ಭಾರತದ ಗ್ರಾಮೀಣ ಜನರಲ್ಲಿ ಪೌಷ್ಟಿಕ ಆಹಾರದ ಕೊರತೆ
ಹೊಸದಿಲ್ಲಿ, ಆ.25: ಭಾರತದ 70ನೆ ಸ್ವಾತಂತ್ರ ವರ್ಷ ಆರಂಭಗೊಂಡಿದೆ. ದೇಶದಲ್ಲಿ ವ್ಯಾಪಕ ಬೆಳವಣಿಗೆ ಕಾಣಿಸತೊಡಗಿದೆ. ಆದರೆ, ಇದಕ್ಕೆ ಗ್ರಾಮೀಣ ಭಾರತ ಹೊರತಾಗಿದೆ. ಗ್ರಾಮೀಣ ಪ್ರದೇಶದ 83.3 ಕೋಟಿ(ಶೇ.70) ಭಾರತೀಯರು ಆರೋಗ್ಯದಿಂದಿರಲು ಅಗತ್ಯವಿರುವುದಕ್ಕಿಂತ ಕಡಿಮೆ ಪೌಷ್ಟಿಕಾಂಶಗಳನ್ನು ಸೇವಿಸುತ್ತಿದ್ದಾರೆ. ರಾಷ್ಟ್ರೀಯ ಪೌಷ್ಟಿಕಾಂಶ ನಿಗಾ ಬ್ಯೂರೊದ(ಎನ್ನೆನ್ನೆಂಬಿ) ಸಮೀಕ್ಷೆಯೊಂದು ಇದನ್ನು ತಿಳಿಸಿದೆ.
1975-79ಕ್ಕೆ ಹೋಲಿಸಿದರೆ ಗ್ರಾಮೀಣ ಭಾರತದ ಜನರು ಈಗ 550 ಕ್ಯಾಲರಿ ಹಾಗೂ 13 ಗ್ರಾಂ ಪ್ರೊಟೀನ್, 5 ಮಿ.ಗ್ರಾಂ ಕಬ್ಬಿಣ, 250 ಮಿ.ಗ್ರಾಂ. ಕ್ಯಾಲ್ಸಿಯಂ ಮತ್ತು ಸುಮಾರು 500 ಮಿ.ಗ್ರಾಂ. ವಿಟಮಿನ್-ಎಯಷ್ಟು ಕಡಿಮೆ ಪ್ರಮಾಣದ ಪೌಷ್ಟಿಕಾಂಶಗಳನ್ನು ಸೇವಿಸುತ್ತಿದ್ದಾರೆ.
ಮೂರಕ್ಕಿಂತ ಕೆಳ ಹರೆಯದ ಮಕ್ಕಳು, ದಿನಕ್ಕೆ ಅಗತ್ಯವಿರುವ 300 ಮೀ.ಲೀ. ಹಾಲಿನ ಬದಲು ಸರಾಸರಿ 80 ಮಿ.ಲೀ. ಹಾಲನ್ನಷ್ಟೇ ಕುಡಿಯುತ್ತಿವೆ. ಈ ಅಂಕಿ-ಅಂಶವು ಶೇ.35ರಷ್ಟು ಗ್ರಾಮೀಣ ಪುರುಷರು ಹಾಗೂ ಮಹಿಳೆಯರು ಯಾಕೆ ಪೌಷ್ಟಿಕಾಂಶ ಕೊರತೆಯಿಂದ ನರಳುತ್ತಿದ್ದಾರೆ ಹಾಗೂ ಶೇ.42ರಷ್ಟು ಮಕ್ಕಳು ಯಾಕೆ ಕಡಿಮೆ ತೂಕದವುಗಳಾಗಿವೆಯೆಂಬುದನ್ನು ವಿವರಿಸುತ್ತದೆ.
ಬಡವರೇ ಇರುವ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರವಿದೆಯೆಂದು ಲಾಭರಹಿತ ಸಂಘಟನೆ ‘ಆಜೀವಿಕಾ ಬ್ಯೂರೊ’ 2014ರಲ್ಲಿ ದಕ್ಷಿಣ ರಾಜಸ್ಥಾನದ 4 ಪಂಚಾಯತ್‌ಗಳಾದ್ಯಂತ ನಡೆಸಿದ ಸಮೀಕ್ಷೆ ಸೂಚಿಸಿದೆ.
ಸಮೀಕ್ಷಿಸಲಾಗಿದ್ದ ಸುಮಾರು 500ರಷ್ಟು ತಾಯಂದಿರಲ್ಲಿ ಅರ್ಧದಷ್ಟು ಮಹಿಳೆಯರು ಹಿಂದಿನ ದಿನ ಬೇಳೆ ಕಾಳುಗಳನ್ನು ಸೇವಿಸಿರಲಿಲ್ಲ. ಮೂರನೆ ಒಂದರಷ್ಟು ಮಂದಿ ಸರಕಾರಿ ಬಳಸಿರಲಿಲ್ಲ ಹಾಗೂ ಬಹುತೇಕ ಅಮ್ಮಂದಿರು ಯಾವುದೇ ಹಣ್ಣು, ಮೊಟ್ಟೆ ಅಥವಾ ಮಾಂಸ ತಿಂದಿರಲಿಲ್ಲ. ಇದರ ಪರಿಣಾಮವಾಗಿ ಅವರಲ್ಲಿ ಅರ್ಧದಷ್ಟು ತಾಯಂದಿರು ಹಾಗೂ ಅವರ ಮೂರರ ಕೆಳ ಹರೆಯದ ಮಕ್ಕಳು ಕುಘೋಷಿತರಾಗಿದ್ದರು.
ಪೌಷ್ಟಿಕಾಂಶ ಕೊರತೆ ತಡೆಯಲು ಸಾಕಷ್ಟು ಖರ್ಚು ಮಾಡದಿರುವುದು, ಜಮೀನು ಇಲ್ಲದಿರುವುದು, ಬೆಲೆಯೇರಿಕೆ ಇತ್ಯಾದಿಗಳು ಗ್ರಾಮೀಣದಲ್ಲಿ ಕುಘೋಷಣೆಗೆ ಪ್ರಧಾನ ಕಾರಣಗಳಾಗಿವೆಯೆಂದು ಸಮೀಕ್ಷೆ ಅಭಿಪ್ರಾಯಿಸಿದೆ.