ತನ್ನ ಪಕ್ಷದ ವಿರುದ್ಧ ಟೀಕೆ: ಹದಿಮೂರೇ ವಾರಗಳಲ್ಲಿ ಜಾರ್ಖಂಡ್ ಬಿಜೆಪಿ ಅಧ್ಯಕ್ಷನ ರಾಜೀನಾಮೆ

Update: 2016-08-27 14:16 GMT

ರಾಂಚಿ, ಆ.27: ಜಾರ್ಖಂಡ್ ಬಿಜೆಪಿ ಅಧ್ಯಕ್ಷ ತಾಲಾ ಮರಾಂಡಿ ನೇಮಕವಾದ ಕೇವಲ 13 ವಾರಗಳಲ್ಲಿಯೇ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬುಡಕಟ್ಟು ಜಮೀನು ರಕ್ಷಣೆಯ ಕಾನೂನಿನ ತಿದ್ದುಪಡಿಯ ಬಗ್ಗೆ ತನ್ನದೇ ಪಕ್ಷದ ಸರಕಾರದ ವಿರುದ್ಧ ಮಾಡಿರುವ ಟೀಕೆ ಅವರ ರಾಜೀನಾಮೆಯೊಂದಿಗೆ ಬಹಳ ಸಂಬಂಧ ಪಡೆದಿದೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಬೊರಿಯೊ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಈ ಸಂತಾಲ್ ನಾಯಕನ ಸ್ಥಾನಕ್ಕೆ ಲೋಕಸಭೆಯಲ್ಲಿ ಚೈಬಾಸಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇನ್ನೊಬ್ಬ ಬುಡಕಟ್ಟು ನಾಯಕ ಲಕ್ಷ್ಮಣ್ ಗಿಲುವಾರನ್ನು ನೇಮಿಸಲಾಗಿದೆ. ಮಗನ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಮಾರಂಡಿಯವರೇ ಒಳಗೊಂಡಿರುವ ಹಲವು ವಿವಾದಗಳ ಬಳಿಕ ಅವರು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆ.11ರಂದು ಸಲ್ಲಿಸಲಾಗಿರುವ ಮಾರಂಡಿಯವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಹಾಗೂ ಅವರ ಸ್ಥಾನಕ್ಕೆ ಗಿಲುವಾರನ್ನು ನೇಮಿಸಲಾಗಿದೆಯೆಂದು ಬಿಜೆಪಿ ಹೊರಡಿಸಿರುವ ಹೇಳಿಕೆಯೊಂದು ತಿಳಿಸಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ರಾಜ್ಯದ ಬುಡಕಟ್ಟು ಜನರ ಹೆಚ್ಚು ಪ್ರಾತಿನಿಧಿಕ ಪಕ್ಷವೆನಿಸಿದ್ದು, ಸಂತಾಲ್ ಪರಗಣ ಅದರ ಭದ್ರಕೋಟೆಯೆಂದು ಪರಿಗಣಿಸಲಾಗಿದೆ. ಅದಕ್ಕೆ ಎದುರೇಟು ನೀಲು ಸಂತಾಲ್ ಪರಗಣದ ಸಂತಾಲ್ ನಾಯಕನೊಬ್ಬನನ್ನು ರಾಜ್ಯ ಬಿಜೆಪಿ ಮೊದಲ ಬಾರಿ ಪಕ್ಷಾಧ್ಯಕ್ಷನನ್ನಾಗಿ ನೇಮಿಸಿತ್ತು.

ಮೊದಲ ಬಾರಿಗೆ ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದವರಲ್ಲದ ರಘುವರ ದಾಸ್ ಮುಖ್ಯಮಂತ್ರಿಯಾಗಿರುವ ಹೊತ್ತಿನಲ್ಲಿ ಸರಕಾರ ಮತ್ತು ಬುಡಕಟ್ಟು ಜನರ ನಡುವಿನ ಕಂದಕ ಮುಚ್ಚುವಲ್ಲಿ ಮರಾಂಡಿ ದೊಡ್ಡ ಪಾತ್ರ ವಹಿಸಬೇಕಾಗಿತ್ತು.

ರಾಜ್ಯದಲ್ಲಿ ಶೇ.27ರಷ್ಟು ಬುಡಕಟ್ಟು ಜನರಿದ್ದು, ಅವರ ಸಿಂಹಪಾಲು ಮತಗಳನ್ನು ಬಿಜೆಪಿ ಗಳಿಸುತ್ತಿದೆ.

ಮರಾಂಡಿಯವರ ಕಾರ್ಯವೈಖರಿಯ ಬಗ್ಗೆ ರಘುವರದಾಸ್‌ರಿಗೆ ಅಸಮಾಧಾನವಿತ್ತು. ಅವರದನ್ನು ಬಿಜೆಪಿಯ ಕೇಂದ್ರೀಯ ನಾಯಕತ್ವದ ಗಮನಕ್ಕೆ ತಂದರು. ಅದು ಮಾರಂಡಿಯವರ ಸ್ಥಾನಕ್ಕೆ ಕೊಲ್ಹನ್ ಪ್ರದೇಶದ ಇನ್ನೊಬ್ಬ ನಾಯಕನನ್ನು ನೇಮಿಸಿದೆ.

ತನ್ನ ಪುತ್ರ ಮುನ್ನಾ ಮರಾಂಡಿಗೆ ಅಪ್ರಾಪ್ತ ವಯಸ್ಕ ಹುಡುಡಿಯ ಜೊತೆ ಮದುವೆ ಮಾಡಿದ ವಿವಾದದಲ್ಲಿ ಮರಾಂಡಿ ಮೊದಲು ಸಿಲುಕಿಕೊಂಡರು. ಮುನ್ನಾನ ವಿರುದ್ಧ ಇನ್ನೊಬ್ಬಳು ಹುಡುಗಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ಬಳಿಕ ಅವಸರವಸರವಾಗಿ ಈ ವಿವಾಹ ಮಾಡಲಾಗಿತ್ತು.

ಪರಿಶಿಷ್ಟ ಪಂಗಡಗಳ ಭೂಮಿ ಪರಭಾರೆ ನಿಯಂತ್ರಿಸುವ ಛೋಟಾ ನಾಗಪುರ ಒಕ್ಕಲುತನ(ಸಿಎನ್‌ಟಿ) ಕಾಯ್ದೆ ಹಾಗೂ ಸಂತಾಲ್ ಪರಗಣ ಒಕ್ಕಲುತನ(ಎಸ್‌ಪಿಟಿ) ಕಾಯ್ದೆಗಳ ಪ್ರಸ್ತಾವಿತ ತಿದ್ದುಪಡಿಯ ವಿರುದ್ಧ ರಘುವರ ದಾಸ್ ಸರಕಾರವನ್ನು ಟೀಕಿಸುವಲ್ಲಿ ಮರಾಂಡಿ ವಿಪಕ್ಷಗಳ ಜತೆ ಕೈ ಜೋಡಿಸಿದಾಗಲೂ ವಿವಾದವು ಸಂಪೂರ್ಣ ಶಮನಗೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News