×
Ad

’ನಮಗೆ ಜಾತಿಯಿಲ್ಲ’ ಕಾರ್ಯಕ್ರಮ ಮುಖ್ಯಮಂತ್ರಿ ಪಿಣರಾಯಿಯಿಂದ ಉದ್ಘಾಟನೆ

Update: 2016-08-28 12:06 IST

ತಿರುವನಂತಪುರಂ, ಆಗಸ್ಟ್ 28: ಶ್ರೀನಾರಾಯಣ ಗುರು ಅವರ ನಮಗೆ ಜಾತಿಯಿಲ್ಲ ಎಂಬ ಘೋಷಣೆಯ ನೂರನೆ ವರ್ಷಾಚರಣೆ ಕಾರ್ಯಕ್ರಮವನ್ನು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ ಎಂದು ವರದಿಯಾಗಿದೆ. ಸಂಸ್ಕೃತಿ ಸಚಿವಾಲಯ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಖಾತೆ, ರಾಜ್ಯ ಲೈಬ್ರರಿ ಕೌನ್ಸಿಲ್ ಜಂಟಿಯಾಗಿ ಕಾರ್ಯಕ್ರಮವನ್ನು ಏರ್ಪಡಿಸಲಿದ್ದು ಇದು ತಿರುವನಂತಪುರದಲ್ಲಿ ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಳ್ಳಲಿದೆ. ಕೇರಳದ ಎಲ್ಲ ಜಿಲ್ಲೆಗಳಲ್ಲಿ ನಮಗೆ ಜಾತಿಯಿಲ್ಲ ಎಂಬ ಶ್ರೀನಾರಾಯಣಗುರು ಅವರ ಘೋಷಣೆಗೆ ಸಂಬಂಧಿಸಿ ಕಾರ್ಯಕ್ರಮ ಇರಲಿದೆ. ಲೈಬ್ರರಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಘೋಷಣಾ ಪತ್ರವನ್ನು ಮುದ್ರಿಸಿ ತೂಗುಹಾಕಬೇಕೆಂದು ಸರಕಾರದ ಕಾರ್ಯದರ್ಶಿ ರಾಣಿಜಾರ್ಜ್ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News