ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಮಾಡಬಾರದು, ಏಕೆಂದರೆ?

Update: 2016-08-25 18:27 GMT

ರಾತ್ರಿ ನೀವು ಸವಿನಿದ್ದೆಗೆ ಜಾರುವ ಮುನ್ನ ನಿಮ್ಮ ಸ್ಮಾರ್ಟ್ ಫೋನನ್ನು ಚಾರ್ಜ್‌ಗೆ ಇಡುವ ಅಭ್ಯಾಸ ಹಲವರಿಗೆ ಇರಬಹುದು. ಬೆಳಗ್ಗೆ ಏಳುವ ವೇಳೆಗೆ ಮೊಬೈಲ್ ಫುಲ್ ಚಾರ್ಜ್ ಆಗಿರುತ್ತದೆ ಎಂದು ನೆಮ್ಮದಿಯಿಂದ ನೀವು ನಿದ್ದೆ ಮಾಡಬಹುದು. ಇದು ಎಷ್ಟರ ಮಟ್ಟಿಗೆ ಒಳ್ಳೆಯದು ಎನ್ನುವುದು ಹಲವು ಅಂಶಗಳನ್ನು ಆಧರಿಸಿದೆ.

ಬಹುತೇಕ ಮಂದಿ ತಮ್ಮ ಸ್ಮಾರ್ಟ್ ಫೋನ್‌ಗಳನ್ನು ಎರಡು ವರ್ಷಕ್ಕಿಂತ ಹೆಚ್ಚು ಬಳಸುವುದಿಲ್ಲ. ಹೊಸ ಮೊಬೈಲ್ ಖರೀದಿ ಮಾಡುವ ನಿರ್ಧಾರದ ವೇಳೆ, ಹಳೆಯ ಫೋನ್ ಬ್ಯಾಟರಿಗೆ ಭಾರಿ ಹಾನಿಯಾಗಿರುತ್ತದೆ ಎನ್ನುವುದು ಬಹುತೇಕ ಮಂದಿಯ ಗಮನಕ್ಕೆ ಬಂದಿರುವುದಿಲ್ಲ. ಅದು ಸುಸ್ಥಿತಿಯಲ್ಲಿದ್ದರೆ, ರಾತ್ರಿಯಿಡೀ ಚಾರ್ಜ್ ಮಾಡಬಹುದು. ಜತೆಗೆ ಮಧ್ಯೆ ನಿಮಗೆ ಬಿಡುವು ಇದ್ದಾಗಲೆಲ್ಲ ಚಾರ್ಜ್ ಮಾಡಬಹುದು ಎಂದು ನೀವು ಅಂದುಕೊಳ್ಳಬಹುದು.

ಆದರೆ ಪದೇ ಪದೇ ಚಾರ್ಜ್ ಮಾಡುವುದು ನಿಮ್ಮ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಮಾರಕ. ಅದು ಅಧಿಕ ಚಾರ್ಜ್ ಆಗುತ್ತದೆ ಎಂಬ ಕಾರಣದಿಂದ ಅಲ್ಲ. ಸ್ಮಾರ್ಟ್‌ಫೋನ್‌ಗಳಿಗೆ ಯಾವ ಹಂತದಲ್ಲಿ ಚಾರ್ಜಿಂಗ್ ನಿಲ್ಲಿಸಬೇಕು ಎನ್ನುವುದು ತಿಳಿದಿರುತ್ತವೆ ಎಂದು ಚಾರ್ಜರ್‌ಗಳನ್ನು ಉತ್ಪಾದಿಸುವ ಎಡೊ ಕ್ಯಾಂಪೋಸ್ ಕಂಪೆನಿಯ ವಕ್ತಾರ ಅಂಕೆರ್ ಹೇಳುತ್ತಾರೆ.

ಅಂಡ್ರಾಯ್ಡಾ ಹಾಗೂ ಐ-ಫೋನ್‌ಗಳಲ್ಲಿ ಇರುವ ಚಿಪ್‌ಗಳು ಅಧಿಕ ವಿದ್ಯುತ್ ಹರಿಯದಂತೆ ತಡೆಯುತ್ತವೆ. ಆದ್ದರಿಂದ ಸೈದ್ಧಾಂತಿಕವಾಗಿ ನೀವು ರಾತ್ರಿಯಿಡೀ ಚಾರ್ಜ್ ಮಾಡುವುದರಿಂದ ಯಾವ ಹಾನಿಯೂ ಆಗದು. ಆದರೆ ಚಾರ್ಜ್ ಮಾಡುವ ಕ್ರಿಯೆಯೇ ಬ್ಯಾಟರಿಗೆ ಮಾರಕ ಎನ್ನುವುದು ಅವರ ವಿವರಣೆ.

ಏಕೆಂದರೆ ಹಲವು ಫೋನ್‌ಗಳಲ್ಲಿ ಬ್ಯಾಟರಿಗಳು ವೇಗವಾಗಿ ಅಧಿಕ ವಿದ್ಯುತ್ ಸ್ವೀಕರಿಸುವಂತೆ ತಂತ್ರಜ್ಞಾನ ಇರುತ್ತದೆ. ಚಾರ್ಜರ್‌ಗಳು ಎಷ್ಟು ಪ್ರಮಾಣದ ವಿದ್ಯುತ್ ಪ್ರವಹಿಸಲು ಸಮರ್ಥವಾಗಿರುತ್ತದೋ ಅಷ್ಟನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಒಡಿಶಾ ಮೂಲದ ವೈರ್‌ಲೆಸ್ ಚಾರ್ಜಿಂಗ್ ಉತ್ಪಾದನಾ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಹಟೆಮ್ ಝಿಯೋನ್ ಹೇಳುತ್ತಾರೆ. ಆದರೆ ಈ ಕ್ಷಿಪ್ರವಾಗಿ ಚಾರ್ಜ್ ಆಗುವ ಪ್ರಕ್ರಿಯೆ, ಲಿಥಿಯಂ ಅಯಾನ್ ಬ್ಯಾಟರಿಗಳು ಬೇಗ ಹಾಳಾಗಲು ಕಾರಣವಾಗುತ್ತವೆ ಎನ್ನುವುದು ಅವರ ಅಭಿಪ್ರಾಯ. ಆದ್ದರಿಂದ ಕಡಿಮೆ ಸಾಮರ್ಥ್ಯದ ಚಾರ್ಜರ್‌ನಲ್ಲಿ ಚಾರ್ಜ್ ಮಾಡಿದಷ್ಟೂ ನಿಮ್ಮ ಬ್ಯಾಟರಿ ಬಾಳಿಕೆ ಹೆಚ್ಚು ಎನ್ನುವುದು ಅವರ ಸಲಹೆ.

ಕೃಪೆ: indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News