×
Ad

ಸ್ಕಾಟ್ ಲ್ಯಾಂಡ್ : ಮುಸ್ಲಿಂ ಮಹಿಳಾ ಪೊಲೀಸರಿಗೆ ಹಿಜಾಬ್ ಗೆ ಅವಕಾಶ

Update: 2016-08-25 11:16 IST

ಸ್ಕಾಟ್ ಲ್ಯಾಂಡ್, ಆ.25: ಮುಸ್ಲಿಂ ಮಹಿಳಾ ಪೊಲೀಸರು ತಮ್ಮ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಬಹುದೆಂದು ಸ್ಕಾಟ್ ಲ್ಯಾಂಡ್ ಪೊಲೀಸ್ ಇಲಾಖೆ ಹೇಳಿದೆ. ಪೊಲೀಸ್ ಇಲಾಖೆ ಸೇರಲು ಮುಸ್ಲಿಂ ಮಹಿಳೆಯರನ್ನು ಉತ್ತೇಜಿಸುವ ಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ತಮ್ಮ ಧರ್ಮವನ್ನು ಸೂಚಿಸುವ ಶಿರವಸ್ತ್ರವನ್ನು ಧರಿಸುವ ಆಯ್ಕೆಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈ ಹಿಂದೆಯೇ ಇದ್ದೂ ಈ ಬಗ್ಗೆ ಅಧಿಕೃತ ಘೋಷಣೆಯಾಗಿರುವುದರಿಂದ ಹಿಜಾಬ್ ಧರಿಸಲು ಪೂರ್ಣ ಸಮ್ಮತಿ ಸಿಕ್ಕಂತಾಗಿದೆ. ಲಂಡನ್ ನಗರದ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಸಮಾನ ಹಿಜಾಬ್ ಅನುಮತಿಸಿದ ಹತ್ತು ವರ್ಷಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಅಧಿಕೃತ ಘೋಷಣೆಯನ್ನುಸ್ಕಾಟಿಶ್ ಪೊಲೀಸ್ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷ ಫಹದ್ ಬಶೀರ್ ಸ್ವಾಗತಿಸಿದ್ದಾರೆ. ‘‘ಇದುಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡ ಕ್ರಮ ಹಾಗೂ ಇದರಿಂದ ಹೆಚ್ಚು ಮುಸ್ಲಿಂ ಮಹಿಳೆಯರನ್ನು ಹಾಗೂ ಅಲ್ಪಸಂಖ್ಯಾತರು ಸ್ಕಾಟ್ ಲ್ಯಾಂಡ್ ಪೊಲೀಸ್ ಪಡೆಗೆ ಸೇರಲು ಉತ್ತೇಜಿಸಿದಂತಾಗುವುದು’’ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಸ್ಕಾಟ್ ಲ್ಯಾಂಡ್ ಪೊಲೀಸ್ ಪಡೆಯಲ್ಲಿ ಆರು ಮಂದಿ ಮುಸ್ಲಿಂ ಮಹಿಳಾ ಅಧಿಕಾರಿಗಳಿದ್ದರೂ ಯಾರು ಕೂಡ ತಮ್ಮ ಕರ್ತವ್ಯದ ಅವಧಿಯಲ್ಲಿ ಹಾಗೂ ನಂತರಹಿಜಾಬ್ ಧರಿಸುವುದಿಲ್ಲ. ಸ್ಕಾಟ್ಲ್ಯಾಂಡ್ ಪೊಲೀಸ್ ಪಡೆಯಲ್ಲಿ ಒಟ್ಟು 17,242 ಪೊಲೀಸರಿದ್ದಾರೆ. 2015-16ರಲ್ಲಿ ಕರಿಯ ಜನಾಂಗದ, ಏಷ್ಯ ಹಾಗೂ ಅಲ್ಪಸಂಖ್ಯಾತರಿಂದ 127 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ಒಟ್ಟು ಪೊಲೀಸರ ಸಂಖ್ಯೆಯ ಕೇವಲ 2.6% ದಷ್ಟಿದೆ. ಇನ್ನೂ 650 ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಲ್ಲಿ ಸ್ಕಾಟ್ಲ್ಯಾಂಡ್ ಪೊಲೀಸ್ ಪಡೆಯಲ್ಲಿ ಅಲ್ಪಸಂಖ್ಯಾತರ ಪಾಲು 4% ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News