×
Ad

ದಿಲ್ಲಿಯ ಹೊರಗೆ ಜಾಹೀರಾತಿಗಾಗಿ ಕೇಜ್ರಿ ಸರಕಾರದಿಂದ ರೂ.28 ಕೋಟಿ ವೆಚ್ಚ

Update: 2016-08-24 23:08 IST

ಹೊಸದಿಲ್ಲಿ, ಆ.24: ದಿಲ್ಲಿಯ ಹೊರಗೆ ಸರಕಾರದ ಕುರಿತು ಪ್ರಚಾರ ಹಾಗೂ ಜಾಹೀರಾತಿಗಾಗಿ ರೂ. 28 ಕೋಟಿ ಖರ್ಚು ಮಾಡಿರುವುದಕ್ಕಾಗಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರಕಾರವನ್ನು ಮಹಾಲೇಖಪಾಲವು(ಸಿಎಜಿ) ತರಾಟೆಗೆ ತೆಗೆದುಕೊಂಡಿದೆಯೆಂದು ವರದಿಯಾಗಿದೆ.

ದಿಲ್ಲಿ ರಾಷ್ಟ್ರ ರಾಜಧಾನಿ ಪ್ರಾಂತದ ಹೊರಗೆ ಒಂದೇ ಒಂದು ಪ್ರಚಾರ ಹಾಗೂ ಅಭಿಯಾನಕ್ಕಾಗಿ ರೂ. 35.40 ಕೋಟಿಯ ಶೇ.80ರಷ್ಟು, ತೆರಿಗೆದಾರರ ಹಣವನ್ನು ಕೇಜ್ರಿವಾಲ್ ಸರಕಾರ ಖರ್ಚು ಮಾಡಿರುವುದನ್ನು ಇನ್ನಷ್ಟೇ ಮಂಡಿಸಬೇಕಾದ ಲೆಕ್ಕ ಪರಿಶೀಲನೆ ವರದಿಯಲ್ಲಿ ಸಿಎಜಿ ಪ್ರಶ್ನಿಸಿದೆ.
ಜಾಹೀರಾತು ಹಾಗೂ ಪ್ರಚಾರ ಅಭಿಯಾನಗಳಿಗೆ ದಿಲ್ಲಿ ಸರಕಾರ ಮಾಡಿರುವ ರೂ.25 ಕೋಟಿ ವೆಚ್ಚವು ಸುಪ್ರೀಂಕೋರ್ಟ್ ವಿಧಿಸಿರುವ ಆರ್ಥಿಕ ಆಡಳಿತದ ಸಾಮಾನ್ಯ ಸಿದ್ಧಾಂತಗಳಿಗೆ ಅನುಗುಣವಾಗಿಲ್ಲವೆಂದು ಸಿಎಜಿ ವರದಿಯ 2ನೆ ಅಧ್ಯಾಯದಲ್ಲಿ ಹೇಳಲಾಗಿದೆಯೆಂದು ‘ಟೈಂಸ್ ನೌ’ ವರದಿ ಮಾಡಿದೆ.
ಪದ್ಧತಿಯಂತೆ 2016ರ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಲೆಕ್ಕ ಪರಿಶೋಧನೆ ವರದಿಯ ಕರಡು ಪ್ರತಿಯನ್ನು ಪ್ರತಿಕ್ರಿಯೆ ಕೋರಿ ಜು.8ರಂದು ಸರಕಾರಕ್ಕೆ ಕಳುಹಿಸಲಾಗಿತ್ತು. ಅದನ್ನವರು ಆ.16ರೊಳಗೆ ಹಿಂದೆ ಕಳುಹಿಸಬೇಕಿತ್ತು. ಆದರೆ ಇನ್ನೂ ಕಳುಹಿಸಿಲ್ಲವೆಂದು ಮೂಲಗಳು ತಿಳಿಸಿವೆ.
ಪ್ರಚಾರ ಹಾಗೂ ಜಾಹೀರಾತಿಗಾಗಿ ಬಜೆಟ್‌ನಲ್ಲಿ ರೂ. 526 ಕೋಟಿ ಮೀಸಲಿರಿಸಿದ್ದ ಕೇಜ್ರಿವಾಲ್ ಸರಕಾರದ ನಿರ್ಧಾರ, ವಿಪಕ್ಷಗಳು ಮಾತ್ರವಲ್ಲದೆ ಸ್ವಪಕ್ಷೀಯರಿಂದಲೂ ಟೀಕೆಗೊಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News