×
Ad

ವಿಮಾನ ನಿಲ್ದಾಣದಲ್ಲಿ ಮಾಡಲೇಬಾರದ 10 ತಪ್ಪುಗಳು

Update: 2016-08-24 23:30 IST

ಬ್ಯಾಗೇಜ್ ಡ್ರಾಪ್ ಮಾಡುವುದು, ಭದ್ರತಾ ಸಾಲಿನಲ್ಲಿ ನಿಲ್ಲುವುದು, ಬೋರ್ಡಿಂಗ್ ಗೇಟಿಗೆ ಹೋಗುವುದು ಹೀಗೆ ಇತ್ತೀಚೆಗೆ ವಿಮಾನ ನಿಲ್ದಾಣಗಳಲ್ಲಿ ಹಿಂದೆಂದೂ ನೋಡದಷ್ಟು ಸಮಯ ವ್ಯಯಿಸಬೇಕಾಗುತ್ತದೆ. ನಾವು ವಿಮಾನ ನಿಲ್ದಾಣದಲ್ಲಿ ಮಾಡುವ 10 ಸಾಮಾನ್ಯ ತಪ್ಪುಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ಆದಷ್ಟು ಕಡಿಮೆ ಸಂಕಷ್ಟ ಎದುರಿಸಿ ವಿಮಾನ ನಿಲ್ದಾಣ ದಾಟಿ ಹೋಗುವುದು ಹೇಗೆ ಎನ್ನುವ ವಿವರ ಇಲ್ಲಿದೆ.

1. ನಿಮ್ಮ ಏರ್‌ಲೈನ್/ ಏರ್‌ಪೋರ್ಟ್‌ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳದಿರುವುದು

ನೀವು ಪ್ರಯಾಣಿಸುವ ವಿಮಾನದ ಆ್ಯಪ್ ಅನ್ನು ವಿಮಾನ ನಿಲ್ದಾಣದಲ್ಲಿ ಮಾತ್ರ ಬಳಸುವುದು ಮಾತ್ರವಲ್ಲ, ಅಲ್ಲಿಗೆ ಹೋಗುವ ಮೊದಲೂ ಬಳಸಬೇಕು. ಬಹಳಷ್ಟು ವಿಮಾನಗಳು ಆ್ಯಪ್ ಹೊಂದಿದ್ದು, ಅದನ್ನು ನಿಮ್ಮ ಸ್ಮಾರ್ಟ್‌ಫೋನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ವಿಮಾನ ವಿಳಂಬವಾಗಿದೆಯೇ ಅಥವಾ ರದ್ದಾಗಿದೆಯೇ ಎನ್ನುವುದು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲೇ ತಿಳಿದುಕೊಳ್ಳಬಹುದು. ಒಮ್ಮೆ ವಿಮಾನ ನಿಲ್ದಾಣ ತಲುಪಿದ ಮೇಲೆ ಟರ್ಮಿನಲ್ ಸ್ಕ್ರೀನಿನಲ್ಲಿರುವ ವಿಮಾನದ ಬರುವ ಮತ್ತು ಹೋಗುವ ವಿವರಗಳಿಗಿಂತ ಹೆಚ್ಚು ಅಪ್ ಟು ಡೇಟ್ ವಿವರ ನಿಮ್ಮ ಆ್ಯಪ್‌ನಲ್ಲಿ ಸಿಗಲಿದೆ. ಬಹಳಷ್ಟು ವಿಮಾನ ನಿಲ್ದಾಣಗಳು ಆ್ಯಪ್ ಅಭಿವೃದ್ಧಿಪಡಿಸಿ, ಟರ್ಮಿನಲ್ಸ್ ನಕ್ಷೆ, ಸೇವೆಗಳ ಪಟ್ಟಿ ಇತ್ಯಾದಿಗಳನ್ನು ತಿಳಿದುಕೊಳ್ಳಲು ಪ್ರಯಾಣಿಕರಿಗೆ ನೆರವಾಗುತ್ತಿವೆ. ಅಂತಹ ಒಂದು ಉಪಯುಕ್ತ ಆ್ಯಪ್ ಗೇಟ್‌ಗುರು. ಇದರಲ್ಲಿ 200ಕ್ಕೂ ಅಧಿಕ ವಿಮಾನ ನಿಲ್ದಾಣಗಳ ವಿವರಗಳು ಮತ್ತು ಇತರ ಫೀಚರ್ ಗಳಿವೆ. ಇದರಲ್ಲಿ ಬಳಕೆದಾರರು ತಮ್ಮಿಚ್ಛೆಯ ಮಳಿಗೆಗಳು ಮತ್ತು ರೆಸ್ಟೊರೆಂಟ್‌ಗಳಿಗೆ ರೇಟ್ ನೀಡಬಹುದು. ಅಲ್ಲದೆ ಸಲಹೆಗಳನ್ನೂ ನೀಡಬಹುದು.

2. ಆನ್‌ಲೈನಲ್ಲಿ ಪರಿಶೀಲಿಸದೆ ಇರುವುದು

ಕೇವಲ ಚೆಕಿನ್‌ಗಾಗಿಯೇ ಟಿಕೆಟ್ ಕೌಂಟರ್ ಬಳಿ ಸಾಲು ನಿಂತಿರುವವರನ್ನು ಕಂಡು ಅಚ್ಚರಿಯಾಗದೆ ಇರದು. (ಚೆಕಿನ್ ಕಿಯೋಸ್ಕ್‌ಗಳೂ ಇವೆ). ನಿಮಗೆ ಏನೋ ಸಮಸ್ಯೆಯಿದ್ದು ಮೊದಲೇ ಪರಿಹರಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಆನ್‌ಲೈನ್‌ನಲ್ಲಿ ಚೆಕಿನ್ ಮಾಡದೆ ಇರಲು ಉತ್ತಮ ಕಾರಣಗಳೇನೂ ಇಲ್ಲ. ಟೆಕ್ಸ್ಟ್ ಅಥವಾ ಇಮೇಲ್ ಲಿಂಕ್ ಮೂಲಕ ಟಿಕೆಟನ್ನು ನಿಮ್ಮ ಫೋನಿಗೆ ನೇರವಾಗಿ ಪಡೆದುಕೊಳ್ಳಿ ಮತ್ತು ನಿಮ್ಮ ಬಳಿ ಚೆಕಿನ್‌ಗೆ ಲಗೇಜ್ ಇಲ್ಲದಿದ್ದಲ್ಲಿ ಕೌಂಟರಿಗೆ ಹೋಗುವುದನ್ನೇ ತಪ್ಪಿಸಿಕೊಳ್ಳಬಹುದು ಮತ್ತು ನೇರವಾಗಿ ಭದ್ರತಾ ಲೈನಿಗೆ ತೆರಳಬಹುದು. (ಲಗೇಜ್ ಇದ್ದರೆ ಅದನ್ನು ಕೌಂಟರ್ ಬಳಿ ಡ್ರಾಪ್ ಮಾಡಬೇಕು. ಆದರೆ ಮೊದಲೇ ಚೆಕಿನ್ ಆಗಿದ್ದರೆ ಈ ಕೆಲಸ ಬೇಗವಾಗುತ್ತದೆ). ಕೆಲವು ಏರ್‌ಲೈನ್ಸ್ ಚೆಕಿನ್ ಮಾಡಿದಾಗಲೇ ಸೀಟ್ ಆರಿಸಲು ಬಿಡುತ್ತದೆ. ಇವುಗಳಲ್ಲಿ ನೀವು ಪ್ರಯಾಣಿಸುತ್ತಿದ್ದಲ್ಲಿ ಸಾಧ್ಯವಾದಷ್ಟು ಬೇಗನೇ, ಚೆಕಿನ್ ಸಮಯದ ಒಳಗೆಯೇ ನೀವು ಚೆಕಿನ್ ಮಾಡಿ ಸೀಟು ಆರಿಸಲು ಬಯಸಿರುತ್ತೀರಿ.

3. ಟಿಎಸ್‌ಎ ಪ್ರಿಚೆಕ್ ಹೊಂದಿರದೆ ಇರುವುದು

ವರ್ಷಕ್ಕೆ ಹಲವು ಬಾರಿ ವಿಮಾನ ಪ್ರಯಾಣ ಮಾಡುವವರಾಗಿದ್ದರೆ, ನೀವು ಟಿಎಸ್‌ಎ ಪ್ರಿಚೆಕ್‌ಗೆ ಅರ್ಜಿ ಹಾಕಬಹುದು. ಸಾಮಾನ್ಯವಾಗಿ ಪ್ರಿಚೆಕ್ ಸಾಲುಗಳು ಸಾಮಾನ್ಯ ಸಾಲುಗಳಷ್ಟು ಉದ್ದವಿರುವುದಿಲ್ಲ. ನೀವು ಶೂಗಳು, ಲ್ಯಾಪ್‌ಟಾಪ್ ಮತ್ತು ದ್ರವಗಳನ್ನು ಕಳಚಬೇಕಾಗಿಲ್ಲದ ಕಾರಣ ಲೈನ್‌ಗಳು ಬೇಗನೇ ಮುಗಿಯುತ್ತವೆ ಮತ್ತು ತರಾತುರಿಯಲ್ಲಿ ವಸ್ತುಗಳನ್ನಿಡುವ ಪೊಟ್ಟಣದಲ್ಲಿ ಏನನ್ನೋ ಬಿಟ್ಟು ಮರೆತು ಹೋಗುವ ಸಂದರ್ಭವೂ ಬಾರದು. ಇದಕ್ಕಾಗಿ ನೀವು ಅರ್ಜಿ ತುಂಬಿ ಮರುಪಾವತಿಯಾಗದ ಶುಲ್ಕ ತೆರಬೇಕು. ನಂತರ 380 ದಾಖಲಾತಿ ಕೇಂದ್ರಗಳಲ್ಲಿ ಒಂದರಲ್ಲಿ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಬಹುದು. ಇದು ದೊಡ್ಡ ಕೆಲಸ ಎಂದು ಅನಿಸಿದರೂ ಐದು ವರ್ಷಗಳ ಕಾಲ ಆರಾಮವಾಗಿ ಓಡಾಡಬಹುದು. ತೆತ್ತ ಬೆಲೆಗೆ ತಕ್ಕಷ್ಟು ಸಮಯವೂ ಉಳಿಯುತ್ತದೆ.

4. ಜೊತೆಯಲ್ಲಿ ಆಹಾರ ತರದೆ ಇರುವುದು

ವಿಮಾನ ನಿಲ್ದಾಣದ ಆಹಾರ ರೆಸ್ಟೊರೆಂಟ್, ಮಳಿಗೆ ಅಥವಾ ಎಲ್ಲೇ ಆದರೂ ದುಬಾರಿ ಬೆಲೆ ಇರುತ್ತದೆ. ಅಗತ್ಯಕ್ಕೆ ಕೊಡುವ ಹಣವೇ ವಿನಾ ಇದು ಗುಣಮಟ್ಟಕ್ಕೆ ತೆರುವ ಹಣವಾಗಿರುವುದಿಲ್ಲ. ನಿಮ್ಮ ಲಗೇಜಲ್ಲಿ ಆಹಾರ ಹೊಂದಿರಲು ಇದೊಂದೇ ಕಾರಣವಲ್ಲ. ಟಿಎಸ್‌ಎ ಲೈನಲ್ಲಿ ಬಹಳ ಹೊತ್ತು ನಿಂತು ಹೊಟ್ಟೆ ಹಸಿವು ಶುರುವಾಗಿರುತ್ತದೆ. ಸ್ಯಾಂಡ್‌ವಿಚ್, ಚಿಪ್ಸ್, ಕುಕೀಸ್ ಮತ್ತು ಹಣ್ಣುಗಳಿದ್ದರೆ ಉತ್ತಮ. ದ್ರವ ಪದಾರ್ಥಗಳಾದ ಸಲಾಡ್ ಡ್ರೆಸಿಂಗ್, ಸೂಪ್ ಮತ್ತು ಯೊಗಾರ್ಟ್ ಬಿಟ್ಟು ಉಳಿದವನ್ನು ಒಳಗೆ ಬಿಡುತ್ತಾರೆ. ಸಂಶಯವಿದ್ದರೆ ಟಿಎಸ್‌ಎ ವೆಬ್‌ತಾಣದಲ್ಲಿ ನಿಷೇಧಿತ ಆಹಾರ ವಸ್ತುಗಳ ವಿವರ ಪರೀಕ್ಷಿಸಿ.

5. ತಪ್ಪು ಬಟ್ಟೆಗಳನ್ನು ತೊಡುವುದು

ವಿಮಾನದಲ್ಲಿ ಆರಾಮಕ್ಕಾಗಿ ಬಟ್ಟೆ ತೊಡುವುದಲ್ಲ. ವೇಗವಾಗಿ ಸಾಲು ಮುಂದೆ ಸಾಗುವ ಗುರಿಯೂ ಇರಬೇಕು. ಟಿಎಸ್‌ಎ ಪ್ರಿಚೆಕ್ ದಾಖಲಾತಿ ನಿಮ್ಮ ಬಳಿ ಇದ್ದರೂ ಕೆಲವೊಮ್ಮೆ ಅವುಗಳು ಮುಚ್ಚಿರುವ ಕಾರಣ ಸಾಮಾನ್ಯ ಸಾಲಿನಲ್ಲಿಯೇ ನಿಲ್ಲಬೇಕಾಗಿ ಬರಬಹುದು. ಆಗ ಮತ್ತೆ ಲ್ಯಾಪ್ ಟಾಪ್ ತೆಗೆಯುವುದು, ಶೂ ಮತ್ತು ಬೆಲ್ಟ್ ತೆಗೆಯುವುದು ಮತ್ತು ದ್ರವ ಪದಾರ್ಥಗಳನ್ನು ಹುಡುಕುವುದು ನಡೆಯುತ್ತದೆ. ಭದ್ರತೆ ಬೇಕೆಂದರೆ ಇದೆಲ್ಲ ಅಗತ್ಯ. ಆದರೆ ಬಾಡಿ ಸ್ಕಾನರ್ ಮಾಡುವಾಗ ಅಲಾರಾಂಗೆ ಕಾರಣವಾಗುವ ದುಬಾರಿ ಆಭರಣ ಅಥವಾ ಬೆಲ್ಟ್ ತೊಟ್ಟು ಅದನ್ನು ತೆಗೆಯುವ ಪ್ರಮೇಯ ಬರುವಂತೆ ಮಾಡಬೇಡಿ. ನಿಮ್ಮ ಚಪ್ಪಲಿ ಸರಳವಾಗಿರಲಿ. ತೆಗೆಯಲು ಸುಲಭವಾದ ಶೂಗಳಿರಲಿ.

6. ಗೇಟಿನ ಬಳಿ ಕರ್ಟೆಸಿ ಚೆಕ್ಡ್ ಬ್ಯಾಗ್ ಲಾಭ ಪಡೆಯದೆ ಇರುವುದು

ಬ್ಯಾಗನ್ನು ಎಂದೂ ಪರೀಕ್ಷಿಸದೆ ಪ್ರಯಾಣಿಸುವ ವ್ಯಕ್ತಿ ನೀವಾಗಿದ್ದರೆ ಇದು ನಿಮಗಲ್ಲ. ಆದರೆ ಬ್ಯಾಗ್ ಪರೀಕ್ಷಿಸಬೇಕಿದ್ದಲ್ಲಿ (ಲಗೇಜ್ ಪಡೆಯಲು ಹೇಗೂ ಹೋಗಬೇಕು) ಹೆಚ್ಚು ಬೆಲೆ ತೆರದೆಯೇ ಗೇಟಿನ ಬಳಿ ನಿಮ್ಮ ಲಗೇಜನ್ನು ಪರೀಕ್ಷಿಸಬಹುದು. ಕೆಲವೊಮ್ಮೆ ದೇಶಿ ವಿಮಾನಗಳಲ್ಲಿ ಬ್ಯಾಗ್ ಇಡುವ ಜಾಗ ತುಂಬಿರುವಾಗ ಇಡಲು ಸ್ಥಳವಿರುವುದಿಲ್ಲ. ಸಾಮಾನ್ಯವಾಗಿ ಗೇಟ್ ಏಜೆಂಟ್ ಕೈ ಬ್ಯಾಗ್ ಗಳನ್ನು ಪರೀಕ್ಷಿಸುವಂತೆ ಕರೆ ಕೊಡುತ್ತಾನೆ. ಆದರೆ ಕೆಲವೊಮ್ಮೆ ಅವರು ಅಂಗೀಕಾರ ನೀಡಿರುತ್ತಾರೆ. ಆದರೆ ವಿಮಾನದಲ್ಲಿ ಸೀಟಿನ ಅಡಿಯಲ್ಲಿ ಬ್ಯಾಗ್ ನಿಲ್ಲುತ್ತದೆ ಎನ್ನುವುದನ್ನು ಖಚಿತಪಡಿಸಿಕೊಂಡಿರಬೇಕು. ಕೆಲವೊಮ್ಮೆ ಕನೆಕ್ಟಿಂಗ್ ವಿಮಾನ ಇರುವಾಗ ವಿಮಾನ ನಿಲ್ದಾಣಗಳಲ್ಲಿ ಬ್ಯಾಗ್ ಹಿಡಿದು ಓಡಾಡಬೇಕಾಗಿ ಬರುವಾಗ ಕಡಿಮೆ ಕೈ ಬ್ಯಾಗ್ ಇದ್ದರೆ ಉತ್ತಮ.

7. ಸ್ನೇಹಮಯಿಯಾಗಿರದೆ ಇರುವುದು

ಕೆಲವೊಮ್ಮೆ ಇತರರ ನೆರವಿನ ಅಗತ್ಯವಿರುತ್ತದೆ. ಸಮಸ್ಯೆ ನಮ್ಮಿಂದಲೇ ಬಂದಿರಬಹುದು ಅಥವಾ ವಿಮಾನದಿಂದ, ಇತರರಿಂದ ಬಂದಿರಬಹುದು. ಆದರೆ ಸಿಟ್ಟು ಮಾಡಿಕೊಂಡು ದರ್ಪದಿಂದ, ಸೊಕ್ಕಿನಿಂದ ವರ್ತಿಸಬೇಡಿ. ಸಹನೆ ಮತ್ತು ನಗುವೇ ಗೇಟುಗಳು ಮತ್ತು ವಿಮಾನ ಪರಿಚಾರಿಕ ಟಿಎಸ್‌ಎ ಏಜೆಂಟರು ಮತ್ತು ಸಹಪ್ರಯಾಣಿಕರಿಂದ ಉತ್ತಮ ನೆರವು ಸಿಗುವಂತೆ ಮಾಡುವುದು. ಕೆಲವೊಮ್ಮೆ ಅತಿ ಭಾರವಿರುವ ಬ್ಯಾಗುಗಳು ಇರುವಾಗ ಸೀಟು ಬದಲಾಗಿರುತ್ತದೆ. ಯಾರೋ ನಯವಾಗಿ ಕೇಳಿದ ಕಾರಣ ಅವರಿಗೆ ಹಿತವಾಗಲು ಸೀಟು ಬದಲಾಗಿರುತ್ತದೆ. ನಿಮಗೆ ಬಯಸಿದ್ದು ಸಿಗದೆ ಇದ್ದರೂ ಸಾಧ್ಯವಾದಷ್ಟು ಸಹೃದಯವಾಗಿ ಮಾತುಕತೆಯಾಗಿರುವುದನ್ನು ಖಚಿತಪಡಿಸಿ.

8. ವಿಮಾನ ನಿಲ್ದಾಣ ಲಾಂಜಿಗೆ ಪಾಸ್ ಖರೀದಿಸದೆ ಇರುವುದು

ನೀವು ಪ್ರಭಾವಿ ಪ್ರಯಾಣಿಕರಾಗಿರದೆ ಇದ್ದಲ್ಲಿ ಮತ್ತು ಈ ಕೊಡುಗೆ ಸಿಗುವ ಕ್ರೆಡಿಟ್ ಕಾರ್ಡ್‌ನಲ್ಲಿ ದಾಖಲಾಗಿರದೆ ಇದ್ದಲ್ಲಿ ವಿಮಾನ ನಿಲ್ದಾಣಗಳ ಲಾಂಜ್‌ಗಳು ಬೆಲೆ ಬಾಳುವ, ಆಡಂಬರದ ಜಾಗವಾಗಲಿದೆ. ಆದರೆ ಕೆಲವು ಸಂದರ್ಭಗಳೂ ಇರುತ್ತವೆ. ಮುಖ್ಯವಾಗಿ ಧೀರ್ಘ ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ನಿಮ್ಮ ವಿಮಾನದ ಏರ್‌ಪೋರ್ಟ್ ಲಾಂಜಿಗೆ ದಿನದ ಪಾಸ್ ಖರೀದಿಸುವುದು ಉತ್ತಮ. ಧೀರ್ಘ ವಿಳಂಬವಾದಾಗ ಆರಾಮವಾಗಿ ವಿಶ್ರಾಂತಿಗಾಗಿ ಶುಲ್ಕ ತೆತ್ತು ಅದರಲ್ಲಿ ವೈಫೈ, ಆಹಾರ ಮತ್ತು ಪಾನೀಯಗಳನ್ನೂ ಪಡೆಯಬಹುದು. ಬಹುತೇಕ ಅಮೆರಿಕದ ವಿಮಾನಗಳು ದಿನದ ಪಾಸಿಗೆ $50-$60  ಬೆಲೆ ಹೇಳುತ್ತಾರೆ. ಆಹಾರ ಮತ್ತು ಪಾನೀಯಕ್ಕೆ ಪ್ರತ್ಯೇಕ ಹಣ ತೆರಬೇಕಾಗಿರದ ಕಾರಣ ಈ ಬೆಲೆ ತೆರಬಹುದು.

9. ಏರ್‌ಪೋರ್ಟ್ ವೈಫೈ ಮೂಲಕ ಖಾಸಗಿ ಮಾಹಿತಿ ಕಳುಹಿಸುವುದು

ಇತ್ತೀಚೆಗೆ ವಿಮಾನ ನಿಲ್ದಾಣಗಳು ಉಚಿತ ವೈಫೈ ಪ್ರಯಾಣಿಕರ ಹಿತಕ್ಕಾಗಿ ಇರುವುದಲ್ಲ, ಅಗತ್ಯಕ್ಕಾಗಿ ಎಂದು ಒಪ್ಪಿಕೊಂಡಿವೆ. ಆದರೆ ಉಚಿತ ಎಂದರೆ ಸುರಕ್ಷಿತ ಎಂದಲ್ಲ. ಸಾರ್ವಜನಿಕ ವೈಫೈಗೆ ಭದ್ರತೆ ಇರುವುದಿಲ್ಲ. ಹೀಗಾಗಿ ಖಾಸಗಿ ಪಾಸ್‌ವರ್ಡ್, ಐಡಿಗಳನ್ನು ಹಾಕಬಾರದು. ಹಾಗೆ ಮಾಡಿದರೆ ಫೇಸ್ಬುಕ್ ಹ್ಯಾಕ್ ಆಗಿರುವುದು, ಬ್ಯಾಂಕ್ ಖಾತೆ ಖಾಲಿಯಾಗಿರುವುದನ್ನು ಕಾಣಬಹುದು.

10. ಲಗೇಜಿಗೆ ಗುರುತು ಹಾಕದಿರುವುದು

ಪ್ರಯಾಣ ಮುಗಿದು ಮನೆಗೆ ಹೋಗುವ ಸಮಯ ಬಂದಿರುತ್ತದೆ. ಅಂತಿಮವಾಗಿ ಲಗೇಜನ್ನು ಬ್ಯಾಗೇಜ್ ಕ್ಲೈಮ್‌ನಿಂದ ಪಡೆದುಕೊಳ್ಳಲು ಸಿದ್ಧರಾಗುತ್ತೀರಿ. ಒಂದೊಂದಾಗಿ ಲಗೇಜ್‌ಗಳು ಬರುತ್ತಲೇ ಇವೆ. ಆದರೆ ಎಲ್ಲಾ ಸೂಟ್‌ಕೇಸ್‌ಗಳು ಒಂದೇ ತೆರನಾಗಿರುವುದು ಕಾಣುತ್ತದೆ. ಇದನ್ನು ತಪ್ಪಿಸಲು ನಿಮ್ಮ ಲಗೇಜಿಗೆ ಸ್ಪಷ್ಟವಾಗಿ ಕಾಣುವ ಗುರುತು ಮಾಡಿರಬೇಕು. ಅದರಲ್ಲಿ ನಿಮ್ಮ ಸಂಪರ್ಕ ವಿವರಗಳೂ ಇದ್ದರೆ ಉತ್ತಮ. ನಿಮ್ಮ ಲಗೇಜ್ ಕಳೆದು ಹೋದರೂ ಅದನ್ನು ಗುರುತಿಸುವುದು ಸುಲಭವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News