ಮೃತ ಮಹಿಳೆಯ ಶವ, ಕುಟುಂಬವನ್ನು ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್ ಚಾಲಕ!

Update: 2016-08-27 11:59 GMT

ದಾಮೋಹ್,ಆಗಸ್ಟ್ 27: ಮಧ್ಯಪ್ರದೇಶದ ದಾಮೋಹ್‌ನಲ್ಲಿ ಬಸ್‌ಚಾಲಕನೊಬ್ಬ ಚಲಿಸುವ ಬಸ್‌ಲ್ಲಿ ತೀರಿಕೊಂಡ ಮಹಿಳೆಯೊಬ್ಬರ ಶವ ಹಾಗೂ ಕುಟುಂಬವನ್ನು ನಿರ್ಜನ ಪ್ರದೇಶದದಲ್ಲಿ ಕೆಳಗಿಳಿಸಿದ ಪರಿಣಾಮವಾಗಿ ಕುಟುಂಬ ಮಹಿಳೆಯ ಶವವನ್ನು ರಸ್ತೆ ಬದಿ ಇಟ್ಟು ಅವರಿವರಲ್ಲಿ ಸಹಾಯಕ್ಕಾಗಿ ಅಂಗಲಾಚಿದ ಕರುಣಾಜನಕ ಘಟನೆ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಬಸ್‌ನಲ್ಲಿ ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಮಹಿಳೆ ದಾರಿ ಮಧ್ಯೆ ಬಸ್‌ನಲ್ಲಿ ತೀರಿಕೊಂಡಿದ್ದರು. ಇದನ್ನು ತಿಳಿದ ಬಸ್ ಚಾಲಕ ಆ ್ಯಕ್ತಿಯನ್ನೂ ಅವನ ತಾಯಿಯನ್ನೂ     , ಪತ್ನಿಯ ಶವವನ್ನೂ ಹಾಗೂ ಐದು ದಿವಸದ ಹೆಣ್ಣು ಶಿಶುವನ್ನೂ ನಿರ್ಜನ ಪ್ರದೇಶದಲ್ಲಿ ಇಳಿಸಿ ಬಸ್‌ನ್ನು ತೆಗೆದು ಕೊಂಡಿಕೊಂಡು ಹೋಗಿದ್ದ. ನಂತರ ರಸ್ತೆಬದಿ ಶವವನ್ನು ಇಟ್ಟುಕೊಂಡು ಎಂಟು ಗಂಟೆ ಕಾಲ ನೆರವಿವಾಗಿ ಈ ಕುಟುಂಬ ಜನರನ್ನು ಅಂಗಲಾಚಿದರೂ ಯಾರೂ ನೆರವು ನೀಡಲಿಲ್ಲ ಎಂದು ವರದಿತಿಳಿಸಿದೆ.

ನೆರವಿಗೆ ಧಾವಿಸಿದ ವಕೀಲರು:

       ನಂತರ ಆದಾರಿಯಾಗಿ ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ವಕೀಲರು ಇವರನ್ನು ಗಮನಿಸಿದ್ದು, ಕುಟುಂಬದ ದಂನೀಯ ಪರಿಸ್ಥಿತಿಯನ್ನು ಅರಿತು ನೆರವಿಗೆ ದಾವಿಸಿದ್ದಾರೆ. "ತುಂತುರು ಮಳೆಯಲ್ಲಿ ಶವವಿಟ್ಟು ಅವರಿವರಲ್ಲಿ ನೆರವು ಯಾಚಿಸುತ್ತಿರುವುದನ್ನು ನಾವು ಗಮನಿಸಿದೆವು. ಅಳುತ್ತಿದ್ದ ಮಗುವಿಗೆ ಬಾಟ್ಲಿ ಹಾಲುಣಿಸುತ್ತಿದ್ದ" ಎಂದು ವಕೀಲರಾದ ಮೃತ್ಯುಂಜಯ ಹಝಾರಿ, ಮತ್ತು ರಾಜೇಶ್ ಪಟೇಲ್ ಹೇಳಿದ್ದಾರೆ. ನಂತರ ಅವರು  ಆ್ಯಂಬುಲೆನ್ಸ್‌ಗಾಗಿ 100 ನಂಬ್ರಕ್ಕೆ ಕರೆ ಮಾಡಿದ್ದರು. ಅದು ಬರದಿದ್ದಾಗ ಖಾಸಗಿ ವಾಹನದ ಮೂಲಕ ಮಹಿಳೆಯ ಶವವವನ್ನು ಬೀದಿಬದಿಯಿಂದ ಎತ್ತಿ ಬೇರೆಡೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News