ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಭಾರೀ ಸದ್ದು; ಸ್ಫೋಟವಲ್ಲ

Update: 2016-08-29 15:02 GMT

ಲಾಸ್ ಏಂಜಲಿಸ್, ಆ. 29: ಗುಂಡು ಹಾರಾಟದ ಸದ್ದನ್ನು ಹೋಲುವ ಭಾರೀ ಸದ್ದು ಕೇಳಿ ಬಂದ ಬಳಿಕ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರವಿವಾರ ರಾತ್ರಿ ಭಾಗಶಃ ಮುಚ್ಚಲಾಗಿದೆ.

ಕಪ್ಪು ರೆರೊ (ನರಿಯನ್ನು ಹೋಲುವ ಶ್ವಾನ ಜಾತಿಗೆ ಸೇರಿದ ಪ್ರಾಣಿ)ದ ವೇಷ ಹಾಕಿಕೊಂಡ ವ್ಯಕ್ತಿಯೊಬ್ಬ ಈ ಸದ್ದು ಮಾಡಿರಬಹುದೆಂದು ಶಂಕಿಸಲಾಗಿದ್ದು, ಆತನನ್ನು ಬಳಿಕ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಸದ್ದು ಕೇಳಿ ಗಾಬರಿಯಿಂದ ಓಡಿ ಹೋದ ಪ್ರಯಾಣಿಕರು ಬಳಿಕ ನಿಧಾನವಾಗಿ ಜನ ನಿಬಿಡ ವಿಮಾನ ನಿಲ್ದಾಣಕ್ಕೆ ವಾಪಸಾದರು.

‘‘ಗುಂಡು ಹಾರಾಟದಂತೆ ಆರಂಭದಲ್ಲಿ ಕಂಡು ಬಂದ ಸದ್ದು ಬಳಿಕ ದೊಡ್ಡ ಸದ್ದಷ್ಟೆ ಎಂದು ಸಾಬೀತಾಯಿತು’’ ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆಯ ಮುಖ್ಯ ವಕ್ತಾರ ಆ್ಯಂಡಿ ನೀಮನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಆದಾಗ್ಯೂ, ರೆರೊದಂತೆ ವೇಷ ಹಾಕಿದ ವ್ಯಕ್ತಿ ಇಲ್ಲಿ ಯಾವ ಪಾತ್ರ ವಹಿಸಿದ್ದಾನೆ ಎನ್ನುವುದು ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News