ಬೀದಿನಾಯಿ ಉಪಟಳ ಭೂಷಣ್‌ಗೆ ಉತ್ತರಿಸಿದ ಪಿಣರಾಯಿ ವಿಜಯನ್
Update: 2016-08-28 23:28 IST
ತಿರುವನಂತಪುರಂ,ಆ.28: ಬೀದಿನಾಯಿ ಸಮಸ್ಯೆಗೆ ಸಂಬಂಧಿಸಿ ಪ್ರಶಾಂತ್ ಭೂಷಣ್‌ರವರ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರ ನೀಡಿದ್ದಾರೆ. ಕೇರಳದಾದ್ಯಂತ ನಾಯಿಗಳನ್ನು ಕೊಂದು ಹಾಕಲಾಗುತ್ತಿದೆ ಎಂಬ ರೀತಿಯ ಮಾಧ್ಯಮ ವರದಿಗಳು ತಮ್ಮಂತಹ ಪ್ರಮುಖ ವ್ಯಕ್ತಿಯನ್ನು ಪ್ರಭಾವಿಸಿದ್ದು ದುರದೃಷ್ಟಕರವಾಗಿದೆ. ಬೀದಿನಾಯಿಗಳನ್ನು ಕೊಲ್ಲುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮನುಷ್ಯರು ಮತ್ತು ಪ್ರಾಣಿಗಳ ಜೀವಕ್ಕೆ ಬೆಲೆ ನೀಡಲಾಗುವುದು. ಕಾನೂನಿನ ಮಿತಿಯಲ್ಲಿ ಬೀದಿನಾಯಿಗಳನ್ನು ಬಂಜೆತನದ ಔಷಧ ನೀಡುವುದು ಸರಕಾರದ ನಿರ್ಧಾರವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.