×
Ad

ವಿಶ್ವದ 10 ಅತ್ಯಂತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7ನೆ ಸ್ಥಾನ!

Update: 2016-08-23 23:27 IST

ಹೊಸದಿಲ್ಲಿ, ಆ.23: ಭಾರತವು ಪ್ರಪಂಚದ ಅಗ್ರ 10 ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಒಟ್ಟು ವೈಯಕ್ತಿಕ ಸಂಪತ್ತು 5,600 ಶತಕೋಟಿ ಅಮೆರಿಕನ್ ಡಾಲರ್‌ಗಳೆನ್ನಲಾಗಿದೆ. ಅಮೆರಿಕವು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಭಾರತವು ಸಂಪದ್ಭರಿತ ರಾಷ್ಟ್ರಗಳಲ್ಲಿ 7ನೆಯದಾಗಿದ್ದು, ಕೆನಡ (4,700 ಶತಕೋಟಿ ಡಾಲರ್), ಆಸ್ಟ್ರೇಲಿಯ (4,500 ಶ.ಕೋ.ಡಾ.) ಹಾಗೂ ಇಟಲಿಗಳಿಗಿಂತ (4,400 ಶ.ಕೋ.ಡಾ.) ಮೇಲಿದೆ. ಅವು ಕ್ರಮವಾಗಿ 8,9 ಹಾಗೂ 10ನೆ ಸ್ಥಾನದಲ್ಲಿವೆಯೆಂದು ನ್ಯೂವರ್ಲ್ಡ್ ವೆಲ್ತ್‌ನ ವರದಿಯೊಂದು ತಿಳಿಸಿದೆ.
ಒಟ್ಟು ವೈಯಕ್ತಿಕ ಆದಾಯದಲ್ಲಿ (48,900 ಶ.ಕೋ.ಡಾ.) ಅಮೆರಿಕ ಮುಂದಿದ್ದು, ಚೀನಾ (17,400 ಶ.ಕೋ.ಡಾ.) ಎರಡನೆ ಹಾಗೂ ಜಪಾನ್ (15,100 ಶ.ಕೋ.ಡಾ.) ಮೂರನೆಯ ಸ್ಥಾನಗಳಲ್ಲಿವೆ. ಇಂಗ್ಲೆಂಡ್ (9,200 ಶ.ಕೋ.ಡಾ.) ನಾಲ್ಕನೆ, ಜರ್ಮನಿ (9,100 ಶ.ಕೋ.ಡಾ.) 5ನೆ ಹಾಗೂ ಫ್ರಾನ್ಸ್ (6,600 ಶ.ಕೋ.ಡಾ.) 6ನೆ ಸ್ಥಾನಗಳಲ್ಲಿದ್ದು, ವಿಶ್ವ ಶ್ರೀಮಂತ 10 ರಾಷ್ಟ್ರಗಳ ಕೂಟದಲ್ಲಿ ಜಾಗ ಪಡೆದಿವೆ.
ಸಂಪತ್ತು ಎಂದರೆ ವ್ಯಕ್ತಿಯೊಬ್ಬನ ನಿವ್ವಳ ಆಸ್ತಿ. ಅದು ಆಸ್ತಿ, ನಗದು ಶೇರುಗಳು ಹಾಗೂ ವ್ಯಾಪಾರ ಹಿತಾಸಕ್ತಿಗಳನ್ನು ಒಳಗೊಂಡಿದ್ದು, ಯಾವುದೇ ಬಾಧ್ಯತೆಯಿಂದ ಹೊರತಾಗಿದೆಯೆಂದಿರುವ ವರದಿಯು, ಈ ಸಂಖ್ಯೆಗಳಲ್ಲಿ ಸರಕಾರದ ನಿಧಿಗಳು ಒಳಗೊಂಡಿಲ್ಲ ಎಂದಿದೆ.

ವಿಶಾಲ ಜನಸಂಖ್ಯೆಯ ಕಾರಣದಿಂದಾಗಿ ಭಾರತವು ವಿಶ್ವದ 10 ಸಂಪದ್ಭರಿತ ರಾಷ್ಟ್ರಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ, ಆಸ್ಟ್ರೇಲಿಯದಲ್ಲಿ ಕೇವಲ 2.2 ಕೋಟಿ ಜನಸಂಖ್ಯೆಯಿದ್ದು, ಅದರ ರ್ಯಾಂಕಿಂಗ್ ಗಮನಾರ್ಹವಾಗಿದೆಯೆಂದು ವರದಿ ವಿವರಿಸಿದೆ.


ಡಾಲರ್ ಸಂಪತ್ತು ಬೆಳವಣಿಗೆಯ ದೃಷ್ಟಿಯಲ್ಲಿ ಚೀನಾವು ಕಳೆದ 5 ವರ್ಷಗಳಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಅತಿ ಶ್ರೀಮಂತ ರಾಷ್ಟ್ರವಾಗಿದೆ. ಆಸ್ಟ್ರೇಲಿಯ ಹಾಗೂ ಭಾರತಗಳೂ ಪ್ರಬಲವಾಗಿ ಬೆಳೆದಿವೆ. ಭಾರತ, ಆಸ್ಟ್ರೇಲಿಯ ಹಾಗೂ ಕೆನಡಗಳು ಕೇವಲ 12 ತಿಂಗಳುಗಳಲ್ಲಷ್ಟೇ ಇಟಲಿಯನ್ನು ಹಿಂದೆ ಹಾಕಿವೆಯೆಂದು ಅದು ಹೇಳಿದೆ.
ಅಧ್ಯಯನವು 2016ರ ಜೂನ್‌ಗೆ ಅನ್ವಯಿಸುವಂತೆ, ಒಟ್ಟು ವೈಯಕ್ತಿಕ ಸಂಪತ್ತಿನ ಅಧಾರದಲ್ಲಿ ವಿಶ್ವದ ಸಂಪದ್ಭರಿತ ರಾಷ್ಟ್ರಗಳ ರ್ಯಾಂಕಿಂಗ್ ಮಾಡಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News