×
Ad

ಕೇರಳ: ವಿದ್ಯಾರ್ಥಿಗಳು ಸಹಿತ 6ಮಂದಿಗೆ ಬೀದಿನಾಯಿ ಕಡಿತ

Update: 2016-08-26 11:16 IST

ತೃಶೂರ್,ಆ.26: ತೃಶೂರಿನಲ್ಲಿ ವಿದ್ಯಾರ್ಥಿಗಳು ಸಹಿತ ಆರುಮಂದಿ ಮೇಲೆ ಬೀದಿನಾಯಿ ದಾಳಿ ಮಾಡಿದೆ ಎಂದು ವರದಿಯಾಗಿದೆ. ಬೀದಿ ನಾಯಿ ಕಡಿತದಿಂದಾಗಿ ಆಯುಷ್(5),ಅತುಲ್, ಅನ್ನಾ(10),ಗೌರಿ(53), ಜೆಫಿನ್, ಗೌರಿ(53),ಪಿಸಿಥಾಮಸ್(57) ಎಂಬವರು ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ದಾರಿಯಲ್ಲಿ ಬೀದಿನಾಯಿಗಳು ದಾಳಿ ಮಾಡಿದ್ದು, ಈ ಘಟನೆ ಮಾಳ ಪೊಯ್ಯಯಿಲ್ ಕೃಷ್ಣನ್‌ಕೋಟೆ ಸೇತುವೆ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ತೃಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹಾಗೂ ಕೊಡಂಙಲ್ಲೂರ್ ತಾಲೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಂದನೆ ತರಗತಿ ವಿದ್ಯಾರ್ಥಿ ಆಯುಷ್ ನಾಯಿಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನ ಮುಖದ ಮಾಂಸವನ್ನೇ ನಾಯಿಗಳು ಕಿತ್ತು ತೆಗೆದಿವೆ. ಮಗು ಅಪಾಯದಿಂದ ಪಾರಾಗಿದೆಯೆಂದುಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News