ಸಮುದ್ರದಲ್ಲಿ ಮುಳುಗುತ್ತಿದ್ದ ಐವರನ್ನು ರಕ್ಷಿಸಿದ ಧೀರ ಯುವಕ

Update: 2016-08-29 14:16 GMT

ದುಬೈ, ಆ. 29: ದುಬೈಯ ‘ಪಾಮ್ ಡೈರ’ ಕರಾವಳಿಯ ಸಮುದ್ರದಲ್ಲಿ ಮಗುಚಿದ ಪ್ರವಾಸಿ ದೋಣಿಯಿಂದ ಐವರನ್ನು ಎಮಿರೇಟ್ ವ್ಯಕ್ತಿಯೊಬ್ಬರು ರಕ್ಷಿಸಿ ‘ಹೀರೊ’ ಎನಿಸಿಕೊಂಡಿದ್ದಾರೆ.
ದುಬೈ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಮುಹಮ್ಮದ್ ಅಲ್ ಝರೂನಿ ಪಾಮ್ ಡೈರ ಸಮುದ್ರದಲ್ಲಿ ತನ್ನ ಓರ್ವ ಸ್ನೇಹಿತನೊಂದಿಗೆ ಶನಿವಾರ ಸಂಜೆ ಸುಮಾರು 7 ಗಂಟೆಗೆ ದೋಣಿಯಲ್ಲಿ ಯಾನ ಕೈಗೊಂಡಿದ್ದರು. ಆಗ ದೂರದಲ್ಲೆಲ್ಲೊ ಜನರ ಆಕ್ರಂದನ ಕೇಳಿಸಿತು.
ಬೊಬ್ಬೆ ಕೇಳಿಬಂದತ್ತ ದೋಣಿಯನ್ನು ತಿರುಗಿಸಿದ ಅವರು ಅತ್ತ ಧಾವಿಸಿದರು. ಅಲ್ಲಿ ಐವರು ನೀರಿನಲ್ಲಿ ಮುಳುಗುತ್ತಿದ್ದರು. ಝರೂನಿ ಮತ್ತು ಅವರ ಸ್ನೇಹಿತರು ನೀರಿಗೆ ಧುಮುಕಿ ಅವರೆಲ್ಲರನ್ನೂ ಮೇಲೆತ್ತಿದರು.
ಅವರು ಜೀವ ರಕ್ಷಕ ಜಾಕೆಟನ್ನು ಧರಿಸಿದ್ದುದರಿಂದ ನೀರಲ್ಲಿ ಮುಳುಗದೆ ಎರಡು ಗಂಟೆಗಳಿಂದ ತೇಲುತ್ತಿದ್ದರು. ಬಳಿಕ ಅವರನ್ನು ಸುರಕ್ಷಿತವಾಗಿ ಸಮುದ್ರ ತೀರಕ್ಕೆ ಕರೆತರಲಾಯಿತು. ಇದೇ ವ್ಯಕ್ತಿ ಈ ಹಿಂದೆಯೂ ಒಮ್ಮೆ ಅರಬ್ ಮಹಿಳೆಯನ್ನು ಇಂಥದೇ ಪರಿಸ್ಥಿತಿಯಲ್ಲಿ ರಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News