‘ಬುರ್ಕಿನಿ’ ನಿಷೇಧ ತೆರವನ್ನು ಸ್ವಾಗತಿಸಿದ ವಿಶ್ವಸಂಸ್ಥೆ

Update: 2016-08-30 18:21 GMT

ಜಿನೇವ, ಆ. 30: ಸಂಪೂರ್ಣ ಮೈಮುಚ್ಚುವ ಈಜುಡುಗೆ ‘ಬುರ್ಕಿನಿ’ಯ ಮೇಲೆ ಫ್ರಾನ್ಸ್ ಸರಕಾರ ವಿಧಿಸಿರುವ ನಿಷೇಧವನ್ನು ಅಮಾನತಿನಲ್ಲಿಟ್ಟಿರುವ ಫ್ರಾನ್ಸ್‌ನ ಅತ್ಯುನ್ನತ ಆಡಳಿತಾತ್ಮಕ ನ್ಯಾಯಾಲಯದ ತೀರ್ಪನ್ನು ವಿಶ್ವಸಂಸ್ಥೆ ಮಂಗಳವಾರ ಸ್ವಾಗತಿಸಿದೆ.

ನಿಷೇಧವು ಧಾರ್ಮಿಕ ಅಸಹಿಷ್ಣುತೆಗೆ ಕಾರಣವಾಗುತ್ತದೆ ಎಂದು ಅದು ಎಚ್ಚರಿಸಿದೆ.

‘‘ಇಂಥ ನಿಷೇಧಗಳು ಭದ್ರತಾ ಪರಿಸ್ಥಿತಿಯನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಫ್ರಾನ್ಸ್‌ನಲ್ಲಿ ಧಾರ್ಮಿಕ ಅಸಹಿಷ್ಣುತೆಗೆ ಹಾಗೂ ಮುಸ್ಲಿಮರ ಮೇಲೆ ಕಳಂಕ ಹೊರಿಸುವುದಕ್ಕೆ ಕಾರಣವಾಗುತ್ತದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿಯ ವಕ್ತಾರ ರೂಪರ್ಟ್ ಕಾಲ್‌ವಿಲ್ ಸುದ್ದಿಗಾರರಿಗೆ ತಿಳಿಸಿದರು.

‘‘ಬುರ್ಕಿನಿ ನಿಷೇದ ಆದೇಶದಂಥ ವಸ್ತ್ರ ಸಂಹಿತೆಗಳು ಮಹಿಳೆಯರು ಮತ್ತು ಬಾಲಕಿಯರ ಮೇಲೆ ಪರಿಣಾಮಗಳನ್ನು ಬೀರುತ್ತವೆ. ಯಾವ ರೀತಿಯಲ್ಲಿ ಬಟ್ಟೆ ಧರಿಸಬೇಕು ಎನ್ನುವ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಸಾತಂತ್ರವನ್ನು ಅವರಿಗೆ ನಿರಾಕರಿಸುವ ಮೂಲಕ ಅವರ ಸ್ವಾಯತ್ತೆಯನ್ನು ಕಡೆಗಣಿಸಿದಂತಾಗುತ್ತದೆ. ಇದು ಸ್ಪಷ್ಟವಾಗಿ ಅವರ ವಿರುದ್ಧದ ತಾರತಮ್ಯವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News