಗೆ ನೀಡಲು ನಿರಾಕರಿಸಿದ ಬೇಕರಿ ಉದ್ಯೋಗಿಗಳನ್ನು ರಸ್ತೆ ಮಧ್ಯದಲ್ಲಿ ಕುಳಿತುಕೊಳ್ಳಲು ಬಲವಂತಪಡಿಸಿದ್ದರು. ಈ ಘಟನಾವಳಿಯನ್ನು ಮಂಡಲ ಸದಸ್ಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ತಮ್ಮ ಸ್ನೇಹಿತರಿಗೆ ಕಳುಹಿಸಿದ್ದು, ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿ ಬಿಟ್ಟಿತ್ತು.
 ಸಂತ್ರಸ್ತ ಕಾರ್ಮಿಕರು ಬೇಕರಿಗೆ ಹೊಸದಾಗಿ ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಅವರೆಲ್ಲರೂ ಉದ್ಯೋಗ ತೊರೆದಿದ್ದಾರೆಂದು ಅಲ್ಲಿನ ಇತರ ನೌಕರರು ತಿಳಿಸಿದ್ದಾರೆ. ಬೇಕರಿ ಮಾಲಕ ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

 
ಮೂರರಿಂದ ನಾಲ್ಕು ಮಂದಿ ಉದ್ಯೋಗಿಗಳು ಉತ್ತರಪ್ರದೇಶದಲ್ಲಿರುವ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದರೆ, ಉಳಿದವರು ಭಯದಿಂದ ಕೆಲಸಕ್ಕೆ ಹಾಜರಾಗಿಲ್ಲವೆಂದು ಬೇಕರಿ ಮಾಲಕ ತನಿಖಾ ತಂಡಕ್ಕೆ ತಿಳಿಸಿದ್ದಾರೆಂದು ಸಹಾಯಕ ಪೊಲೀಸ್ ನಿರೀಕ್ಷಕ ಮಹೇಶ್ ಸ್ವಾಮಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News