ಯುಎಇ ಭೇಟಿಯಲ್ಲಿ ಅಥವಾ ಉದ್ಯೋಗದಲ್ಲಿದ್ದರೆ ಏನು ಮಾಡಬಹುದು? ಏನು ಮಾಡಬಾರದು?

Update: 2016-08-25 08:00 GMT

ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸ್ವಾಗತಿಸುವ ದೇಶ ಯುಎಇ. ವಿವಿಧ ರಾಷ್ಟ್ರದ ಮತ್ತು ಸಂಸ್ಕೃತಿಯ ಜನರು ಇಲ್ಲಿಗೆ ಪ್ರವಾಸ ಮಾಡುತ್ತಾರೆ. ಆದರೆ ಮುಸ್ಲಿಂ ದೇಶವಾಗಿರುವ ಕಾರಣ ಉಡುಪು ಸಂಹಿತೆ ಮತ್ತು ನಡವಳಿಕೆ ವಿಚಾರದಲ್ಲಿ ಕೆಲವು ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಸೂಚನೆ: ಇದೊಂದು ಸಾಮಾನ್ಯ ಮಾಹಿತಿಯ ಸಲಹೆಗಳಾಗಿರುವ ಕಾರಣ ಯುಎಇಯಲ್ಲಿ ನೀವು ಭೇಟಿ ನೀಡುವ ಸ್ಥಳಗಳನ್ನು ಆಧರಿಸಿ ಹೆಚ್ಚಿನ ಸಲಹೆಗಳನ್ನು ಮುಂಚಿತವಾಗಿ ಪಡೆದುಕೊಳ್ಳುವುದು ಉತ್ತಮ.

ಉಡುಪು ಸಂಹಿತೆ

►ನಿವಾಸಿಗಳು ಮತ್ತು ಪ್ರವಾಸಿಗರು ಗೌರವಯುತವಾಗಿ ಉಡುಗೆ ತೊಡಬೇಕು. ಮುಖ್ಯವಾಗಿ ಹೆಚ್ಚು ಸಂಪ್ರದಾಯವಾದಿ ಪ್ರಾಂತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಡುಗೆ ಬಗ್ಗೆ ಗಮನಹರಿಸಬೇಕು.

►ಖಾಸಗಿ ಕಡಲತೀರಗಳಲ್ಲಿ ಅಥವಾ ಖಾಸಗಿ ಈಜುಕೊಳಗಳ ಸುತ್ತ ಈಜುಡುಗೆ ಧರಿಸಬಹುದು. ಆದರೆ ಉಳಿದ ಕಡೆ ಪ್ರವಾಸಿಗರು ಸಂಪೂರ್ಣ ದೇಹ ಮುಚ್ಚುವ ಉಡುಗೆ ತೊಡಬೇಕು.

►ಕ್ರಾಸ್ ಡ್ರೆಸಿಂಗನ್ನು ಹೆಚ್ಚಾಗಿ ಸ್ವೀಕರಿಸಲಾಗುವುದಿಲ್ಲ. ಅದರಿಂದಾಗಿ ಅಧಿಕಾರಿಗಳಿಂದ ಬಂಧನಕ್ಕೂ ಒಳಗಾಗಬಹುದು.

►ಶಾರ್ಟ್ಸ್ ಮತ್ತು ಟೀ ಶರಟುಗಳನ್ನು ಹಲವು ಸ್ಥಳಗಳಲ್ಲಿ ಧರಿಸಬಹುದು. ಆದರೆ ಮಸೀದಿಗಳು, ಧಾರ್ಮಿಕ ಸ್ಥಳಗಳು ಅಥವಾ ನಗರದ ಪುರಾತನ ಪ್ರದೇಶಕ್ಕೆ ಭೇಟಿ ನೀಡುವಾಗ ಪುರುಷರು ಮತ್ತು ಮಹಿಳೆಯರು ಭುಜಗಳನ್ನು, ತೋಳುಗಳು ಮತ್ತು ಕಾಲುಗಳನ್ನು ಮುಚ್ಚುವ ಸಡಿಲವಾದ ಫಿಟ್ಟಿಂಗ್ ಇರುವ ಉಡುಗೆಗಳನ್ನು ಧರಿಸಿದರೇ ಹೆಚ್ಚು ಹಿತ.

►ಮಹಿಳೆಯರು ಸಾಮಾನ್ಯವಾಗಿ ಮಸೀದಿಗಳಿಗೆ ಭೇಟಿ ನೀಡುವಾಗ ಹೆಡ್‌ಸ್ಕಾರ್ಫ್ ಅನ್ನು ಧರಿಸಿರಬೇಕು.

ಆಹ್ವಾನಗಳು ಮತ್ತು ಮಾತುಕತೆ

►ನಿಮ್ಮನ್ನು ಯಾರಾದರೂ ಮಜ್ಲಿಸ್ ಗೆ ಆಹ್ವಾನಿಸಿದ್ದಲ್ಲಿ, ಪ್ರವೇಶ ದ್ವಾರದಲ್ಲೇ ನಿಮ್ಮ ಶೂಗಳನ್ನು ತೆಗೆದಿಡಿ.

►ಪುರುಷರು ಮತ್ತು ಮಹಿಳೆಯರಿಗೆ ಕೆಲವೊಮ್ಮೆ ವಿಭಿನ್ನ ಬೇರೆ ಬೇರೆ ವಿಭಾಗಗಳಲ್ಲಿ ಆಸನ ವ್ಯವಸ್ಥೆ ಮಾಡಿರಬಹುದು.

►ನಿಮ್ಮ ಅತಿಥಿಯ ಜೊತೆಗೆ ಭೋಜನ ಮಾಡುತ್ತೀರಾದರೆ, ಉದ್ಯಮದ ಮಾತುಕತೆ ಆಗುವ ಮೊದಲೇ ಆಹಾರ ಮತ್ತು ಪಾನೀಯಗಳನ್ನು ಸೇವಿಸಿ.

►ಹೊಸ ಅತಿಥಿಗಳು, ಹಿರಿಯರು ಅಥವಾ ಉನ್ನತ ಹುದ್ದೆಗಳ ಜನರು ಬಂದಾಗ ನಿಂತು ಗೌರವಿಸಬೇಕು. ಮಹಿಳೆಯರು ಕೋಣೆಯೊಳಗೆ ಬಂದಾಗ ಪುರುಷರು ಎದ್ದು ನಿಲ್ಲುವುದನ್ನು ನಿರೀಕ್ಷಿಸಲಾಗುತ್ತದೆ.

►ಮುಸ್ಲಿಂ ಆಗಿರುವ ಮತ್ತೊಂದು ಲಿಂಗದ ಸದಸ್ಯರನ್ನು ಸ್ವಾಗತಿಸುವಾಗ ಅವರೇ ಕೈ ಮುಂದೆ ಮಾಡದ ಹೊರತಾಗಿ ಕೈಕುಲುಕಬಾರದು. ಧಾರ್ಮಿಕ ಕಾರಣಗಳಿಂದಾಗಿ ಪುರುಷರು ಮತ್ತು ಮಹಿಳೆಯರಿಬ್ಬರೂ (ಹೆಚ್ಚಾಗಿ ಮಹಿಳೆಯರು) ವಿರುದ್ಧ ಲಿಂಗದವರ ಜೊತೆಗೆ ಕೈ ಕುಲುಕುವುದನ್ನು ಬಯಸಲಾರರು.

►ಆಹಾರ ಮತ್ತು ಪಾನೀಯವನ್ನು ಬಲಗೈಯಲ್ಲಿ ಸ್ವೀಕರಿಸುವುದು ಕಡ್ಡಾಯ. ನೀವು

►ನಿಮ್ಮ ಕಾಲಿನ ಹಿಮ್ಮಡಿಗಳನ್ನು ತೋರಿಸಬೇಡಿ ಅಥವಾ ಯಾರಿಗೂ ನಿಮ್ಮ ಪಾದಗಳ ಕಡೆಗೆ ಬೆರಳು ತೋರಿಸಬೇಡಿ. ಪ್ರಮುಖ ಅತಿಥಿಗಳ ಮುಂದೆ ನೀವು ಕೂತಿದ್ದಲ್ಲಿ ಕಾಲುಗಳನ್ನು ಅಡ್ಡಡ್ಡವಾಗಿಡುವುದು ದುರಭಿಮಾನ ಎಂದು ತಿಳಿಯಲಾಗುತ್ತದೆ.

►ಮುಸ್ಲಿಂ ಅತಿಥಿಗಳನ್ನು ಗೌರವಿಸುತ್ತಿದ್ದಲ್ಲಿ, ಅವರಿಗೆ ಮದ್ಯ ಅಥವಾ ಹಂದಿ ಮಾಂಸವನ್ನು ಕೊಡಬೇಡಿ.

ಸನ್ನೆ

ನಿಮ್ಮ ಬೆರಳ ತುದಿಯಿಂದ ಏನನ್ನೂ ತೋರಿಸಬೇಡಿ ಅಥವಾ ಸನ್ನೆ ಮಾಡಬೇಡಿ.

►ನಿಮಗೆ ಕೈ ಸನ್ನೆ ಮಾಡಬೇಕೆಂದಿದ್ದರೆ ಇಡೀ ಕೈಯನ್ನು ಬಳಸಿ.

►ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಶ್ಲೀಲ ಕೈ ಸನ್ನೆಯಿಂದ ಜೈಲು ಪಾಲಾಗಬಹುದು.

ಸಾರ್ವಜನಿಕ ಸ್ಥಳದಲ್ಲಿ

►ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮತ್ತು ನಿಯಮ ಮೀರಿ ನಡೆಯುವುದು ದಂಡ ಅಥವಾ ಇನ್ನೂ ಕೆಟ್ಟಪರಿಣಾಮ ತರಬಹುದು. ಮದ್ಯ ಸೇವಿಸಿ ಚಾಲನೆ ಮಾಡುವುದನ್ನು ಯುಎಇಯಲ್ಲಿ ಸಹಿಸುವುದೇ ಇಲ್ಲ.

►ಫೋಟೋಗ್ರಫಿಯನ್ನು ಬಹಳ ಜಾಗರೂಕವಾಗಿ ಮಾಡಬೇಕು. ಯುಎಇ ಪ್ರಜೆ ಅಥವಾ ನಿವಾಸಿಗಳ ಫೋಟೋ ತೆಗೆಯುವಾಗ ಮೊದಲು ಒಪ್ಪಿಗೆ ಪಡೆದುಕೊಳ್ಳಿ. ಮುಖ್ಯವಾಗಿ ಮಹಿಳೆಯರ ವಿಚಾರದಲ್ಲಿ.

►ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ ಮತ್ತು ಯಾವುದೇ ಸಮಯದಲ್ಲಿ ಆಲ್ಕೋಹಾಲ್ ಅಥವಾ ಇತರ ಅಕ್ರಮ ದ್ರವ್ಯಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ.

►ಪ್ರೀತಿಯನ್ನು ಸಾರ್ವಜನಿಕವಾಗಿ ತೋರಿಸುವುದು ಆದಷ್ಟು ಕಡಿಮೆ ಮಾಡಿ. ಕೈ ಕೈ ಹಿಡಿಯಬಹುದು. ಆದರೆ ಸಾರ್ವಜನಿಕವಾಗಿ ಮುತ್ತಿಡುವುದು ಮತ್ತು ಅಪ್ಪಿಕೊಳ್ಳುವುದಕ್ಕೆ ಅನುಮತಿಯಿಲ್ಲ.

►ಸದ್ದು ಗದ್ದಲ, ಕೆಟ್ಟ ಭಾಷೆ ಪ್ರಯೋಗ, ಅಶ್ಲೀಲ ಸನ್ನೆ ಮಾಡುವುದು ಮತ್ತು ದುಬೈಯ ಧರ್ಮ ಅಥವಾ ಅಲ್ಲಿನ ನಾಯಕರಿಗೆ ಅಗೌರವ ತೋರುವುದನ್ನು ನಿಷೇಧಿಸಲಾಗಿದೆ ಮತ್ತು ಕಾನೂನು ಸಮಸ್ಯೆ ಬರಬಹುದು.

ಇತರೆ

►ದತ್ತಿನಿಧಿಗಳಿಗೆ ಅನುದಾನ ಸಂಗ್ರಹ ಮತ್ತು ದತ್ತಿನಿಧಿಯನ್ನು ಪ್ರಚಾರ ಮಾಡುವುದು ಅಥವಾ ಮಾನವೀಯ ಸಂಘಟನೆಗಳನ್ನು ಕಾನೂನಿನ ಅಂಗೀಕಾರದ ಜೊತೆಗೆ ಅಗತ್ಯ ಪರವಾನಿಗೆ ಪಡೆದುಕೊಂಡು ಮಾಡಬೇಕು.

►ರಂಝಾನ್ ಸಂದರ್ಭದಲ್ಲಿ, ಉಪವಾಸ ಮಾಡದೆ ಇರುವ ನಿವಾಸಿಗಳು ಅಥವಾ ಪ್ರವಾಸಿಗರು ಕೆಲವು ಪ್ರತ್ಯೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

►ಈ ಕೆಳಗಿನವುಗಳನ್ನೂ ಅಕ್ರಮ ಎಂದು ಪರಿಗಣಿಸಲಾಗುತ್ತದೆ:

►ಮಾದಕ ದ್ರವ್ಯಗಳನ್ನು ಹೊಂದಿರುವುದು, ಸಹಜೀವನ, ವಿವಾಹೇತರ ಲೈಂಗಿಕತೆ, ವವಾಹೇತರಮಗು ಇರುವುದು, ವ್ಯಭಿಚಾರ ಮತ್ತು ಸಲಿಂಗಕಾಮ.

 ಕೃಪೆ: gulfnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News