×
Ad

ಹೆಚ್ಚಿದ ಮಾಲಿನ್ಯ ಕನಸಾಗಿಯೇ ಉಳಿದ ಶುದ್ಧಗಂಗೆ

Update: 2016-08-29 22:49 IST

ಶ್ಚಿಮ ಬಂಗಾಳದ ಚಂದನ್‌ನಗರ ಗಂಗಾನದಿಯ ಉಪನದಿ ಹೂಗ್ಲಿಯ ದಂಡೆಯ ್ರೆಂಚರ ಕಾಲದ ಕಾಲನಿ. ಪಟ್ಟಣದ ಪ್ರವಾಸಿ ಆಕರ್ಷಣೆಯ ಕೇಂದ್ರವಾದ ವಂಡರ್‌ಲ್ಯಾಂಡ್ ಉದ್ಯಾನವನದಲ್ಲಿ ಇರುವ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ಸಾಮರ್ಥ್ಯ ದ್ವಿಗುಣಗೊಂಡಿದೆ. ಹಿಂದೂ ಶಿಲ್ಪಗಳು ಇರುವ ಈ ಹಸಿರು ಹೊದ್ದ ಉದ್ಯಾನವನದಲ್ಲಿ ನಿಧಾನವಾಗಿ ಫಿಲ್ಟರ್‌ಗಳು, ತ್ಯಾಜ್ಯಪೈಪ್‌ಗಳು ಹೆಚ್ಚುತ್ತಿವೆ. ಆಕರ್ಷಕ ಪರಿಸರ ಇದರ ಇತಿಮಿತಿಗಳನ್ನು ಮುಚ್ಚಿಹಾಕಿದೆ. ಗಂಗೆಯನ್ನು ಸ್ವಚ್ಛಗೊಳಿಸುವ ಸರಕಾರದ ಒತ್ತಾಸೆಯ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ಈ ಘಟಕ ನಗರದ ದ್ರವ ತ್ಯಾಜ್ಯದ ಶೇಕಡ 10ರಷ್ಟನ್ನು ಮಾತ್ರ ಇದು ಸಂಸ್ಕರಿಸುತ್ತದೆ. ಬಹುತೇಕ ಮನೆಗಳು ಇನ್ನೂ ಒಳಚರಂಡಿ ಸಂಪರ್ಕ ಪಡೆದಿಲ್ಲ. ಆದ್ದರಿಂದ ಸಂಸ್ಕರಿಸದ ಕಚ್ಚಾ ಮಲಿನ ನೀರು ಪವಿತ್ರ ಗಂಗೆಗೆ ನೇರವಾಗಿ ಹರಿಯುತ್ತದೆ.

ಕೊಲ್ಕತ್ತಾ ನಗರದ ಉತ್ತರಭಾಗ ಗಂಗೆಯ ಅತ್ಯಂತ ಮಲಿನ ಪ್ರದೇಶ. ಆದರೆ ವಾರಣಾಸಿಯ ಆಕರ್ಷಕ ಘಾಟ್‌ಗಳಂತೆ ಅಥವಾ ಕಾನ್ಪುರದ ವಿಷಕಾರಿ ಟ್ಯಾನರಿಗಳಂತೆ ಈ ಪ್ರದೇಶ ಗಮನ ಸೆಳೆದಿಲ್ಲ. ಗಂಗಾನದಿ ದಂಡೆಯ ನೂರಾರು ಪಟ್ಟಣಗಳಿಂದ ಪ್ರತಿದಿನ 700 ಕೋಟಿ ಲೀಟರ್‌ನಷ್ಟು ಕಚ್ಚಾ ತ್ಯಾಜ್ಯನೀರನ್ನು ಗಂಗೆಗೆ ನೇರವಾಗಿ ಹಾಗೂ ಉಪನದಿಗಳ ಮೂಲಕ ಹರಿಸಲಾಗುತ್ತದೆ. ಈ ಪೈಕಿ ಅರ್ಧದಷ್ಟು ಪಶ್ಚಿಮ ಬಂಗಾಳದಿಂದ ಬರುತ್ತದೆ ಎಂದು ಪಶ್ಚಿಮ ಬಂಗಾಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಕಲ್ಯಾಣ್ ರುದ್ರ ಹೇಳುತ್ತಾರೆ. ಸ್ವತಃ ಜಲತಜ್ಞರೂ ಆಗಿರುವ ಇವರು ಹಲವು ವರ್ಷಗಳಿಂದ ನದಿಯ ಸ್ಥಿತಿಗತಿಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಪಶ್ಚಿಮ ಬಂಗಾಳ ಗಂಗಾನದಿ ಪಾತ್ರಕ್ಕೆ ಒಟ್ಟು ಶೇಕಡ 48ರಷ್ಟು ಮಲಿನ ನೀರನ್ನು ಹರಿಸುತ್ತದೆ. ಶೇಕಡ 42ರಷ್ಟು ನೀರನ್ನು ಮಾತ್ರ ಸಂಸ್ಕರಿಸುತ್ತಿದ್ದು, 54 ಚರಂಡಿಗಳ 1,779 ದಶಲಕ್ಷ ಲೀಟರ್ ನೀರನ್ನು ಸಂಸ್ಕರಿಸದೇ ನೇರವಾಗಿ ಗಂಗೆಯ ಒಡಲಿಗೆ ಹರಿಸುತ್ತಿದೆ. ವಾಸ್ತವವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹಿಮಾಲಯದ ಹಿಮನದಿಗಳಿಂದ ಗಂಗೆ ಸುಮಾರು 2,500 ಕಿಲೋಮೀಟರ್ ಬಯಲು ಪ್ರದೇಶದಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ನದಿಯನ್ನು ಅವಲಂಬಿಸಿರುವ ಸುಮಾರು 50 ಕೋಟಿ ಮಂದಿಯಿಂದ ವಿಷಕಾರಿ ತ್ಯಾಜ್ಯಗಳನ್ನು ಒಡಲಿಗೆ ತುಂಬಿಕೊಂಡು ಸಾಗುವ ಗಂಗೆ ವಿಶ್ವದ ಅತ್ಯಂತ ಮಲಿನ ನದಿ ಎನಿಸಿಕೊಂಡಿದ್ದಾಳೆ. ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಗಂಗಾನದಿ ದಂಡೆಯಲ್ಲಿ ಉತ್ಪಾದನೆಯಾಗುವ ಹತ್ತನೆ ಒಂದರಷ್ಟು ತ್ಯಾಜ್ಯ ನೀರನ್ನು ಮಾತ್ರ ಸಂಸ್ಕರಿಸಲಾಗುತ್ತದೆ.
ಸಂಸ್ಕರಿಸದ ತ್ಯಾಜ್ಯ ನೀರು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ನದಿಯ ಮಾಲಿನ್ಯಕಾರಕ ಅಂಶಗಳ ಪೈಕಿ ಶೇ. 85ರಷ್ಟು ಕೊಡುಗೆ ನೀಡುತ್ತಿದೆ. ಉಳಿದಂತೆ ಕೈಗಾರಿಕೆಗಳ ಘನ ಲೋಹಗಳು, ಕೃಷಿ ಕ್ಷೇತ್ರದ ಕೀಟನಾಶಕಗಳು, ಘನ ತ್ಯಾಜ್ಯ, ಮೃತದೇಹ ಹಾಗೂ ಜಾನುವಾರುಗಳ ಕಳೇಬರದಿಂದ ಮಲಿನವಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, 100 ಮಿಲಿಲೀಟರ್ ನೀರಿನಲ್ಲಿ 1.60 ಲಕ್ಷ ಫೀಕಲ್ ಕೋಲಿಾರ್ಮ್ ಬ್ಯಾಕ್ಟೀರಿಯಾ ಕಂಡುಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ, 100 ಮಿಲಿಲೀಟರ್ ನೀರಿನಲ್ಲಿ ಗರಿಷ್ಠ 1,000 ಇಂಥ ಬ್ಯಾಕ್ಟೀರಿಯಾ ಇರಬಹುದು. ಈ ಸಮಸ್ಯೆ ಹೆಚ್ಚಿನ ಕಡೆಗಳಲ್ಲಿ ಕಂಡುಬರುತ್ತದೆ. ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ 2013ರ ವರದಿಯಲ್ಲಿ, ಇಡೀ ಗಂಗಾನದಿಯಲ್ಲಿ ಸ್ವೀಕಾರಾರ್ಹವಲ್ಲದ ಪ್ರಮಾಣದ ಬ್ಯಾಕ್ಟೀರಿಯಾ ಕಂಡುಬರುತ್ತಿದೆ. ಹಿಂದೂ ಯಾತ್ರಿಕರು ಪವಿತ್ರ ಸ್ಥಳವೆಂದು ಭೇಟಿ ನೀಡುವ ಗಂಗೆಯ ಮೇಲ್ಭಾಗದ ಪಟ್ಟಣಗಳ ಹೃಷಿಕೇಶ, ಹರಿದ್ವಾರಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ವಿವರಿಸಿದೆ.
‘‘ಪಶ್ಚಿಮ ಬಂಗಾಳ ರಾಜ್ಯಕ್ಕೇ ಸೀಮಿತವಾಗಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ 13,467 ಕೋಟಿ ರೂಪಾಯಿ ಬೇಕು ಹಾಗೂ ಪ್ರತಿ ವರ್ಷ ನಿರ್ವಹಣೆಗೆ 100 ಕೋಟಿ ರೂಪಾಯಿ ಬೇಕು’’ ಎಂದು ರುದ್ರ ಅಂದಾಜು ಮಾಡುತ್ತಾರೆ. ‘‘ಇಷ್ಟೊಂದು ಪ್ರಮಾಣದ ಹಣ ರಾಜ್ಯ ಸರಕಾರದಲ್ಲಿಲ್ಲ. ಹಿಂದೆ ಕೇಂದ್ರ ಸರಕಾರ ಗಂಗಾನದಿ ಹರಿಯುವ ಎಲ್ಲ ಪ್ರದೇಶಗಳ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ನೀಡುತ್ತಿತ್ತು. ಇದೀಗ ನ್ಯಾಷನಲ್ ಮಿಷನ್ ಾರ್ ಕ್ಲೀನ್ ಗಂಗಾ ಯೋಜನೆಯಡಿ, ಈ ಹೊಣೆಯನ್ನು ಹಣವಿಲ್ಲದ ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ’’ ಎನ್ನುವುದು ಅವರ ವಿಶ್ಲೇಷಣೆ.

ಪಶ್ಚಿಮ ಬಂಗಾಳ ಈಗಾಗಲೇ 95 ಅತಿಮಾಲಿನ್ಯಕಾರಕ ಕೈಗಾರಿಕೆಗಳನ್ನು ಮುಚ್ಚಿದೆ. ಉತ್ತರ ಪ್ರದೇಶದಲ್ಲಿ ಇಂಥ 94 ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಆದರೆ ಇದರಿಂದ ದೊಡ್ಡ ಬದಲಾ ವಣೆಯೇನೂ ಆಗಿಲ್ಲ. ಕೊಲ್ಕತ್ತಾದಿಂದ ಭಾಗೀರಥಿ-ಹೂಗ್ಲಿವರೆಗೆ ಗಂಗಾನದಿ ದಂಡೆಯಲ್ಲಿ ಪ್ರಯಾಣ ಬೆಳೆಸಿದರೆ, ಬಾಳೆತೋಟದ ನಡುವೆ ಸರಣಿಯೋಪಾದಿಯಲ್ಲಿ ಅಕ್ರಮ ಗುಡಿ ಕೈಗಾರಿಕೆಗಳು, ಇಟ್ಟಿಗೆ ಭಟ್ಟಿಗಳು, ಕಲ್ಲಿದ್ದಲು ಉರಿಸುವ ವಿದ್ಯುತ್ ಸ್ಥಾವರಗಳು ನದಿಗೆ ತ್ಯಾಜ್ಯ ನೀರನ್ನು ಹರಿಸುವ ದೃಶ್ಯಗಳು ಕಂಡುಬರುತ್ತವೆ. ಮರಳು ಗಣಿಗಾರಿಕೆಗಾಗಿ ನದಿದಂಡೆಯ ಇಕ್ಕೆಲಗಳನ್ನು ಬರಿದು ಮಾಡುತ್ತಿದ್ದಾರೆ.

ಹಿಂದಿನ ವೈಲ್ಯ
ದೇಶದ ಅತ್ಯಂತ ಉದ್ದದ ಹಾಗೂ ಪವಿತ್ರ ನದಿಯನ್ನು ಸ್ವಚ್ಛಗೊಳಿಸುವ ಹಿಂದಿನ ಪ್ರಯತ್ನಗಳು ವಿಲವಾಗಿವೆ. ಮೂರು ದಶಕಗಳ ಸರಕಾರದ ಕ್ರಿಯಾ ಯೋಜನೆಗಳು ಮತ್ತು ಕೋಟ್ಯಂತರ ರೂಪಾಯಿ ವೆಚ್ಚವಾದ ಬಳಿಕ ಗಂಗೆ ಮತ್ತಷ್ಟು ಕೊಳಕಾಗಿದೆ.
ಗಂಗೆ ಸ್ವಚ್ಛತೆಗೆ ಮೊದಲ ಪ್ರಯತ್ನ ನಡೆದದ್ದು 1986ರಲ್ಲಿ. ರಾಜೀವ್‌ಗಾಂ ಪ್ರಧಾನಿಯಾಗಿದ್ದಾಗ, ಗಂಗಾ ಕ್ರಿಯಾ ಯೋಜನೆಯ ಮೊದಲ ಹಂತವನ್ನು ಜಾರಿಗೊಳಿಸಿ ಗಂಗಾನದಿಯನ್ನು ಮಾಲಿನ್ಯಮುಕ್ತಗೊಳಿಸುವ ಸಾಹಸಕ್ಕೆ ಕೈಹಾಕಿದ್ದರು. ಈ ಯೋಜನೆಯ ಮೂಲ ಉದ್ದೇಶವೆಂದರೆ ನದಿಯತ್ತ ಹರಿಯುವ ಎಲ್ಲ ಚರಂಡಿಗಳನ್ನು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳತ್ತ ತಿರುಗಿಸುವುದು ಮತ್ತು ಸಂಸ್ಕರಿತ ನೀರನ್ನು ಪುನರ್ಬಳಕೆ ಮಾಡು ವುದು. ಮೊದಲ ಹಂತದಲ್ಲಿ ಮುಖ್ಯ ನದಿಯನ್ನು ಕೇಂದ್ರೀಕರಿಸಿದರೆ, ಎರಡನೆ ಹಂತದಲ್ಲಿ ದಿಲ್ಲಿಯ ಮೂಲಕ ಹರಿಯವ ಯಮುನಾ ನದಿ ಸೇರಿದಂತೆ ಎಲ್ಲ ಉಪನದಿಗಳನ್ನು ಮಾಲಿನ್ಯಮುಕ್ತಗೊಳಿಸುವ ಉದ್ದೇಶವಿತ್ತು. ಬಳಿಕ 2008ರಲ್ಲಿ ಯೋಜನೆಯಲ್ಲಿ ಸಮಗ್ರ ಬದಲಾವಣೆ ತಂದು, ಇಡೀ ನದಿಯನ್ನು ಒಂದೇ ಹಂತದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಕಾರ ವಹಿಸಿಕೊಂಡ ಮೊದಲ ದಿನದಿಂದಲೇ 2020ರೊಳಗೆ ನದಿಯನ್ನು ಸ್ವಚ್ಛಗೊಳಿಸುವ ಪಣ ತೊಟ್ಟರು. ಆದರೆ ನದಿ ಮತ್ತಷ್ಟು ಕಲುಷಿತಗೊಂಡಿರುವುದನ್ನು ಹೊಸ ಅಧ್ಯಯನ ತೋರಿಸುತ್ತದೆ.

ತಪ್ಪುದೃಷ್ಟಿಕೋನ
ಆದರೆ ವಾಸ್ತವವಾಗಿ ಕೈಗಾರಿಕೆ ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳತ್ತ ಗಮನ ಹರಿಸಿರುವ ಪರಿಕಲ್ಪನೆಯೇ ತಪ್ಪುದಾರಿಗೆ ಎಳೆಯುವಂಥದ್ದು. ನದಿಪಾತ್ರದುದ್ದಕ್ಕೂ ಎಸ್‌ಟಿಪಿಗಳನ್ನು ನಿರ್ಮಿಸದಿರುವುದು ಅಥವಾ ಇವುಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸದಿರುವುದು ಸಮಸ್ಯೆಯಲ್ಲ. ಇಡೀ ಕ್ರಿಯಾಯೋಜನೆಯಂತೆ ನದಿಯುದ್ದಕ್ಕೂ ಇಂಥ ಘಟಕಗಳು ನಿರ್ಮಾಣವಾಗಿ, ಒಳಚರಂಡಿ ಸೌಲಭ್ಯ ಕಲ್ಪಿಸಿದರೂ, ಗಂಗೆ ಮಾಲಿನ್ಯ ಮುಕ್ತವಾಗುವುದಿಲ್ಲ. ಏಕೆಂದರೆ ಹಾಲಿ ಇರುವ ಸಂಸ್ಕರಣಾ ಘಟಕಗಳು ಫೀಕಲ್ ಕೋಲಿಾರಂಗಳನ್ನು ತೆಗೆಯಲು ಅಗತ್ಯವಾದ ಆಧುನಿಕ ತಂತ್ರಜ್ಞಾನವನ್ನು ಹೊಂದಿಲ್ಲ. 1980ರ ದಶಕದಲ್ಲಿ ಕೇಂದ್ರದ ನೆರವಿನಲ್ಲಿ ನಿರ್ಮಾಣವಾದ ಈ ಘಟಕಗಳು ಜೈವಿಕ ಆಮ್ಲಜನಕ ಬೇಡಿಕೆಯ ಹಿನ್ನೆಲೆಯಲ್ಲಿ ನಿರ್ಮಾಣಗೊಂಡಿದ್ದು, ಘನ ತ್ಯಾಜ್ಯಗಳನ್ನು ಬೇರ್ಪಡಿಸುವ ತಂತ್ರಜ್ಞಾನ ಹೊಂದಿವೆಯೇ ವಿನಃ ಚರಂಡಿ ನೀರಿನ ಕಲ್ಮಶಗಳನ್ನು ಬೇರ್ಪಡಿಸುವ ಸಾಮರ್ಥ್ಯ ಹೊಂದಿಲ್ಲ.

ಹರಿವಿನ ಕೊರತೆ
ಸಮಸ್ಯೆಯ ಮೂಲ ಇರುವುದು ಗಂಗೆಯ ಹರಿವಿನಲ್ಲಿ. ನದಿಯ ಶೇಕಡ 90ರಷ್ಟು ನೀರನ್ನು ಅದು ಅರ್ಧಮಟ್ಟಕ್ಕೆ ಹರಿಯುವಾಗ ಅಂದರೆ ಕಾನ್ಪುರ ತಲುಪುವ ಮೊದಲೇ ಕೃಷಿ ಉದ್ದೇಶಕ್ಕೆ ತಿರುಗಿಸಲಾ ಗುತ್ತದೆ. ಈ ಕಾರಣದಿಂದ ಇದು ಮಾಲಿನ್ಯವನ್ನು ತೆಗೆಹಾಕಲು ಅಥವಾ ವಿಷಕಾರಿ ಅಂಶವನ್ನು ದುರ್ಬಲಗೊಳಿಸುವ ಅವಕಾಶವೇ ಇಲ್ಲ. ನದಿಯ ನೈಸರ್ಗಿಕ ಹರಿವನ್ನು ಪುನರ್ ಸ್ಥಾಪಿಸುವ ಅಗತ್ಯವನ್ನು ತಜ್ಞರೂ ಒಪ್ಪಿಕೊಳ್ಳುತ್ತಾರೆ. ಆದರೆ ಜಲವಿದ್ಯುತ್ ಯೋಜನೆಗಾಗಿ ಅಣೆಕಟ್ಟುಗಳನ್ನು ಹಲವೆಡೆ ನಿರ್ಮಿಸಿ, ಮುಕ್ತ ಹರಿವನ್ನು ತಡೆಯಲಾಗುತ್ತಿದೆ.
ಈ ವರ್ಷ ನದಿ ನೀರಿನ ಮಟ್ಟ ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ರಾಕ್ಕ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಘಟಕ ಉತ್ಪಾದನೆ ಸ್ಥಗಿತಗೊಳಿಸಬೇಕಾಯಿತು. ಏಕೆಂದರೆ ಕಲ್ಲಿದ್ದಲು ತರುವ ನಾವೆಗಳು ನದಿ ದಾಟುವಷ್ಟೂ ನೀರು ಇರಲಿಲ್ಲ. ನದಿಪಾತ್ರದ ಎಲ್ಲ ಪ್ರದೇಶಗಳಲ್ಲಿ ಅಂತರ್ಜಲವನ್ನು ಕೃಷಿ ಉದ್ದೇಶಕ್ಕೆ ಮೇಲೆತ್ತಿ ಹರಿಸುವ ಕಾರಣದಿಂದ, ನದಿ ಮಟ್ಟ ಗಣನೀಯವಾಗಿ ಕುಸಿದಿತ್ತು. ಇದಕ್ಕಿಂತ ಹೆಚ್ಚಾಗಿ ಉತ್ತರಾಖಂಡದ ಗಂಗೋತ್ರಿ ಹಿಮಕಾಲುವೆ ವರ್ಷಕ್ಕೆ 20 ಮೀಟರ್‌ನಷ್ಟು ಕಡಿಮೆಯಾಗುತ್ತಿರುವುದರಿಂದ ನದಿ ಹರಿವಿನ ಪ್ರಮಾಣ ಕುಸಿದಿದೆ. ಆದರೆ ಗಂಗಾ ಕ್ರಿಯಾಯೋಜನೆಯ ಹೊಸ ಅವತರಣಿಕೆ ನದಿ ಹರಿವನ್ನು ಸುಧಾರಿಸುವ ಯಾವ ಯೋಜನೆಯನ್ನೂ ಒಳಗೊಂಡಿಲ್ಲ ಎಂದು ಪರಿಸರವಾದಿಗಳು ಅಭಿಪ್ರಾಯಪಡುತ್ತಾರೆ.

ಆರೋಗ್ಯ ಸಮಸ್ಯೆ
ಈ ನೀರನ್ನೇ ಜನ ಕುಡಿಯಲು, ಸ್ನಾನಕ್ಕೆ ಮತ್ತು ಬಟ್ಟೆ ತೊಳೆಯಲು ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ನದಿಗೆ ಸ್ವಯಂ ಪರಿಶುದ್ಧಗೊಳಿಸಿಕೊಳ್ಳುವ ಗುಣವಿದೆ ಎಂಬ ನಂಬಿಕೆ ಪ್ರಬಲವಾಗಿದ್ದರೂ, ವಿಷಕಾರಿ ಅಂಶಗಳು ರೋಗದ ಅಪಾಯವನ್ನು ಹರಡುತ್ತಲೇ ಇವೆ. ದೇಶದಲ್ಲಿ ಮೃತಪಡುತ್ತಿರುವ ಐದು ವರ್ಷಕ್ಕಿಂತ ಕೆಳಗಿನ ಪ್ರತಿ ಮೂರು ಮಕ್ಕಳ ಪೈಕಿ ಒಂದು ಮಗು ಅತಿಸಾರಕ್ಕೆ ಬಲಿಯಾಗುತ್ತಿದೆ. ಪರಾವಲಂಬಿ ಜೀವಿಯ ಸೋಂಕಿನಿಂದ ಉಂಟಾಗುವ ಭೇದಿಗೆ ಅಸಂಖ್ಯಾತ ಮಕ್ಕಳು ಬಲಿಯಾಗುತ್ತಿವೆ. ಗಂಗಾನದಿ ಪ್ರದೇಶದ ಜನ ದೇಶದ ಇತರ ಯಾವುದೇ ಭಾಗದ ಜನಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಅಪಾಯ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಕ್ಯಾನ್ಸರ್ ರಿಜಿಸ್ಟ್ರಿ ಕಾರ್ಯಕ್ರಮದ ಅಧ್ಯಯನದ ಪ್ರಕಾರ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ, ಪಶ್ಚಿಮ ಬಂಗಾಳ ಹಾಗೂ ಬಿಹಾರದ ಪ್ರವಾಹಪ್ರದೇಶಗಳಲ್ಲಿ ಆತಂಕಕಾರಿ ಪ್ರಮಾಣದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇಲ್ಲಿ ಕಿಡ್ನಿ, ಮೂತ್ರಕೋಶ, ಲಿವರ್, ಮೂತ್ರನಾಳ, ಚರ್ಮದ ಕ್ಯಾನ್ಸರ್ ಸಾಮಾನ್ಯ. ದಿಲ್ಲಿಯ ಮಹಿಳೆಯರಲ್ಲಿ ವಿಶ್ವದಲ್ಲೇ ಅತ್ಯಕ ಪ್ರಮಾಣದ ಮೂತ್ರಕೋಶ ಕ್ಯಾನ್ಸರ್ ಕಂಡುಬರುತ್ತದೆ.
ವಿಸ್ತೃತ ಆರೋಗ್ಯ ಪರಿಣಾಮಗಳೂ ಇವೆ. ಚರಂಡಿಗಳ ತ್ಯಾಜ್ಯಗಳು ಕೆಡಿಎನ್-1 ಎಂಬ ಜೀನ್‌ಗಳನ್ನು ಹರಡುತ್ತಿದ್ದು, ಸೂಪರ್‌ಬಗ್ ಬ್ಯಾಕ್ಟೀರಿಯಾಗಳನ್ನು ಇದು ಒಳಗೊಂಡಿರುತ್ತದೆ. ಇದು ಯಾವುದೇ ಬಗೆಯ ಆ್ಯಂಟಿಬಯೋಟಿಕ್ಸ್‌ಗೆ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದು ದಿಲ್ಲಿಯ ಯಮುನಾ ತೀರದಲ್ಲಿ ಹಾಗೂ ಗಂಗೆಯ ಮೇಲ್ಭಾಗದ ಯಾತ್ರಾಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲ ಸ್ಥಳೀಯ ಅಧ್ಯಯನಗಳನ್ನು ಹೊರತುಪಡಿಸಿ, ಇವುಗಳ ಪರಿಣಾಮವನ್ನು ನಿಖರವಾಗಿ ಅಧ್ಯಯನ ಮಾಡಿಲ್ಲ.

ಸಾಮ್ರಾಜ್ಯಶಾಹಿ ಪರಂಪರೆ
‘‘ಗಂಗೆ ಎದುರಿಸುತ್ತಿರುವ ಹಲವು ಸಮಸ್ಯೆಗಳು ಸಾಮ್ರಾಜ್ಯಶಾಹಿ ಆಡಳಿತ ಕಾಲದಿಂದಲೂ ಇವೆ’’ ಎಂದು ರುದ್ರ ಹೇಳುತ್ತಾರೆ. ಬ್ರಿಟಿಷ್ ಅಕಾರಾವಯಲ್ಲಿ 19ನೆ ಶತಮಾನದ ಮೊದಲಾರ್ಧದಲ್ಲಿ, ಕೃಷಿ ಉದ್ದೇಶಕ್ಕೆ ನೀರು ಹರಿಸುವ ಸಲುವಾಗಿ ನೂರಾರು ಮೈಲು ಉದ್ದದ ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಈ ಮೂಲಕ ನದಿಯನ್ನು ಮಾಲಿನ್ಯ ನಿವಾರಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು. ಸಾಮ್ರಾಜ್ಯಶಾಹಿ ಆಡಳಿತಗಾರರು ಗಂಗೆಯ ನೈಸರ್ಗಿಕ ಹರಿವಿಗೆ ತಡೆ ಉಂಟು ಮಾಡಿ ಗಂಗಾನದಿ ತಟದ ವಿಶಾಲ ಪ್ರದೇಶದಲ್ಲಿ ಲವತ್ತಾದ ಮೆಕ್ಕಲು ಮಣ್ಣು ಹರಡುವ ನೈಸರ್ಗಿಕ ಪ್ರಕ್ರಿಯೆಗೆ ತಡೆಯೊಡ್ಡಿ, ಬಂಧಕಗಳನ್ನು ನಿರ್ಮಿಸಿದರು. ಇದು ಆರಂಭಿಕ ಹಂತದಲ್ಲಿ ಜನರನ್ನು ಪ್ರವಾಹದಿಂದ ರಕ್ಷಿಸಲು ಸಮರ್ಥವಾದರೂ, ದೀರ್ಘಾವಯಲ್ಲಿ ನದಿಪ್ರದೇಶದಲ್ಲಿ ಮಣ್ಣು ಸಂಗ್ರಹವಾಗಿ ನದಿಮಟ್ಟ ಮೇಲೆ ಬಂದು ಹೆಚ್ಚಿನ ಪ್ರಮಾಣದ ಪ್ರವಾ ಹಕ್ಕೆ ಕಾರಣವಾಯಿತು. ಮಾಲಿನ್ಯಕಾರಕ ಅಂಶಗಳನ್ನು ಕೊಚ್ಚಿಕೊಂಡು ಹೋಗುವ ಕಡಿಮೆ ಪ್ರಮಾಣದ ಪ್ರವಾಹದ ಮಹತ್ವದ ಅರಿವನ್ನು ಜನ ಮನಗಾಣದಾದರು. ಸ್ವಾತಂತ್ರ ಬಂದ ಬಳಿಕ ಕೂಡಾ ನದಿ ನಿರ್ವಹಣೆಗೆ ಪಾಶ್ಚಾತ್ಯ ಸಿದ್ಧಾಂತವನ್ನೇ ಅನುಸರಿಸಲಾಯಿತು. ಆದರೆ ಗಂಗಾನದಿ ವಿಭಿನ್ನ ಜಲಶಾಸವನ್ನು ಹೊಂದಿದೆ.
ಈಗಂತೂ ಕೈಗಾರಿಕೆಗಳು ಹಾಗೂ ಜನ ನದಿಹಾಸಿನ ಮಧ್ಯ ದಲ್ಲೇ ನೆಲೆಸಿದ್ದಾರೆ. ದೇಶದ ಪ್ರಮುಖ ರೈಲು ಹಾಗೂ ರಸ್ತೆ ಮೂಲಸೌಕರ್ಯ ನದಿ ದಂಡೆಯಲ್ಲೇ ಅಭಿವೃದ್ಧಿಯಾಗಿದೆ.
‘‘ಇದೀಗ ಗಂಗೆ ಸರಾಗವಾಗಿ ಹರಿಯುವಂತೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ನದಿ ವ್ಯವಸ್ಥೆಯ ನೈಸರ್ಗಿಕ ಕಾರ್ಯನಿರ್ವಹಣೆ ವಿಧಾನವನ್ನು ಪುನರುಜ್ಜೀವನಗೊಳಿಸುವುದು’’ ಎಂದು ರುದ್ರ ಹೇಳುತ್ತಾರೆ. ನದಿಯ ಪ್ರವಾಹ ಪ್ರದೇಶವನ್ನು ಮುಕ್ತಗೊಳಿಸಿ, ಜೌಗು ಪ್ರದೇಶಗಳನ್ನು ಸಹಜ ಸೋಸುವಿಕೆಗೆ ಅನುವು ಮಾಡಿಕೊಡಬೇಕು. ಜತೆಗೆ ಪ್ರತಿ ವರ್ಷ ಕೆಳಮಟ್ಟದ ಪ್ರವಾಹಕ್ಕೆ ಅವಕಾಶ ಮಾಡಿಕೊಡುವ ಮೂಲಕ ವಿಷಕಾರಿ ಹಾಗೂ ಮಾಲಿನ್ಯಕಾರಕ ಅಂಶಗಳನ್ನು ಕೊಚ್ಚಿಕೊಂಡು ಹೋಗಲು ಅವಕಾಶ ನೀಡಬೇಕು.
 

Writer - ಬೆತ್ ವಾಕರ್

contributor

Editor - ಬೆತ್ ವಾಕರ್

contributor

Similar News