‘‘ಬೀಫ್ ತಿಂದಿದ್ದರಿಂದ ಬೋಲ್ಟ್‌ಗೆ 9 ಒಲಿಂಪಿಕ್ ಚಿನ್ನ ಬಂತು, ಭಾರತೀಯರೂ ತಿನ್ನಬೇಕು’’: ಬಿಜೆಪಿ ಸಂಸದ ಉದಿತ್ ರಾಜ್

Update: 2016-08-29 10:05 GMT

  ಹೊಸದಿಲ್ಲಿ, ಆ.29: ಶರವೇಗದ ಸರದಾರ ಜಮೈಕಾದ ಉಸೇನ್ ಬೋಲ್ಟ್ ಅವರಿಗೆ ಬೀಫ್ ತಿಂದಿದ್ದರಿಂದ ಒಲಿಂಪಿಕ್ಸ್‌ನಲ್ಲಿ 9 ಚಿನ್ನ ಗೆಲ್ಲಲು ಸಾಧ್ಯವಾಯಿತು.ಒಲಿಂಪಿಕ್ಸ್ ಚಿನ್ನ ಗೆಲ್ಲಲು ‘‘ಭಾರತೀಯರೂ ಬೀಫ್ ತಿನ್ನಬೇಕು’’ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ.
 ತಮ್ಮ ಪಕ್ಷ ಬಿಜೆಪಿ ಬೀಫ್ ತಿನ್ನುವುದರ ವಿರುದ್ಧ ನಿಲುವು ಹೊಂದಿದ್ದರೂ, ಉದಿತ್ ರಾಜ್ ಬೀಫ್ ತಿನ್ನುವುದರ ಪರ ಬ್ಯಾಟಿಂಗ್ ಮಾಡಿದ್ದಾರೆ. ಉದಿತ್ ರಾಜ್ ದಿಲ್ಲಿ ವಾಯುವ್ಯ ಕೇತ್ರದ ಬಿಜೆಪಿ ಸಂಸದ. ಅಖಿಲ ಭಾರತ ಎಸ್‌ಸಿ/ಎಸ್‌ಟಿ ಸಂಘಟನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಉದಿತ್ ರಾಜ್ ಅವರು ಬೀಫ್ ತಿನ್ನುವುದರ ಬಗ್ಗೆ ತನ್ನ ಅನಿಸಿಕೆಯನ್ನು 200 ಬಾರಿ ಟ್ವೀಟ್ ಮಾಡಿ, ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
 ಬೋಲ್ಟ್ ಬಡವ ಮತ್ತು ಆರೋಗ್ಯಕ್ಕಾಗಿ ಪ್ರೋಟಿನ್ ಪಡೆಯಲು ಬೀಫ್ ತಿನ್ನುತ್ತಿದ್ದಾರೆ ಎಂದು ಉದಿತ್ ರಾಜ್ ನೀಡಿರುವ ಹೇಳಿಕೆಯನ್ನು ಉಲ್ಲೇಕಿಸಿ ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ.
   ದಲಿತರ ಮೇಲೆ ಬೀಫ್ ವಿಚಾರದಲ್ಲಿ ದಾಳಿ ನಡೆಸುವ ಗೋರಕ್ಷಣಾ ದಳದ ನಿಲುವನ್ನು ಟೀಕಿಸಿರುವ ಉದಿತ್ ರಾಜ್ ‘‘ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುವ ಕ್ರಮದ ಬಗ್ಗೆ ಹಿಂದೂ ಧರ್ಮದ ಸ್ವಯಂಘೋಷಿತ ರಕ್ಷಕರು ಉತ್ತರ ನೀಡಬೇಕು’’ ಎಂದು ಹೇಳಿದ್ದಾರೆ.
 ಉದಿತ್ ರಾಜ್ ನಿಲುವನ್ನು ಆಪ್ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯ ಮಂತ್ರಿ, ಅರವಿಂದ್ ಕೇಜ್ರಿವಾಲ್ ಬೆಂಬಲಿಸಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿ ಹೊರಬರುವಂತೆ ಉದಿತ್ ರಾಜ್‌ಗೆ ಸಲಹೆ ನೀಡಿದ್ದಾರೆ.


  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News