ಬೀದಿನಾಯಿಗಳನ್ನು ಕೊಲ್ಲುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಸುಪ್ರೀಂಕೋರ್ಟಿಗೆ
ಹೊಸದಿಲ್ಲಿ, ಆಗಸ್ಟ್ 26: ಕೇರಳದಲ್ಲಿ ನಾಯಿಗಳನ್ನು ಕೊಲ್ಲುವ ನಿರ್ಧಾರವನ್ನು ಹಿಂದೆಗೆಯದಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಕೋರ್ಟ್‌ನಿಂದೆ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯವಾದಿ ಪ್ರಶಾಂತ್ ಭೂಷಣ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಪತ್ರ ಬರೆದಿದ್ದಾರೆ. ವಸ್ತುಸ್ಥಿತಿಯನ್ನು ಅವಲೋಕಿಸದೆ ನಾಯಿಗಳನ್ನು ಕೊಲ್ಲುವುದಾಗಿ ಸಚಿವರಾದ ಕೆ.ಟಿ.ಜಲೀಲ್, ಕೆ.ರಾಜು ಹೇಳಿಕೆ ನೀಡಿದ್ದಾರೆ. ಆದರೆ ಈ ಕ್ರಮ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಪ್ರಶಾಂತ್ ಭೂಷಣ್ ಪತ್ರದಲ್ಲಿ ಸೂಚಿಸಿದ್ದಾರೆಂದು ವರದಿಯಾಗಿದೆ.
ನಾಯಿಗಳನ್ನು ಕೊಲ್ಲಬಾರದೆಂದು 2015 ನವೆಂಬರ್‌ನಲ್ಲಿ ಮತ್ತು ಈವರ್ಷ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್ ಆದೇಶಿಸಿದೆ. ಬೀದಿನಾಯಿಗಳ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚಳವಾದರೆ, ಪ್ರಾಣಿರಕ್ಷಣೆ ಮಂಡಳಿ, ಸ್ಥಳೀಯಾಡಳಿತ ಸಂಸ್ಥೆಗಳು ಸೇರಿ ನಾಯಿಗೆ ಬಂಜೆಗೊಳಿಸುವ ಚುಚ್ಚು ನೀಡಬೇಕೆಂದು ಕೋರ್ಟ್‌ನ ಆದೇಶವಾಗಿದೆ. ಅದಕ್ಕೆ ಸ್ಪಷ್ಟ ಕ್ರಮಗಳನ್ನು ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಬೀದಿನಾಯಿಗಳ ದಾಳಿ ನಡೆಸುತ್ತಿದೆ ಎಂಬ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ವಿಶ್ವಾಸಾರ್ಹವಲ್ಲ ಎಂದು ಪ್ರಶಾಂತ್ ಭೂಷಣ್ ಪತ್ರದಲ್ಲಿ ವಿವರಿಸಿದ್ದಾರೆ.
ಕೇರಳಕ್ಕೆ ಪ್ರವಾಸಿಗರು ಬರುವ ಸಮಯ ಆರಂಭವಾಗುವುದಕ್ಕಿಂತ ಮುಂಚೆ ಇಂತಹ ವಾರ್ತೆಗಳು ಬರುತ್ತಿದೆ ಎಂಬುದು ಗಮನಾರ್ಹ. ನಿರ್ದಿಷ್ಟ ಉದ್ದೇಶವಿರುವ ಕೆಲವರು ಇಂತಹ ಸುದ್ದಿಗಳನ್ನು ಹರಡುತ್ತಿದ್ದಾರೆ. ತುಂಬ ಸಮಚಿತ್ತದಿಂದ ನಿಭಾಯಿಸಬೇಕಾದ ವಿಷಯವಿದು. ಇದನ್ನು ಇಷ್ಟು ಬೃಹತ್ತಾಗಿ ತೋರಿಸುತ್ತಿರುವುದೇಕೆ ಎಂದು ಭೂಷಣ್ ಪ್ರಶ್ನಿಸಿದ್ದಾರೆ.ನಾಯಿಗಳನ್ನು ಕೊಲ್ಲುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಈ ಹಿಂದೆ ಅದನ್ನು ಮಾಡಿನೋಡಿದ್ದ ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್ ಸ್ಪಷ್ಟಪಡಿಸಿದ ವಿಚಾರವಿದು ಎಂದು ಪಿಣರಾಯಿ ವಿಜಯನ್‌ಗೆ ಬರೆದ ಪತ್ರದಲ್ಲಿ ಪ್ರಶಾಂತ್ ಭೂಷಣ್ ಬೆಟ್ಟು ಮಾಡಿದ್ದಾರೆಂದು ವರದಿತಿಳಿಸಿದೆ.