ಸಿರಿಯಕ್ಕೆ ಕತರ್‌ನಿಂದ 12 ಮಿಲಿಯನ್ ಡಾಲರ್ ಸಹಾಯ

Update: 2016-08-29 11:41 GMT

ದೋಹ,ಆ.29: ಸಿರಿಯನ್ ಜನರಿಗೆ ತುರ್ತು ನೆರವಿಗಾಗಿ ಹನ್ನೆರಡು ಮಿಲಿಯನ್ ಡಾಲರ್‌ನ್ನು ಕತರ್ ಅಭಿವೃದ್ಧಿ ಫಂಡ್ ಮತ್ತು ರೆಡ್‌ಕ್ರೆಸೆಂಟ್ ಸೊಸೈಟಿ ಸಹಕಾರದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಕತರ್ ಅಭಿವೃದ್ಧಿ ಫಂಡ್ ಡೈರೆಕ್ಟರ್ ಜನರಲ್ ಖಲೀಫ ಬಿನ್ ಜಾಸಿಂ ಅಲ್‌ಉವಾರಿ ಮತ್ತು ರೆಡ್ ಕ್ರೆಸೆಂಟ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಫಹದ್ ಬಿನ್ ಮುಹಮ್ಮದ್ ಅನ್ನುಐಮಿ ಸಹಿ ಹಾಕಿದ್ದಾರೆ.

 2016ರ ಫೆಬ್ರವರಿಯಲ್ಲಿ ಬ್ರಿಟನ್‌ನಲ್ಲಿ ನಡೆದಿದ್ದ ಸಿರಯನ್ ನೆರವು ಸಮಿತಿಯ ಸಭೆಯಲ್ಲಿ ಕತರ್ ವಹಿಸಿಕೊಂಡಿದ್ದ ನೂರು ಮಿಲಿಯನ್ ಡಾಲರ್ ನೆರವಿನ ಭಾಗವಾಗಿ ಎರಡನೆ ಘಟ್ಟದ ನೆರವನ್ನು ಕತರ್ ನೀಡುತ್ತಿದೆ. ಸಿರಿಯನ್ ಜನರು ಇಂದು ಅನುಭವಿಸುತ್ತಿರುವ ದಾರುಣ ಅವಸ್ಥೆಯ ಈ ಸಂದರ್ಭದಲ್ಲಿ ಕತರ್ ವಹಿಸಿಕೊಂಡ ಹೊಣೆಯನ್ನು ಈಡೇರಿಸುವಲ್ಲಿ ಪ್ರತಿಜ್ಞಾಬದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.ಆರೋಗ್ಯ, ವಿದ್ಯಾಭ್ಯಾಸ, ಆಹಾರ ಮುಂತಾದ ಆವಶ್ಯಕ ಕ್ಷೇತ್ರದಲ್ಲಿಈನೆರವನ್ನು ವಿನಿಯೋಗಿಸಲಾಗುವುದು ಎಂದು ರೆಡ್‌ಕ್ರೆಸೆಂಟ್ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಯ ಮಾನವೀಯ ಸಹಾಯ ಸಮಿತಿಯೊಂದಿಗೆ ಸಹಕರಿಸಿ ರೆಡ್‌ಕ್ರೆಸೆಂಟ್ ಸಿರಿಯದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅದರ ವಕ್ತಾರ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News