ದೂರಿಗೆ ಕ್ರಮಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿದ ವ್ಯಕ್ತಿ!
ಕಾತಿಕಪಳ್ಳಿ,(ಆಲಪ್ಪುಝ),ಆಗಸ್ಟ್ 27: ಪೊಲೀಸರಿಗೆ ನೀಡಿದ ದೂರಿಗೆ ಕ್ರಮಕೈಗೊಂಡಿಲ್ಲ ಎಂದು ನೊಂದ ವ್ಯಕ್ತಿಯೊಬ್ಬರು ಪೊಲೀಸರ ವಿರುದ್ಧ ಆತ್ಮಹತ್ಯೆ ಪತ್ರ ಬರೆದು ನೇಣುಹಾಕಿಕೊಂಡು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಆಟೊ ಚಾಲಕ ಹಾಗೂ ಸಿಐಟಿಯು ಯೂನಿಯನ್ ಸದಸ್ಯರೂ ಆದ ಕಾರ್ತಿಕಪಳ್ಳಿ ಪುದುಕುಂಡಂ ಕೃಷ್ಣಕುಮಾರ್(48) ಎಂಬವರು ತನ್ನ ಮನೆಯಲ್ಲಿ ಆತ್ಮಹತ್ಯೆಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ನೆರೆಯ ಯುವಕ ಉಣ್ಣಿ ಎಂಬಾತ ಸೊಸೆಗೆ ಕಿರುಕುಳ ನೀಡಿದ್ದು, ಇದನ್ನು ಕೃಷ್ಣಕುಮಾರ್ ಪುತ್ರ ಮನುಯಾನೆ ನಿತಿನ್ ಗೆಳೆಯರೊಂದಿಗೆ ಹೋಗಿ ಉಣ್ಣಿಯ ಮನೆಗೆ ಹೋಗಿ ಪ್ರಶ್ನಿಸಿದ್ದ. ಇದರ ವಿರುದ್ಧ ಉಣ್ಣಿಯ ಮನೆಯವರು ತೃಕ್ಕಣಿಪುಝ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಡಿಷನಲ್ ಎಸ್ಸೈಯ ನೇತೃತ್ವದಲ್ಲಿ ಮನುವನ್ನು ಹುಡುಕುತ್ತ ಬಂದಿದ್ದ ಪೊಲೀಸರು ನಿಮ್ಮ ಪುತ್ರ ಕೈಗೆ ಸಿಕ್ಕಿದರೆ ಸರಿಮಾಡುತ್ತೇವೆ ಎಂದು ಕೃಷ್ಣಕುಮಾರ್‌ಗೆ ಬೆದರಿಕೆ ಹಾಕಿದ್ದರು .ಮಾತ್ರವಲ್ಲ ಆನಂತರ ಮನುವನ್ನು ವಿಚಾರಿಸುತ್ತಾ ಬಂದಿದ್ದ ನಾಲ್ವರಿದ್ದ ತಂಡವೊಂದು ಮನು ಕೈಗೆಸಿಕ್ಕರೆ ಥಳಿಸುತ್ತೇವೆ ಎಂದು ಬೆದರಿಸಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.
ಉಣ್ಣಿ ಫೋನ್ ಮೂಲಕ ಮತ್ತು ನೇರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಕೃಷ್ಣಕುಮಾರ್‌ರ ಸೊಸೆ ಪೊಲೀಸರಿಗೆ ದೂರು ನೀಡಿದ್ದಳು. ಹಾಗಿದ್ದರೂ ಉಣ್ಣಿಯ ವಿರುದ್ಧ ಪೊಲೀಸರು ಕ್ರಮಕೈಗೊಂಡಿರಲಿಲ್ಲ. ಇದರಿಂದ ನೊಂದಿದ್ದ ಕೃಷ್ಣಕುಮಾರ್ ಎಎಸ್ಸೈ ಮತ್ತು ಉಣ್ಣಿ ತನ್ನ ಸಾವಿಗೆ ಕಾರಣವೆಂದು ಆತ್ಮಹತ್ಯೆ ಪತ್ರದಲ್ಲಿ ಕೃಷ್ಣಕುಮಾರ್ ಬರೆದಿದ್ದಾರೆ.ತನ್ನ ಆತ್ಮಹತ್ಯೆಯಿಂದ ಕುಟುಂಬದ ಸಮಸ್ಯೆ ಪರಿಹಾರವಾಗಲಿ ಎಂದೂ ಪತ್ರದಲ್ಲಿ ಅವರು ಬರೆದಿದ್ದಾರೆ. ಒಂದು ಪತ್ರವನ್ನು ಮನೆಯ ಗೋಡೆಗೆ ಅಂಟಿಸಿಟ್ಟಿದ್ದರೆ ಇನ್ನೊಂದು ಪತ್ರವನ್ನು ಮಂಚದಲ್ಲಿ ಕೃಷ್ಣಕುಮಾರ್ ಇರಿಸಿದ್ದಾರೆ.ಆದರೆ ಮನೆಗೆ ನುಗ್ಗಿ ಬೆದರಿಕೆಹಾಕಿದ ದೂರಿನನ್ವಯ ಸಹಜವಾದ ತನಿಖೆ ನಡೆಸಿದ್ದೇವೆ. ಕೃಷ್ಣಕುಮಾರ್‌ರನ್ನು ಬೆದರಿಸುವುದೋ ಕಾನೂನುಬಾಹಿರವಾಗಿ ನಡೆದುಕೊಂಡಿಲ್ಲ ಎಂದು ಪೊಲೀಸ್ ಸ್ಪಷ್ಟೀಕರಣ ನೀಡಿದೆ. ಕಿರುಕುಳ ನೀಡುವ ದೂರು ಲಭಿಸಿಯೂ ಕ್ರಮಕೈಗೊಂಡಿಲ್ಲ ಎಂಬುದು ಸರಿಯಲ್ಲ. ಫೋನ್ ಮಾಡಿಕಿರುಕುಳ ಮಾಡಿದ್ದಾನೆ ಎಂಬ ದೂರಿನಪ್ರಕಾರ ಉಣ್ಣಿಯ ಫೋನ್‌ಲಿಸ್ಟ್ ತಪಾಸಣೆ ಮಾಡಿದಾಗ ಅದರಿಂದ ಕೃಷ್ಣಕುಮಾರ್‌ರ ಸೊಸೆಗೆ ಒಂದೇಒಂದು ಕರೆಹೋಗಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.