ಬರಪೀಡಿತ ಯವತ್ಮಾಲ್ ಜಿಲ್ಲೆಯಲ್ಲಿ ನೇಣಿಗೆ ಶರಣಾದ ತಂದೆ-ಮಗ
Update: 2016-08-24 23:06 IST
ಮುಂಬೈ,ಆ.24: ಮಹಾರಾಷ್ಟ್ರದ ಬರಪೀಡಿತ ಯವತ್ಮಾಲ್ ಜಿಲ್ಲೆಯಲ್ಲಿ ತಂದೆ ಮತ್ತು ಮಗ ತಮ್ಮ ಗ್ರಾಮದ ಸಮೀಪ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರೂ ವೃತ್ತಿಯಲ್ಲಿ ಕೃಷಿಕರಾಗಿದ್ದು,ಮಳೆಯ ಕೊರತೆಯಿಂದಾಗಿ ಕಳೆದ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದರು. ಸ್ವಂತದ ಐದು ಎಕರೆ ಜಮೀನಿನ ಜೊತೆಗೆ ಇನ್ನೂ 14 ಎಕರೆ ಜಮೀನನ್ನು ಬಾಡಿಗೆಗೆ ಪಡೆದುಕೊಂಡು ಸೋಯಾ ಬೀನ್ ಮತ್ತು ಇತರ ಬೆಳೆಗಳನ್ನು ಬಿತ್ತಿದ್ದರು.
ಕುಟುಂಬವು ಬಡತನದಿಂದ ತೀರ ಹತಾಶಗೊಂಡಿತ್ತು ಮತ್ತು ಮಾನಸಿಕ ಅಸ್ವಸ್ಥ ಪುತ್ರನ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.