×
Ad

ಮಂಗಳೂರಿನ ಮತ್ಸ್ಯಪ್ರಿಯರ ಕೈಗೆಟುಕುತ್ತಿವೆ ’ದುಬಾರಿ’ ಮೀನುಗಳು

Update: 2016-08-26 23:50 IST

ಮತ್ಸ್ಯಪ್ರಿಯರಿಗೆ ಸಂತಸದ ಸುದ್ದಿ. ಮೀನು ಬೆಲೆ ಗಣನೀಯವಾಗಿ ಕುಸಿದಿದೆ. ದುಬಾರಿ ಎನಿಸಿಕೊಂಡಿದ್ದ ಮೀನುಗಳು ಕೂಡಾ ಈಗ ಕೈಗೆಟುಕುವ ಬೆಲೆಯಲ್ಲಿ ಲಭ್ಯ.

ಆದರೆ ಷರತ್ತುಗಳು ಅನ್ವಯಿಸುತ್ತವೆ. ದಪ್ಪದ ಮೀನುಗಳನ್ನು ಆಯ್ಕೆ ಮಾಡಿಕೊಂಡರೆ ದರದ ದರ ದುಬಾರಿ. ಆದರೆ ಕೃಶ ಮೀನುಗಳ ಬೆಲೆ ಅಗ್ಗ. ಉದಾಹರಣೆಗೆ 1000 ರೂಪಾಯಿಗೆ ಮಾರಾಟವಾಗುತ್ತಿದ್ದ ವೈಟ್ ಪೋಮ್‌ಫ್ರೆಟ್ ಈಗ ಕೆ.ಜಿ.ಗೆ 840ರ ದರದಲ್ಲಿ ಮಾರಾಟವಾಗುತ್ತಿವೆ. ಒಂದು ಕೆ.ಜಿ.ಗೆ ನಾಲ್ಕರಿಂದ ಐದು ಮೀನುಗಳು ತೂಗುತ್ತವೆ. ಆದರೆ ಕೃಶ ಪೋಮ್‌ಫ್ರೆಟ್‌ಗಳು 200 ರೂಪಾಯಿ ದರದಲ್ಲಿ ಲಭ್ಯವಿದ್ದು, ಇದು ಕೆ.ಜಿ.ಗೆ 10-12 ಲಭಿಸುತ್ತವೆ. ಅಂದರೆ ವೈವಿಧ್ಯಮಯ ದರ ಶ್ರೇಣಿಯಲ್ಲಿ ಮೀನುಗಳು ಲಭ್ಯವಿದ್ದು, ಗ್ರಾಹಕರ ಆಯ್ಕೆ ಹೆಚ್ಚಿದೆ.

ಅಂತೆಯೇ ಐದು ಕೆ.ಜಿ. ತೂಕದ ಸೀರ್ ಮೀನಿಗೆ ಪ್ರತಿ ಕೆ.ಜಿ.ಗೆ 500 ರಿಂದ 550 ರೂಪಾಯಿ ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಒಂದು ಕೆ.ಜಿ. ತೂಕದ ಸೀರ್‌ಮೀನು 260 ರೂಪಾಯಿ ದರದಲ್ಲಿ ಲಭ್ಯ. ಅಂತೆಯೇ ಮಕೆರೆಲ್ ಮಾರಾಟ ದರ ಕೆ.ಜಿ.ಗೆ 235ರೂ. ಆಗಿದ್ದರೆ ಕೆ.ಜಿ.ಗೆ ಏಳರಷ್ಟು ತೂಗುವ ಸಣ್ಣ ಮಕೆರೆಲ್‌ಗಳ ದರ 180 ರೂಪಾಯಿ ಆಗಿದೆ.

"20 ದಿನಗಳ ಹಿಂದೆ ಮೀನುಗಳ ದರ ತೀರಾ ದುಬಾರಿ ಇತ್ತು. ಕಳೆದ ಒಂದು ವಾರದಿಂದ ಬೆಲೆ ಕಡಿಮೆಯಾಗುತ್ತಿದೆ. ಪ್ರಿಮಿಯಂ ಶ್ರೇಣಿಯ ಮೀನುಗಳು ಈಗ ಗ್ರಾಹಕರ ಕೈಗೆಟುಕುವ ದರದಲ್ಲಿವೆ" ಎಂದು ಮೀನು ವ್ಯಾಪಾರಿ ಎಸ್.ಎಫ್.ಫೈಸಲ್ ವಿವರಿಸಿದರು.

ಮುಂಗಾರಿನಲ್ಲಿ ಮೀನುಗಾರಿಕೆ ನಿಷೇಧ ಇದ್ದ ಹಿನ್ನೆಲೆಯಲ್ಲಿ ದರ ದುಬಾರಿಯಾಗಿತ್ತು. ಇದೀಗ ಮಲ್ಪೆಯಲ್ಲಿ ಸಾಕಷ್ಟು ಮೀನು ಸಿಗುತ್ತಿರುವುದರಿಂದ ದರ ಶೇಕಡ 20 ರಿಂದ 30ರಷ್ಟು ಕಡಿಮೆಯಾಗಿದೆ.

ಇದರಿಂದ ಹೋಟೆಲ್‌ಗಳಲ್ಲೂ ಇದರ ಬೆಲೆ ಕಡಿಮೆಯಾಗಿದೆ. ನಾರಾಯಣ ಹೋಟೆಲ್ ಹಾಗೂ ಗಿರಿಮಂಜ ಹೋಟೆಲ್‌ನಲ್ಲಿ ಫ್ರೈಡ್ ಸೀರ್ ಬೆಲೆ 210 ರೂಪಾಯಿ ಇದ್ದುದು ಈಗ 160 ರೂಪಾಯಿಗೆ ಇಳಿದಿದೆ. ಅಂತೆಯೇ ವೈಟ್ ಮೋಪ್‌ಫ್ರೆಟ್ ಫ್ರೈ ಬೆಲೆ 280 ರೂಪಾಯಿಯಿಂದ 200 ರೂಪಾಯಿಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News