×
Ad

ಬೆಳಗುವುದು ಯಾವಾಗ?

Update: 2016-08-23 23:52 IST

ಮಾನ್ಯರೆ,

ಯಾದಗಿರಿ ಜಿಲ್ಲೆ ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಮಹರ್ಷಿ ವಾಲ್ಮೀಕಿ ವೃತ್ತದಿಂದ ಗ್ಯಾಸ್ ಕಂಪೆನಿಯ ವರೆಗೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಹಲವು ವರ್ಷಗಳು ಕಳೆದರೂ ಇನ್ನೂ ದೀಪಗಳು ಉರಿಯದಿರುವುದು ವಿಪರ್ಯಾಸ. ಹೀಗಾಗಿ ರಾತ್ರಿ ಸಮಯದಲ್ಲಿ ಓಡಾಡುವ ನಾಗರಿಕರಿಗೆ ತುಂಬ ಕಷ್ಟವಾಗುತ್ತಿದೆ. ಸಾಕಷ್ಟು ಬಾರಿ ಆಪಘಾತಗಳು, ಕಳ್ಳತನ ಪ್ರಕರಣಗಳು ಕೂಡ ಸಂಭವಿಸಿವೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರೂ ಇಲ್ಲಿಯವರೆಗೆ ಗಮನ ಹರಿಸದೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಕತ್ತಲು ಕವಿದಿರುವ ಸುರಪುರ ಬೆಳಗುವುದು ಇನ್ನೂ ಯಾವಾಗ?

Writer - ಕುಮಾರ ಜಿ. ನಾಯಕ,

contributor

Editor - ಕುಮಾರ ಜಿ. ನಾಯಕ,

contributor

Similar News