×
Ad

ಜೈಲಿನಲ್ಲಿದ್ದೇ ಆಡಳಿತ ನಡೆಸಲಿರುವ ಮೇಯರ್

Update: 2016-08-24 20:13 IST

 ಕರಾಚಿ,ಆ.24: ಉಗ್ರರಿಗೆ ನೆರವು ನೀಡಿದ ಶಂಕೆಯಲ್ಲಿ ಕಳೆದ ತಿಂಗಳು ಬಂಧಿತರಾಗಿರುವ ಎಂಕ್ಯೂಎಂ ಪಕ್ಷದ ನಾಯಕ ವಾಸಿಂ ಅಖ್ತರ್, ಜೈಲಿನಲ್ಲಿದ್ದುಕೊಂಡೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕರಾಚಿ ನಗರದ ಮೇಯರ್ ಆಗಿ ಕಾರ್ಯನಿರ್ವಹಿಸಲಿದ್ದಾರೆಂದು ಅವರ ವಕೀಲರು ಬುಧವಾರ ತಿಳಿಸಿದ್ದಾರೆ.


 ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಕರಾಚಿ ನಗರಾಡಳಿತ ಚುನಾವಣೆಯಲ್ಲಿ ಮುಖ್ತರ್ ನಾಯಕತ್ವದಲ್ಲಿ ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) ಪಕ್ಷವು ಭರ್ಜರಿ ಬಹುಮದೊಂದಿಗೆ ಅಧಿಕಾರಕ್ಕೇರಿತ್ತು. ಆದರೆ ಕಾನೂನಿನ ಕೆಲವು ಅಡೆತಡೆಗಳಿಂದಾಗಿ ಪಕ್ಷದ ಸದಸ್ಯರಿಗೆ ಮೇಯರ್ ಆಯ್ಕೆಗೆ ಮತಚಲಾಯಿಸಲು ಸಾಧ್ಯವಾಗದ ಕಾರಣ ಅಖ್ತರ್‌ಗೆ ಅಧಿಕಾರ ಸ್ವೀಕರಿಸಿರಲಿಲ್ಲ.


     ವಾಸಿಂ ಅಖ್ತರ್ ಅವರು ಜೈಲಿನಲ್ಲಿಯೇ ಕಚೇರಿಯನ್ನು ತೆರೆಯಲಿದ್ದಾರೆ ಹಾಗೂ ವಿಡಿಯೋ ಲಿಂಕ್ ಮೂಲಕ ಅವರು ನಗರಪಾಲಿಕೆಯ ಕಲಾಪಗಳನ್ನು ನಿರ್ವಹಿಸಲಿದ್ದಾರೆಂದು ಅಖ್ತರ್ ಅವರ ನ್ಯಾಯವಾದಿ ಮೆಹಫೂಝ್ ಯಾರ್ ಖಾನ್ ತಿಳಿಸಿದ್ದಾರೆ. ಸೆರೆಮನೆಯಲ್ಲಿ ಸುಸಜ್ಜಿತವಾದ ಕಚೇರಿಯನ್ನು ಅಖ್ತರ್ ಅವರಿಗೆ ಒದಿಗಸಬೇಕೆಂದು ತಾವು ಅಧಿಕಾರಿಗಳನ್ನು ಕೋರುವುದಾಗಿ ಎಂಕ್ಯೂಎಂನ ನಾಯಕರು ತಿಳಿಸಿದ್ದಾರೆ. ಜೈಲಿನಿಂದ ಹೊರಗೆ ಯಾವುದೇ ಸಭೆಯಲ್ಲಿ ಭಾಗವಹಿಸಬೇಕಿದ್ದಾಗ ಅವರಿಗೆ ಪೊಲೀಸ್ ಬೆಂಗಾವಲು ನೀಡಬೇಕೆಂದು ಎಂಕ್ಯೂಎಂ ನಾಯಕರು ಆಗ್ರಹಿಸಿದ್ದಾರೆ.


ಭಯೋತ್ಪಾದನೆ ಹಾಗೂ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರಿಗೆ ಆಶ್ರಯ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಿದ ಆರೋಪದಲ್ಲಿ ಅಖ್ತರ್ ಅವರನ್ನು ಜುಲೈ 19ರಂದು ಬಂಧಿಸಲಾಗಿತ್ತು. ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪಗಳನ್ನೂ ಅವರು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News