ಥಾಯ್‌ಲ್ಯಾಂಡ್‌ನಲ್ಲಿ ಕಾರ್ ಬಾಂಬ್ ಸ್ಫೋಟ; 1 ಸಾವು , 30 ಮಂದಿಗೆ ಗಾಯ
Update: 2016-08-24 10:44 IST
ಬಾಂಕಾಕ್, ಆ.24: ಥಾಯ್‌ಲ್ಯಾಂಡ್‌ನ ಹೋಟೆಲೊಂದರ ಹೊರಗಡೆ ಕಾರ‍್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟಿದ್ದಾನೆ. ಮೂವತ್ತಕ್ಕೂ ಅಧಿಕ ಮಂದಿಗೆ ಗಾಯವಾಗಿದೆ.
ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ. ಪಠಾಣಿ ಪ್ಯಾಂತ್ಯದಲ್ಲಿ ಮಂಗಳವಾರ ತಡರಾತ್ರಿ ಹೋಟೆಲ್‌ನ ಹೊರಗಡೆ ಬಾಂಬ್ ಸ್ಫೋಟ ಸಂಭವಿಸಿದೆ.ಹೋಟೆಲ್ ಕಟ್ಟಡಕ್ಕೆ ಹಾನಿಯಾಗಿದೆ.