ಫಿಲಿಪ್ಪೀನ್ಸ್‌ನಲ್ಲಿ ಮಾದಕವಸ್ತು ಬೇಟೆಯಲ್ಲಿ 1900 ಮಂದಿ ಹತ್ಯೆ
Update: 2016-08-24 14:31 IST
ಮನಿಲ,ಆ.24: ಫಿಲಿಪ್ಪೀನ್ಸ್‌ನಲ್ಲಿ ಮಾದಕವಸ್ತು ಮಾಫಿಯದ ವಿರುದ್ಧ ಹೋರಾಟದಲ್ಲಿ 1900 ಮಂದಿ ಹತ್ಯೆಯಾಗಿದ್ದಾರೆಂದು ಫಿಲಿಪ್ಪೀನ್ಸ್ ಪೊಲೀಸ್ ಮುಖ್ಯಸ್ಥ ರೊನಾಲ್ಡ್ ದೆಲ ರೋಸ್ ತಿಳಿಸಿದ್ದಾರೆಂದು ವರದಿಯಾಗಿದೆ.ಕಳೆದ ಜುಲೈ ಒಂದರಿಂದ ಆರಂಭವಾದ ಆಪರೇಷನ್‌ನಲ್ಲಿ 750 ಮಾದಕವಸ್ತು ಕಳ್ಳಸಾಗಾಟದಾರರು ಮತ್ತು ಬಳಕೆದಾರರನ್ನು ಕೊಲ್ಲಲಾಯಿತು ಎಂದು ಅವರು ತಿಳಿಸಿದ್ದಾರೆ.
ಮಾದಕವಸ್ತುವಿಗೆ ಸಂಬಂಧಿಸಿ 1100 ಮಂದಿ ಮೃತರಾದ ಇನ್ನೊಂದು ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಪೊಲೀಸರೆ ಇವರನ್ನೆಲ್ಲ ಹತ್ಯೆಗೈದಿದ್ದಾರೆಯೇ ಎಂಬುದನ್ನು ಪೊಲೀಸ್ ಮುಖ್ಯಸ್ಥ ರೊನಾಲ್ಡ್ ಸ್ಪಷ್ಟಪಡಿಸಿಲ್ಲ.
ಆದರೆ ಈ ಸಂದರ್ಭದಲ್ಲಿ ಅವರು "ಪೊಲೀಸರು ಕೊಲೆಗಡುಕರು ಅಲ್ಲ" ಎಂದು ಹೇಳಿದ್ದಾರೆಂದು ವರದಿಯಾಗಿದೆ.