ಖೇಲ್ ದಿವಸ್ ರೂಪದಲ್ಲಿ ಧ್ಯಾನ್‌ಚಂದ್ ಜನ್ಮದಿನಾಚರಣೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಆ.28: ಹಾಕಿ ಲೆಜೆಂಡ್ ಮೇಜರ್ ಧ್ಯಾನ್‌ಚಂದ್ ಜನ್ಮದಿನ ಆ.29ನ್ನು ಖೇಲ್ ದಿವಸ್ ಆಗಿ ಆಚರಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ತಿಳಿಸಿದ್ದಾರೆ.
ಇಪ್ಪತ್ತಮೂರನೆ ಆವೃತ್ತಿಯ ಮನ್ ಕೀ ಬಾತ್‌ನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ರಿಯೋ ಒಲಿಂಪಿಕ್ಸ್ ಬಳಿಕ ಮೊದಲ ಬಾರಿ ಧ್ಯಾನ್ ಚಂದ್ ಅವರನ್ನು ಸ್ಮರಿಸಿದ್ದಾರೆ.
ಹೈಲೈಟ್ಸ್
* ಕರ್ನಾಟಕದ ಕೊಪ್ಪಲ ಗ್ರಾಮದಲ್ಲಿ ಕುಟುಂಬದ ವಿರೋಧದ ನಡುವೆಯೂ ಶೌಚಾಲಯಕ್ಕೆ ಸತ್ಯಾಗ್ರಹ ನಡೆಸಿದ ಹದಿನಾರು ವರ್ಷದ ಬಾಲಕಿ ಮಲ್ಲಮ್ಮ ಮತ್ತು ಶೌಚಾಲಯ ನಿರ್ಮಿಸಿಕೊಟ್ಟ ಗ್ರಾಮದ ಮುಖ್ಯಸ್ಥರಿಗೆ ಧನ್ಯವಾದ.
*ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪುತ್ರಿಯರು ಉತ್ತಮ ಸಾಧನೆ ಮಾಡಿದ್ದಾರೆ. ಪಿ.ವಿ.ಸಿಂಧು, ಸಾಕ್ಷಿ ಮಲಿಕ್ , ದೀಪಾ ಕರ್ಮಾಕರ್ ಅವರನ್ನು ಮೋದಿ ಅಭಿನಂದನೆಗಳು
* ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನವಾಗಿರುವ ಸೆ.೫ನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಆ ದಿನ ನನಗೆ ಶಿಕ್ಷಾ ದಿವಸವೂ ಹೌದು.