ಕೇಂದ್ರ ಸರಕಾರಿ ನೌಕರರಿಗೆ ಚತುರ್ಥಿಗೆ ಮೊದಲೇ ದೀಪಾವಳಿ

Update: 2016-08-30 18:26 GMT

ಹೊಸದಿಲ್ಲಿ,ಆ.30: ಕೇಂದ್ರ ಸರಕಾರದ ನೌಕರರ ಪಾಲಿಗೆ ಗಣೇಶ ಚತುರ್ಥಿಗಿಂತ ಮೊದಲೇ ದೀಪಾವಳಿ ಸಂಭ್ರಮ ಬಂದುಬಿಟ್ಟಿದೆ. ಕಳೆದೆರಡು ವರ್ಷಗಳಿಂದಲೂ ಬಾಕಿಯಿದ್ದ ವಾರ್ಷಿಕ ಬೋನಸ್ ಪಾವತಿ ಮಾಡಲು ಮೋದಿ ಸರಕಾರವು ನಿರ್ಧರಿಸಿದೆ.

ಈ ಡಬಲ್ ಬೋನಸ್ ಪಾವತಿಯಿಂದ ಸರಕಾರದ ಬೊಕ್ಕಸಕ್ಕೆ 1,920 ಕೋ.ರೂ.ಗಳ ಹೊರೆ ಬೀಳಲಿದೆ.

ಕೇಂದ್ರ ಸರಕಾರಿ ನೌಕರರಿಗೆ ಪರಿಷ್ಕೃತ ನಿಯಮಾವಳಿಗಳಂತೆ 2014-15 ಮತ್ತು 2015-16ನೇ ಸಾಲುಗಳ ಬೋನಸ್ ಅನ್ನು ಬಿಡುಗಡೆಗೊಳಿಸಲಾಗುವುದು. ಇದು ಕಳೆದ ಎರಡು ವರ್ಷಗಳಿಂದಲೂ ಬಾಕಿಯಿತ್ತು. ಇದರ ನಂತರ ಏಳನೇ ವೇತನ ಆಯೋಗದಡಿ ಬೋನಸ್ ನೀಡಲಾಗುವುದು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಬಾಕಿಯಿರುವ ಬೋನಸ್ ಪಾವತಿ ಕುರಿತ ಪ್ರಕರಣಗಳನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಜೇಟ್ಲಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News