ಹರಪ್ಪ ನಾಗರಿಕತೆ ಸುನಾಮಿಯಿಂದ ನಾಶ: ಅಧ್ಯಯನ

Update: 2016-08-30 17:34 GMT

ಪಣಜಿ, ಆ.30: ಹರಪ್ಪ ನಾಗರಿಕತೆಯ 5ನೆ ಅತಿ ದೊಡ್ಡ ನಿವೇಶನವಾಗಿದ್ದ, ಗುಜರಾತ್‌ನ ಧೊಲವಿರ ಬಂದರು ಪಟ್ಟಣವು ಭಾರೀ ಸುನಾಮಿಯೊಂದರಿಂದ ನಾಶವಾಗಿರ ಬೇಕೆಂದು ಸಿಎಸ್‌ಐಆರ್ ರಾಷ್ಟ್ರೀಯ ಸಾಗರ ಶಾಸ್ತ್ರ ಸಂಸ್ಥೆ(ಎನ್‌ಐಒ) ಶಂಕಿಸಿದೆ.

ಧೊಲವಿರ ಹರಪ್ಪ ನಾಗರಿಕತೆಯ ಕಾಲದ ಒಂದು ಪುರಾತನ ನಗರದ ನಿವೇಶನವಾಗಿದ್ದು, ಅವರ ಅತಿ ದೊಡ್ಡ ಬಂದರು ಪಟ್ಟಣವಾಗಿತ್ತು.
ಈ ಪ್ರದೇಶದಲ್ಲಿ ಭಾರೀ ಸುನಾಮಿ ಸಾಮಾನ್ಯವಾಗಿತ್ತೆಂಬುದನ್ನು ಫಲಿತಾಂಶ ಸ್ಪಷ್ಟವಾಗಿ ಸೂಚಿಸುತ್ತದೆ. ಹರಪ್ಪ ನಾಗರಿಕರಿಗೆ ಸುನಾಮಿಯ ಪ್ರಬಲ ಬೆದರಿಕೆಯ ಅರಿವಿತ್ತು ಮಾತ್ರವಲ್ಲದೆ, ಅವರು ಕರಾವಳಿ ವಿಕೋಪ ಪ್ರಬಂಧನದ ಆದ್ಯರೂ ಆಗಿದ್ದರೆಂಬುದನ್ನು ಧೊಲವಿರದ ದಪ್ಪ ಗೋಡೆಯು ತೋರಿಸುತ್ತದೆಂದು ಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ.
ಧೊಲವಿರ, ಕನಿಷ್ಠ ಭಾಗವಾದರೂ ಅಂತಹ ಸುನಾಮಿಯೊಂದರಿಂದ ನಾಶ ವಾಗಿರಬಹುದೆಂಬ ಸಾಧ್ಯತೆಯನ್ನು ಈ ಅಧ್ಯಯನವು ತೆರೆದಿಟ್ಟಿದೆಯೆಂಬುದು ಅತಿ ಮುಖ್ಯವಾಗಿದೆಯೆಂದು ಎನ್‌ಐಒದ ನಿರ್ದೇಶಕ ಡಾ. ಎಸ್‌ಡಬ್ಲುಎ ನಖ್ವಿ ನಿನ್ನೆ ಹೇಳಿದ್ದಾರೆ.
ಗೋವಾ ಮೂಲದ ಸಂಸ್ಥೆಯ ವಿಜ್ಞಾನಿ ಗಳು ಕೈಗೊಂಡಿದ್ದ ವಿಸ್ತೃತ ಅಧ್ಯಯನದ ವಿವರವನ್ನು ಅವರು ಹಂಚಿಕೊಳ್ಳುತ್ತಿದ್ದರು.
ಧೋವಿರದ ಗೋಡೆಯ ನೈಜ ಉದ್ದೇಶ ವೇನೆಂಬುದು ಗಮನಾರ್ಹ ಚರ್ಚೆಯ ವಿಷಯವಾಗಿರುವಾಗಲೇ ರಾಜೀವ್ ನಿಗಂ ನೇತೃತ್ವದ ವಿಜ್ಞಾನಿಗಳ ತಂಡ ಅಲ್ಗ್ ಅಧ್ಯಯನಕ್ಕಾಗಿ ಹೋಗಿತ್ತು.
ಈ ಸುಯೋಜಿತ ನಾಗರಿಕ ವಸಾಹತು ಈ ಪುರಾತತ್ವ ಉತ್ಖನನಕ್ಕಿಂತ 5 ಸಾವಿರದಿಂದ 3,450 ವರ್ಷಗಳ ಮೊದಲು 1,500 ವರ್ಷ ಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ನಗರದಲ್ಲಿ ಕೋಟೆ, ಮಧ್ಯದ ಪಟ್ಟಣ ಹಾಗೂ ಕೆಳಗಿನ ಪಟ್ಟಣಗಳೆಂಬ 3 ಭಾಗಗಳಿದ್ದುದು ಉತ್ಖನನದಿಂದ ತಿಳಿದು ಬಂದಿದೆಯೆಂದು ನಖ್ವಿ ವಿವರಿಸಿದ್ದಾರೆ.
ಸಂಘರ್ಷಗಳು ಸಾಮಾನ್ಯವಾಗಿದ್ದ ಹಾಗೂ ಶಸ್ತ್ರಾಸ್ತ್ರಗಳು ಹೆಚ್ಚು ವಿನಾಶಕಾರಿಗಳಾಗಿದ್ದ ಚಾರಿತ್ರಿಕ ಕಾಲದಲ್ಲೂ ರಕ್ಷಣಾ ಕ್ರಮವಾಗಿ, ಧೊಲವಿರದಲ್ಲಿರುವಂತಹ 14-18 ಮೀ. ದಪ್ಪದ ವಿಶಿಷ್ಟ ಗೋಡೆಗಳಿರಲಿಲ್ಲವೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News