×
Ad

ಐಪಿಸಿಯ ಸೆ.304 ಎಯನ್ವಯ ಅಪರಾಧಕ್ಕೆ ನಿಗದಿ ಮಾಡಿರುವ ಶಿಕ್ಷೆ ತೀರಾ ಕಡಿಮೆ

Update: 2016-08-27 23:16 IST

ಹೊಸದಿಲ್ಲಿ, ಆ.27: ಒರಟು ಹಾಗೂ ನಿರ್ಲಕ್ಷದ ಕೃತ್ಯದಿಂದಾದ ಸಾವಿಗೆ ಐಪಿಸಿಯ ಪರಿಚ್ಛೇದದಲ್ಲಿ ವಿಧಿಸಲಾಗಿರುವ 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ‘ತೀರಾ ಕಡಿಮೆಯೆನಿಸಿದೆ’ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಐಪಿಸಿಯ ಸೆ.304 ಎಯನ್ವಯ(ಒರಟು ಹಾಗೂ ನಿರ್ಲಕ್ಷದ ಕೃತ್ಯದಿಂದ ಸಾವುಂಟು ಮಾಡುವುದು) ಅಪರಾಧಕ್ಕೆ ಇನ್ನಷ್ಟು ಕಠಿಣ ಶಿಕ್ಷೆಯಾಗುವಂತೆ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ತನ್ನ ಎರಡು ತೀರ್ಪುಗಳ ಮೂಲಕ ಮಾಡಿರುವ ಮನವಿಯನ್ನು ಸಂಸತ್ತಿಗೆ ಮನವರಿಕೆ ಮಾಡಲು ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿಯವರ ಸಹಕಾರವನ್ನು ನ್ಯಾಯಾಲಯ ಕೇಳಿದೆ.
ಈ ಅಪರಾಧಕ್ಕೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವಂತೆ ಮಾಡುವ ಕುರಿತು ಪರಿಶೀಲಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಸಿ. ನಾಗಪ್ಪನ್‌ರನ್ನೊಳಗೊಂಡ ಪೀಠವೊಂದು ಸಂಸತ್ತಿಗೆ ಈ ಹಿಂದೆ ಎರಡು ಬಾರಿ ಮನವಿ ಮಾಡಿತ್ತು. ಐಪಿಸಿಯ ಸೆ.304 ಎ ಅನ್ವಯದ ಅಪರಾಧಕ್ಕೆ 2 ವರ್ಷ ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಬಹುದೆಂದು ಹೇಳಲಾಗಿದೆ.
ಈ ಶಿಕ್ಷೆ ತೀರಾ ಅಪರ್ಯಾಪ್ತವಾಗಿದೆ. ಈ ವಿಷಯದಲ್ಲಿ ತಾವು ಅಟಾರ್ನಿ ಜನರಲ್‌ರ ಅಭಿಪ್ರಾಯವನ್ನು ಆಲಿಸ ಬಯಸುತ್ತಿದ್ದೇವೆ. ಆ ಬಗ್ಗೆ ಅವರಿಗೆ ಮನವರಿಕೆ ಮಾಡಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗರಿಗೆ ಸೂಚಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಆ.30ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News