×
Ad

ಐಸಿಸ್‌ನಿಂದ ’ಪ್ರಯೋಜನ’ವಿದೆ, ಅದನ್ನು ಮುಗಿಸಬೇಡಿ ಎಂದ ಇಸ್ರೇಲ್ ಬುದ್ಧಿಜೀವಿಗಳು

Update: 2016-08-28 09:01 IST

ಇಸ್ರೇಲ್, ಆ.28: ಐಸಿಸ್‌ನಿಂದ ಪ್ರಯೋಜನವಿದೆ; ಅದನ್ನು ಮುಗಿಸಬೇಡಿ; ಅದನ್ನು ಅಪ್ಘಾನಿಸ್ತಾನ, ಸಿರಿಯಾ ಹಾಗೂ ಇರಾಕ್ ವಿರುದ್ಧದ ಅಸ್ತ್ರವಾಗಿ ಬಳಸಿಕೊಳ್ಳಬಹುದು- ಇದು ಇಸ್ರೇಲಿನ ಬುದ್ಧಿಜೀವಿಗಳು ಪಾಶ್ಚಿಮಾತ್ಯ ದೇಶಗಳಿಗೆ ನೀಡಿದ ಸಲಹೆ!
ನ್ಯಾಟೊ ಜತೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಚಿಂತಕರ ಕೂಟ ಪಾಶ್ಚಿಮಾತ್ಯ ದೇಶಗಳಿಗೆ ಈ ಸಲಹೆ ನೀಡಿದೆ. ಈ ಮತೀಯವಾದಿ ಇಸ್ಲಾಮಿಕ್ ಉಗ್ರ ಸಂಘಟನೆ, ಜನಾಂಗೀಯ ಸಂಘರ್ಷ ಇರುವ ಸಿರಿಯಾ ಹಾಗೂ ಇಸ್ರೇಲ್‌ನಲ್ಲಿ ಹತ್ಯಾಕಾಂಡಗಳ ಮೂಲಕ ಇಡೀ ಜನಾಂಗವನ್ನೇ ನಿರ್ಮೂಲನೆ ಮಾಡುತ್ತಿದೆ ಎಂದು ಚಿಂತಕರ ಕೂಟ ವಿಶ್ಲೇಷಿಸಿದೆ.
ಐಸಿಸ್ ಅಸ್ತಿತ್ವ ಉಳಿಸಿಕೊಂಡರೆ ಅದು ತಂತ್ರಗಾರಿಕೆಯ ಉದ್ದೇಶವನ್ನು ಈಡೇರಿಸುತ್ತದೆ ಎಂದು ಕೂಟದ ಮುಖ್ಯಸ್ಥ ಎಫ್ರೈಮ್ ಇಂಬರ್ ಆಗಸ್ಟ್ 2ರಂದು ಪ್ರಕಟಿಸಿದ ಒಂದು ಲೇಖನದಲ್ಲಿ ವಿವರಿಸಿದ್ದಾರೆ.
ಸಾಮೂಹಿಕ ಹತ್ಯಾಕಾಂಡ ನಡೆಸುತ್ತಿರುವ ಉಗ್ರವಾದಿ ಗುಂಪುಗಳ ನಿರ್ಮೂಲನೆಗೆ ರಷ್ಯಾ ಜತೆ ಕೈಜೋಡಿಸುವ ಮೂಲಕ ಅಮೆರಿಕ ಪ್ರಮಾದ ಎಸಗಿದೆ. ಇದು ರಷ್ಯಾ- ಟೆಹರಾನ್- ಡಮಾಸ್ಕಸ್ ಕೂಟವನ್ನು ಬಲಗೊಳಿಸಲು ಕಾರಣವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಲು ರಷ್ಯಾ, ಸಿರಿಯಾ ಹಾಗೂ ಇರಾನ್ ಯತ್ನಿಸುತ್ತಿವೆ ಎನ್ನುವುದು ಅವರ ವಿಶ್ಲೇಷಣೆ.
ಪಾಶ್ಚಿಮಾತ್ಯ ದೇಶಗಳು ಐಸಿಸ್ ದುರ್ಬಲಗೊಳಿಸಲು ಮುಂದಾಗಬೇಕೇ ವಿನಃ ಅದನ್ನು ನಿರ್ಮೂಲನೆ ಮಾಡಬಾರದು ಎಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News